Varanasi Crime News: ಒಂದು ವರ್ಷದಿಂದ ತಾಯಿಯ ಮೃತದೇಹದ ಬಳಿಯೇ ಇದ್ದ ಹೆಣ್ಣುಮಕ್ಕಳು; ಮನೆಗೆ ಬಂದ ಪೊಲೀಸರಿಗೆ ಶಾಕ್‌!!!

Varanasi Crime News: ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿಯ ಮೃತದೇಹದೊಂದಿಗೆ ಒಂದು ವರ್ಷ ವಾಸಿಸುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಬನಾರಸ್‌ನಲ್ಲಿ ನಡೆದ ಈ ಘಟನೆ ನಿಜಕ್ಕೂ ಜನರನ್ನು ಬೆಚ್ಚಿ ಬೀಳಿಸಿದೆ. ಸ್ನೇಹಿತರಿಗೆ, ಸಂಬಂಧಿಕರಿಗೆ, ಸುತ್ತಮುತ್ತಲಿನ ಜರಿಗೆ ಕೂಡಾ ಇದರ ಸುಳಿವು ಇರಲಿಲ್ಲ ಎನ್ನಲಾಗಿದೆ. ಮಹಿಳೆಯ ದೇಹವು ಅಸ್ಥಿಪಂಜರವಾಗಿ ಮಾರ್ಪಟ್ಟಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಆಶ್ಚರ್ಯಗೊಂಡಿದ್ದಾರೆ. ಹೆಣ್ಣು ಮಕ್ಕಳಿಬ್ಬರು ಮಾನಸಿಕ ಅಸ್ವಸ್ಥರು ಎನ್ನಲಾಗಿದೆ. ಹಾಗಾಗಿಯೇ ತಮ್ಮ ತಾಯಿಯ ಮರಣದ ಸುದ್ದಿಯನ್ನು ಯಾರಿಗೂ ತಿಳಿಸಿರಲಿಲ್ಲ. ತಂದೆ ಇಲ್ಲದ ಕಾರಣ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿಯೊಂದಿಗೆ ಮನೆಯಲ್ಲಿ ವಾಸ ಮಡುತ್ತಿದ್ದರು.

 

ಮದರ್ವಾ ನಿವಾಸಿ 52 ವರ್ಷದ ಮಹಿಳೆ ಉಷಾ ತಿವಾರಿ ಡಿಸೆಂಬರ್ 8, 2022 ರಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಠಾಣೆಯ ಮುಖ್ಯಸ್ಥರು ತಿಳಿಸಿದ್ದಾರೆ. ಉಷಾ ತಿವಾರಿ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಮೃತ ಮಹಿಳೆಯ ಇಬ್ಬರು ಪುತ್ರಿಯರ ವಯಸ್ಸು 19 ವರ್ಷ 27 ವರ್ಷ. ಇವರ ತಂದೆ ಕೂಡಾ ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸ ಮಾಡುತ್ತಿರಲಿಲ್ಲ. ಮನೆಯಲ್ಲಿ ತಾಯಿ ಮತ್ತು ಮಕ್ಕಳು ಮಾತ್ರ ವಾಸವಾಗಿದ್ದರು. ಹಾಗೆನೇ ಈ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಹೋಗುವುದು ಅಪರೂಪ ಎನ್ನಲಾಗಿದೆ.

ಆದರೆ ಕೆಲ ದಿನಗಳ ಹಿಂದೆ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು. ಹೆಣ್ಣು ಮಕ್ಕಳಿಬ್ಬರೂ ಅಕ್ಕಪಕ್ಕದ ಮನೆಯವರಿಂದ ಆಹಾರ ಪದಾರ್ಥಗಳನ್ನು ಕೇಳುತ್ತಿದ್ದರು. ಅನುಮಾನಗೊಂಡ ಅಕ್ಕಪಕ್ಕದವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯ ಮನೆಗೆ ಬಂದಿದ್ದಾರೆ.

ಆದರೆ ಹೆಣ್ಣು ಮಕ್ಕಳು ಮನೆಯ ಬಾಗಿಲು ತೆರೆಯಲಿಲ್ಲ. ನಂತರ ಪೊಲೀಸರು ಬಲವಂತವಾಗಿ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಅಸ್ಥಿಪಂಜರವಾದ ದೇಹದ ಜೊತೆ ಇರುವುದು ಕಂಡು ಬಂದಿದೆ. ಪೊಲೀಸರು ಅಸ್ಥಿಪಂಜರದಲ್ಲಿದ್ದ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಡಿಎನ್‌ಎ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: China Pneumonia Case: ಚೀನಾದ ನಿಗೂಢ ಕಾಯಿಲೆ ಭಾರತಕ್ಕೂ ಲಗ್ಗೆ! ಉತ್ತರಾಖಂಡದ ಇಬ್ಬರು ಮಕ್ಕಳಲ್ಲಿ ರೋಗ ಲಕ್ಷಣ ಪತ್ತೆ!!

Leave A Reply

Your email address will not be published.