Home latest Heart Attack: ಆರು ವರ್ಷದ ಮಗು ಹೃದಯಾಘಾತದಿಂದ ಸಾವು!

Heart Attack: ಆರು ವರ್ಷದ ಮಗು ಹೃದಯಾಘಾತದಿಂದ ಸಾವು!

Heart Attack

Hindu neighbor gifts plot of land

Hindu neighbour gifts land to Muslim journalist

Heart Attack: ದಿನೇ ದಿನೇ ಅತೀ ಚಿಕ್ಕ ವಯಸ್ಸಿನವರಲ್ಲಿ ಹೃದಯಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳಾದ ಅದರಲ್ಲೂ ಈ ಹಾರ್ಟ್ ಅಟ್ಯಾಕ್ ನಿಂದಾಗಿ (Heart Attack Signs) ಸಾವು ಉಂಟಾಗುತ್ತಿದೆ. ಇದೀಗ
ಮಧ್ಯಪ್ರದೇಶದ ಇಂದೋರ್‌ನಲ್ಲಿ ನೆಲೆಸಿರುವ ಉದ್ಯಮಿ ರಾಹುಲ್‌ ಜೈನ್‌ ಅವರ ಏಕೈಕ ಪುತ್ರ ವಿಹಾನ್‌ ಜೈನ್ ಹೃದಯಸ್ತಂಭನದಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾನೆ.

ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ವಿಹಾನ್ ಬಳಲುತ್ತಿದ್ದ. ಬಾಲಕನ ದೇಹ ತುಂಬಾ ಬಿಸಿಯಾಗಿದ್ದರಿಂದ ಜ್ವರ ಬಂದಿರಬಹುದು ಎಂದು ಮನೆಯಲ್ಲಿದ್ದ ಥರ್ಮಾಮೀಟರ್‌ನಲ್ಲಿ ಜ್ವರ ತಪಾಸಣೆ ಮಾಡಲಾಯಿತು. ಆದರೆ ಥರ್ಮಾಮೀಟರ್‌ನಲ್ಲಿನ ತಾಪಮಾನವು ಹುಡುಗನಿಗೆ ಜ್ವರ ಎಂದು ತೋರಿಸಲಿಲ್ಲ. ಇನ್ನು ಬಾಲಕನ ದೇಹ ಬಿಸಿ ಇದ್ದರಿಂದ ಪೋಷಕರು ಆತನನ್ನು ಇಂದೋರ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಬಾಲಕನ ಸ್ಥಿತಿ ಸುಧಾರಿಸಿದೆ.

ನಂತರ ಕುಟುಂಬ ಸದಸ್ಯರು ಯಾವುದೋ ಕಾರಣಕ್ಕೆ ದೆಹಲಿಗೆ ಹೋಗಬೇಕಾಯಿತು. ಅಲ್ಲಿ ಮಗು ವಿಹಾನ್ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿತು. ಕುಟುಂಬಸ್ಥರು ಅವರನ್ನು ದೆಹಲಿಯ ಆಸ್ಪತ್ರೆಗೆ ಕರೆದೊಯ್ದರು. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ನೀಡುತ್ತಿರುವಾಗ ಮಗುವಿನ ಹೃದಯ ಇದ್ದಕ್ಕಿದ್ದಂತೆ ನಿಂತುಹೋಯಿತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ರಕ್ಷಿಸಲು ಸಾಧ್ಯವಾಗದೆ, ಬಾಲಕನಿಗೆ ಹೃದಯಸ್ತಂಭನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆಯೇ ರಾಜ್ಯ ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಈ ದಿನದೊಳಗೆ ನಿಮ್ಮ ಜಮೀನು ಆಗಲಿದೆ ಸಕ್ರಮ !! ಕೃಷಿ ಸಚಿವರಿಂದ ಘೋಷಣೆ