Bagarhukum land: ಬೆಳ್ಳಂಬೆಳಗ್ಗೆಯೇ ರಾಜ್ಯ ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಈ ದಿನದೊಳಗೆ ನಿಮ್ಮ ಜಮೀನು ಆಗಲಿದೆ ಸಕ್ರಮ !! ಕೃಷಿ ಸಚಿವರಿಂದ ಘೋಷಣೆ

Karnataka revenue Department Minister Krishna byre Gowda big update about bagarhukum land issue

BagarHukum land: ಕರ್ನಾಟಕದಲ್ಲಿ ಬಗರ್‌ ಹುಕುಂ (BagarHukum land)ಭೂಮಿ ಮಾಲೀಕತ್ವದ ಗೊಂದಲ ಬಹಳ ವರ್ಷದಿಂದ ಇದೆ. ಬಡವರ ಹೆಸರಲ್ಲಿ ಸರ್ಕಾರಿ ಭೂಮಿ ಉಳ್ಳವರ ಪಾಲಾಗುತ್ತಿದೆ. ಇದನ್ನು ತಪ್ಪಿಸಲೆಂದೇ ಪ್ರತ್ಯೇಕ ಆ್ಯಪ್ ಅನ್ನು ಕರ್ನಾಟಕ ಕಂದಾಯ ಇಲಾಖೆ ರೂಪಿಸಿದೆ

ಭೂರಹಿತ ಸಾಗುವಳಿದಾರರ ಜಮೀನು ಸಕ್ರಮೀಕರಣಗೊಳಿಸುವಲ್ಲಿ (Bagar Hukum Land issue)ಸಾಕಷ್ಟು ಅಕ್ರಮಗಳು ನಡೆಯುತ್ತಿರುವುದು ವರದಿಯಾಗುತ್ತಿರುವ ಹಿನ್ನಲೆಯಲ್ಲಿ, ಎಲ್ಲಾ ತಾಲೂಕುಗಳಲ್ಲೂ ಶೀಘ್ರದಲ್ಲೇ ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡಿ ಮುಂದಿನ 8 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸುವ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡರವರು ಮಾಹಿತಿ ನೀಡಿದ್ದು, ಹೀಗಾಗಿ, ಬಗರ್ ಹುಕುಂ ಜಮೀನು ಸಕ್ರಮ ನಿರೀಕ್ಷೆಯಲ್ಲಿದ್ದ ರೈತರಿಗೆ ಖುಷಿಯ ಸುದ್ದಿ ಹೊರಬಿದ್ದಿದೆ.

ಒಬ್ಬ ವ್ಯಕ್ತಿ 25 ಅರ್ಜಿಗಳನ್ನು ಸಲ್ಲಿಸಿರುವುದು, ಸಾಗುವಳಿ ಮಾಡದಿರುವವರು ಅರ್ಜಿ ಹಾಕಿರುವುದು ಒಳಗೊಂಡಂತೆ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಹೊಸದಾಗಿ ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ 50 ಪ್ರಸ್ತಾವನೆಗಳು ಬಂದಿದ್ದು, ಅಷ್ಟು ಸಮಿತಿಗಳನ್ನು ರಚಿಸಲಾಗುವುದು ಎಂದಿದ್ದಾರೆ. ಇದರ ಜೊತೆಗೆ, ಅರ್ಹರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ತಹಶೀಲ್ದಾರ್ ಅವರು ಜಮೀನು ಮಹಜರ್ ಮಾಡಿ ಸಾಗುವಳಿ ಖಚಿತ ಪಡಿಸಲಿದ್ದಾರೆ. ಅಕ್ರಮ ತಡೆಯುವ ನಿಟ್ಟಿನಲ್ಲಿ ಇನ್ಮುಂದೆ ಬಗರ್ ಹುಕುಂ ಸಮಿತಿ ಸಭೆಗಳನ್ನು ಗಣಕೀಕೃತಗೊಳಿಸಲಾಗಲಿದ್ದು, ಹಾಜರಾತಿ ಬಯೋಮೆಟ್ರಿಕ್ ಮುಖಾಂತರ ಖಾತ್ರಿ ಮಾಡಲಾಗುತ್ತದೆ

ಇದನ್ನೂ ಓದಿ: Basavana gouda yatnal: ಡಿ ಕೆ ಶಿವಕುಮಾರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್ – ಕಾರಣ ಮಾತ್ರ ಅಚ್ಚರಿ !!

Leave A Reply

Your email address will not be published.