Home latest Department of Food: ಬೆಳ್ಳಂಬೆಳಗ್ಗೆಯೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರಿಗೆ ಬಿಗ್ ಶಾಕ್...

Department of Food: ಬೆಳ್ಳಂಬೆಳಗ್ಗೆಯೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರಿಗೆ ಬಿಗ್ ಶಾಕ್ !!

Department of Food

Hindu neighbor gifts plot of land

Hindu neighbour gifts land to Muslim journalist

Department of Food: ಡಿಸೆಂಬರ್‌ 3 ರ ಇಂದು ಹೊಸ ರೇಷನ್‌ ಕಾರ್ಡ್‌ ಗೆ ಅರ್ಜಿ ಹಾಕಲು ಆಹಾರ ಇಲಾಖೆಯು( Department of Food) ಯಾವುದೇ ರೀತಿ ಅವಕಾಶ ನೀಡಲಾಗಿಲ್ಲ, ಇದು ಬರೀ ಸುಳ್ಳು ಸುದ್ದಿ ಎಂದು ಆಹಾರ ಸಚಿವ ಮುನಿಯಪ್ಪ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಡಿಸೆಂಬರ್ 3 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ. ಅಂತೆಯೇ ಇಂದು ಹವಲರು ಹೊಸ ಕಾರ್ಡ್ ಗೆ ಅರ್ಜಿ ಹಾಕಲು ಕಾತರರಾಗಿದ್ದರು. ಆದರೀಗ ಈ ಕುರಿತು ಆಹಾರ ಇಲಾಖೆಯು ಹೊಸ ಆದೇಶ ಹೊರಡಿಸಿದ್ದು ಅರ್ಜಿ ಹಾಕಲು ಅವಕಾಶ ನೀಡಲಾಗಿದೆ ಎಂಬುದು ವದಂತಿಯಾಗಿದೆ. ಇದನ್ನು ನಂಬಬೇಡಿ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆಹಾರ ಇಲಾಖೆಯು ನಮ್ಮ ಇಲಾಖೆಯ ವತಿಯಿಂದ ಯಾವುದೇ ರೀತಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶವನ್ನು ನೀಡಿಲ್ಲ. ಒಂದು ವೇಳೆ ಹೊಸ ಕಾರ್ಡ್ಗಳಿಗೆ ಅರ್ಜಿ ಹಾಕಲು ಅವಕಾಶ ನೀಡಿದರೂ ಹಾಗೂ ತಿದ್ದುಪಡಿ ಮಾಡಲು ಯಾವುದೇ ರೀತಿ ಅವಕಾಶ ಕಲ್ಪಿಸಿದರು ಅದು ನಮ್ಮ ಇಲಾಖೆ ವೆಬ್ಸೈಟ್ನಲ್ಲಿ ಮಾತ್ರ ನಾವು ಪ್ರಕಟಿಸುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಮಾಹಿತಿಗಳನ್ನು ಹಂಚಿಕೊಳ್ಳುವುದಿಲ್ಲ. ಒಂದು ವೇಳೆ ಬಂದರೆ ಅದು ಸುಳ್ಳು ವದಂತಿಯಾಗಿರುತ್ತದೆ ದಯವಿಟ್ಟು ನಂಬಬೇಡಿ ಎಂದು ಹೇಳಿದೆ.

ಇದನ್ನೂ ಓದಿ: Government employee :ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ- ಕೊನೆಗೂ ದಶಕಗಳ ಬೇಡಿಕೆ ಈಡೇರಿಸಿದ ಸರ್ಕಾರ!!