Home latest Jai Shree Ram: ಜೈ ಶ್ರೀರಾಮ್ ಹೇಳು ಎಂದು ಹಿಂಸೆ – ಅಂಧ ಮುಸ್ಲಿಂ ವ್ಯಕ್ತಿಗೆ...

Jai Shree Ram: ಜೈ ಶ್ರೀರಾಮ್ ಹೇಳು ಎಂದು ಹಿಂಸೆ – ಅಂಧ ಮುಸ್ಲಿಂ ವ್ಯಕ್ತಿಗೆ ಥಳಿತ !!

Jai Shree Ram

Hindu neighbor gifts plot of land

Hindu neighbour gifts land to Muslim journalist

Jai Shree Ram: ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ (Gangavati News) ಯುವಕರ ತಂಡವೊಂದು, ಗಂಗಾವತಿಯ ಮಹಿಬೂಬ ನಗರದ ನಿವಾಸಿ ಹುಸೇನಸಾಬ ಎಂಬ ವೃದ್ಧನನ್ನು (Blind Muslim old man) ಅಪಹರಿಸಿ ಜೈ ಶ್ರೀ ರಾಮ್‌ (Jai Shree Ram) ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿದ ಘಟನೆ ನಡೆದಿದೆ.

ಮಾಹಿತಿ ಪ್ರಕಾರ,ಹುಸೇನ ಸಾಬ ಅವರಿಗೆ ಎರಡೂ ಕಣ್ಣುಗಳಲ್ಲಿ ದೃಷ್ಟಿ ಇಲ್ಲ. ಅಂಧರಾಗಿರುವ ಅವರು ನವೆಂಬರ್‌ 25ರಂದು ಕಷ್ಟಪಟ್ಟು ವಾಹನಗಳನ್ನು ಬಳಸಿ ಪೇಟೆ ಕಡೆಗೆ ಬಂದಿದ್ದರು. ಅಲ್ಲಿಂದ ಮನೆಗೆ ತೆರಳಲು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಕೆಲವರು, ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅವರ ಗಡ್ಡಕ್ಕೆ ಬೆಂಕಿ ಹಚ್ಚಲಾಗಿದೆ. ಆದರೆ, ಅವರು ಕೂಡಲೇ ಅದನ್ನು ನಂದಿಸಿಕೊಂಡಿದ್ದಾರೆ. ಬಳಿಕ ಹಲ್ಲೆ ಮಾಡಲಾಗಿದೆ. ಹುಸೇನ ಸಾಬ ಅವರ ಬೆನ್ನಿನಲ್ಲಿ ಹಲ್ಲೆಯಿಂದಾದ ಗಾಯದ ಗುರುತುಗಳು ಕಂಡುಬಂದಿವೆ.

ಇದನ್ನು ಓದಿ: CBSE Board ಪರೀಕ್ಷೆಯಲ್ಲಿ ಬದಲಾವಣೆ; 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!

ನವೆಂಬರ್‌ 25ರಂದು ಸಂಜೆ ಈ ಘಟನೆ ನಡೆದಿದ್ದು, ಆವತ್ತು ರಾತ್ರಿ ಇಡೀ ಹುಸೇನಸಾಬ ಅವರು ಆ ಗುಡ್ಡದಲ್ಲೇ ಇದ್ದರು. ಬೆಳಗ್ಗೆ ಕುರಿ ಕಾಯುವವರು ಬಂದು ನೋಡಿದಾಗ ಇವರು ಬಿದ್ದುಕೊಂಡಿರುವುದು ಕಂಡಿದೆ. ಅವರು ಹುಸೇನ್‌ ಸಾಬ್‌ ಅವರನ್ನು ಮನೆಗೆ ಸೇರಿಸಿದ್ದಾರೆ. ಮನೆಯಲ್ಲಿ ಹೀಗೆಲ್ಲ ನಡೆದಿದೆ ಎಂದು ಹೇಳಿದ ಬಳಿಕ ಈಗ ಗಂಗಾವತಿ ನಗರ ಠಾಣೆಗೆ ದೂರು ನೀಡಲಾಗಿದೆ.

ಆದರೆ ಕಣ್ಣೇ ಕಾಣದ ಅಂಧನಿಗೆ ಹಲ್ಲೆ ಮಾಡುವ ಉದ್ದೇಶವಾದರೂ ಏನು ಎನ್ನುವುದು ಸ್ಪಷ್ಟವಾಗಿಲ್ಲ. ನಿಜಕ್ಕೂ ಯಾರಾದರೂ ಕುಡಿತ ಇಲ್ಲವೇ ನಶೆಯ ಮತ್ತಿನಲ್ಲಿ ಈ ರೀತಿ ನಡೆದುಕೊಂಡರೇ ಎನ್ನುವ ಸಂಶಯವೂ ಇದೆ. ಆ ರೀತಿ ನಡೆದಿದ್ದರೆ ಅವರನ್ನು ಬೈಕ್‌ ಮೂಲಕ ಎತ್ತಾಕಿಕೊಂಡ ಪ್ರದೇಶದಲ್ಲಿ ಯಾವುದಾದರೂ ಸಿಸಿಟಿವಿಯಲ್ಲಿ ಈ ಘಟನೆ ದಾಖಲಾಗಿರುವ ಸಾಧ್ಯತೆ ಇದೆ. ಇದನ್ನು ಗಮನಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.
ಒಂದು ವೇಳೆ ಹಲ್ಲೆ ನಡೆದಿರುವುದು ನಿಜವೇ ಆಗಿದ್ದರೆ ಹಲ್ಲೆ ಮಾಡಿದವರು ಯಾರು? ಏನು ಉದ್ದೇಶ ಎನ್ನುವುದು ಅಪರಾಧಿಗಳ ಬಂಧನದ ಬಳಿಕ ಸ್ವಷ್ಟವಾಗಲಿದೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್- 60 ವರ್ಷ ಮೇಲ್ಪಟ್ಟವರಿಗೆ ಫ್ರೀ ಆಗಿ ಸಿಗುತ್ತೆ ಪೆನ್ಶನ್ !! ಕೇಂದ್ರದಿಂದ ಹೊಸ ಘೋಷಣೆ