CBSE Board ಪರೀಕ್ಷೆಯಲ್ಲಿ ಬದಲಾವಣೆ; 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!
CBSE: ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು (CBSE Board Exams) ಬರೆಯುವ ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿಯೊಂದು ಬಂದಿದೆ. ಇನ್ನು ಮುಂದೆ ಯಾವುದೇ ಡಿವಿಷನ್/ಡಿಸ್ಟಿಂಕ್ಷನ್/ ಅಗ್ರೇಗೇಟ್ (Division/distinction/aggregate) ನೀಡಲಾಗುವುದಿಲ್ಲ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (The Central Board Of Secondary Education CBSE) ಹೇಳಿದೆ.
ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಶೇಕಡಾವಾರು ಲೆಕ್ಕಾಚಾರದ ಮಾನದಂಡಗಳನ್ನು ವಿವರಿಸಲು ಮಂಡಳಿಯು ವಿವಿಧ ಜನರಿಂದ ವಿನಂತಿಗಳನ್ನು ಸ್ವೀಕರಿಸುತ್ತಿದೆ. ಅಧಿಸೂಚನೆಯು ಹೀಗೆ ಹೇಳಿದೆ, “ಈ ನಿಟ್ಟಿನಲ್ಲಿ, ಪರೀಕ್ಷೆಯ ಅಧ್ಯಾಯ 7 ರ ಉಪ-ವಿಭಾಗ 40.1 (iii) ಡಿವಿಷನ್/ಡಿಸ್ಟಿಂಕ್ಷನ್/ಅಗ್ರೆಗೇಟ್ ನೀಡುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
World Cup: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ಮಾರ್ಷ್ ನೀಡಿದ್ರು ಫೋಟೋ ಕುರಿತು ಬಿಗ್‌ಅಪ್ಡೇಟ್!!!
ಮುಂದಿನ ವರ್ಷ ನಡೆಯಲಿರುವ ಪರೀಕ್ಷೆಯ ಡೇಟ್‌ಶೀಟ್ ಅನ್ನು ಸಿಬಿಎಸ್‌ಇ ಮಂಡಳಿ ಬಿಡುಗಡೆ ಮಾಡಿದೆ. 10ನೇ ಮತ್ತು 12ನೇ ತರಗತಿಯ ವಿವರವಾದ ಡೇಟ್‌ಶೀಟ್ ಬಿಡುಗಡೆಯಾಗಲಿದೆ. ವಿಷಯವಾರು ಡೇಟ್‌ಶೀಟ್ ಅನ್ನು CBSE cbse.gov.in ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷ, CBSE ಬೋರ್ಡ್ 10 ಮತ್ತು 12 ನೇ ತರಗತಿಯಲ್ಲಿ 35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಟ್ಟಿಗೆ ನೋಂದಾಯಿಸಿದೆ. ಅಧಿಕಾರಿಗಳು ಶೀಘ್ರವೇ ವೇಳಾಪಟ್ಟಿ ಬಿಡುಗಡೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಗಂಭೀರವಾಗಿ ಪರೀಕ್ಷೆಗೆ ತಯಾರಿ ಆರಂಭಿಸಬೇಕು.
ಇದನ್ನು ಓದಿ: Crime News: ಚಕ್ಕುಲಿ ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷದ ಪುಟ್ಟ ಮಗು ಸಾವು!