Chanakya Niti: ಮಹಿಳೆಯರೇ ನಿಮ್ಮಲ್ಲಿ ಈ 3 ಗುಣಗಳಿದ್ದರೆ ಎಂದಿಗೂ ಮನೆ ಏಳಿಗೆ ಹೊಂದಲ್ಲ !!

Chanakya Niti: ಆಚಾರ್ಯ ಚಾಣಕ್ಯರು (Chanakya)ಆದರ್ಶ ಜೀವನ ನಡೆಸಲು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಇಂದಿಗೂ ಈ ವಿಚಾರಗಳು ಜಗತ್ತಿಗೆ ಮಾರ್ಗದರ್ಶಿ ಸೂತ್ರವಾಗಿ(Chanakya Niti) ಉಳಿದಿದೆ. ಮನುಷ್ಯ ಶ್ರೇಷ್ಠನೆಂದೆನಿಸಿಕೊಳ್ಳುವುದು ಅವನ ಗುಣದಿಂದಲ್ಲ ಬದಲಿಗೆ ಅವನು ಮಾಡುವ ಕಾರ್ಯಗಳಿಂದ ಎಂದು ಚಾಣಕ್ಯ ಹೇಳಿದ್ದಾರೆ. ನಾವು ಮಾಡುವ ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲವು ವರ್ತಮಾನದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದಲ್ಲಿಯೂ ಕಂಡುಬರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.

ಚಾಣಕ್ಯರು ನಾವು ನಡೆಸುವ ಜೀವನ ವಿಧಾನ, ಹಣವನ್ನು(Money Savings)ಉಳಿಸುವ ರೀತಿ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವಿಚಾರ ಸೇರಿದಂತೆ ಬಹಳಷ್ಟು ವಿಷಯಗಳ ಬಗ್ಗೆ ಆಚಾರ್ಯ ಚಾಣಕ್ಯರು ಮಾಹಿತಿ ನೀಡಿದ್ದಾರೆ.ಆತ್ಮೀಯವಾಗಿ ಮಾತನಾಡುವ ಮತ್ತು ಪ್ರೀತಿಯಿಂದ ವರ್ತಿಸುವ ವ್ಯಕ್ತಿ ಜೀವನದಲ್ಲಿ ಯಾವುದೇ ತೊಂದರೆಗೆ ಸಿಲುಕುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.ಆದರೆ, ಮಹಿಳೆಯರಿಗೆ ಯಾವ ಮೂರು ಗುಣಗಳು ಇರಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಅದು ಯಾವುದೆಲ್ಲ ಗೊತ್ತಾ?

women health: 40 ವರ್ಷದ ಮಹಿಳೆಯರಲ್ಲಿ ಈ ಲಕ್ಷಣ ಕಾಣಿಸಿದ್ರೆ ಇದೇ ನೋಡಿ ಕಾರಣ !!  ಸರಿದೂಗಿಸಲು ತಕ್ಷಣ ಹೀಗೆ ಮಾಡಿ

# ಸುಳ್ಳು ಹೇಳುವ ಗುಣ
ಆಚಾರ್ಯ ಚಾಣಕ್ಯನ ಪ್ರಕಾರ,
ಸುಳ್ಳು ಹೇಳುವ ಮಹಿಳೆಯರ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲ. ಸುಳ್ಳು ಹೇಳುವ ಪ್ರವೃತ್ತಿ ಇರುವವರು ಯಾವಾಗಲೂ ಜಗಳವಾಡುವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಈ ರೀತಿಯ ಜನರೊಂದಿಗೆ ಜೀವಿಸುವುದು ಕಷ್ಟ ಎಂದಿರುವ ಚಾಣಕ್ಯ, ಈ ರೀತಿ ಜಗಳವಾಡುವ ಮಹಿಳೆಯರ ಮನೆಯಲ್ಲಿ ಶಾಂತಿ ಹಾಗೂ ಪ್ರಗತಿ ಕಂಡುಬರಲು ಸಾಧ್ಯವಿಲ್ಲ ಎಂದಿದ್ದಾರೆ.

# ಕಿರಿಕಿರಿಯ ಗುಣಮಟ್ಟ
ಯಾವ ಮಹಿಳೆ ಭಾವೋದ್ರಿಕ್ತವಾಗಿ ಹಾಗೂ ಕಟುವಾಗಿ ಮಾತನಾಡುವ ಪ್ರವೃತ್ತಿ ಹೊಂದಿರುತ್ತಾಳೋ ಆ ಮಹಿಳೆಯ ಮನೆಯಲ್ಲಿ ಶಾಂತಿ ನೆಲೆಸದು. ಮಹಿಳೆಗೆ ತಾಳ್ಮೆ ಸಹನೆ ಅವಶ್ಯಕ. ಮಹಿಳೆ ಕೋಪದಿಂದ ಮಾತನಾಡಿದಾಗ ಹಿರಿಯರು, ಪತಿ ಕೋಪಿಸಿಕೊಳ್ಳಬಹುದು. ಹೀಗಾಗಿ , ಈ ಮನಸ್ಥಿತಿ ಇರುವ ಮಹಿಳೆಯ ಮನೆಯಲ್ಲಿ ಶಾಂತಿ ಏಳಿಗೆ ಕಾಣಲು ಸಾಧ್ಯವಿಲ್ಲ.

# ಸ್ವಾರ್ಥ
ಸ್ವಾರ್ಥ ಪ್ರವೃತ್ತಿ ಇರುವ ಮಹಿಳೆ ಎಂದಿಗೂ ಕೂಡ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಈ ರೀತಿಯ ಪ್ರವೃತ್ತಿ ಇರುವ ಮಹಿಳೆಯ ಮನೆಯಲ್ಲಿ ಆಕೆಯ ಸ್ವಾರ್ಥ ಸಂತೋಷಕ್ಕೆ ಅಡ್ಡಿಯಗುತ್ತದೆ ಅಡ್ಡಿಯಾಗುತ್ತದೆ. ಈ ರೀತಿಯ ಪ್ರವೃತ್ತಿಯಿದ್ದರೆ, ಆ ಮನೆಯ ಮಗಳು ದಾನ ನೀಡುವಾಗ ಇಲ್ಲವೇ ಖರ್ಚು ಮಾಡುವಾಗ ಸ್ವಾರ್ಥ ಪ್ರವೃತ್ತಿ ತೋರುತ್ತಾಳೆ. ಹೀಗಾಗಿ, ಈ ಮನೆಯಲ್ಲಿ ಶಾಂತಿ ಹಾಗೂ ಮನೆ ಏಳಿಗೆ ಕಾಣಲು ಸಾಧ್ಯವಿಲ್ಲ.

Leave A Reply

Your email address will not be published.