New Ration card: ಹೊಸ ರೇಷನ್ ಕಾರ್ಡ್ ವಿತರಣೆ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್- ಇಂತವರಿಗೆ ಮಾತ್ರ ಸಿಗುತ್ತೆ ಹೊಸ ಕಾರ್ಡ್ !!
Karnataka news government give big update about distribution of new Ration card
New Ration card distribution: ಇಂದು ಆಧಾರ್ ಕಾರ್ಡ್ ಅಷ್ಟೇ ಪ್ರಾಮುಖ್ಯತೆಯನ್ನು ರೇಷನ್ ಕಾರ್ಡ್ ಪಡೆದಿದೆ. ಸರ್ಕಾರದ ಯಾವುದೇ ಪ್ರಯೋಜನ ಪಡೆಯಬೇಕಾದರೂ ಆಧಾರ್ಕಾರ್ಡ್ ಜೊತೆ ರೇಷನ್ ಕಾರ್ಡ್ ಕೂಡ ಇಂಪಾರ್ಟೆಂಟ್. ಅಂತೆಯೇ ಇದೀಗ ಅನೇಕ ಮಂದಿ ಹೊಸ ರೇಷನ್ ಕಾರ್ಡ್(New Ration card) ಗೆ ಅರ್ಜಿ ಹಾಕಿದ್ದು, ಇದರ ವಿತರಣೆ ಬಗ್ಗೆ ಸರ್ಕಾರ ಬಿಗ್ ಅಪ್ಡೇಟ್ ನೀಡಿದ್ದು ಇಂತವರಿಗೆ ಮಾತ್ರ ಕಾರ್ಡ್ ವಿತರಿಸುವುದಾಗಿ ಹೇಳಿದೆ.
ಹೌದು, ಎಲ್ಲಾ ರೀತಿಯಿಂದಲೂ ಅನುಕೂಲ ಇದ್ದವರೂ ಕೂಡ ಸರ್ಕಾರದ ಸವಲತ್ತು ಪಡೆಯಲು BPL ಕಾರ್ಡ್ ಪಡೆಯಲು ಅರ್ಜಿ ಹಾಕಿದ್ದಾರೆ. ಆದರೆ ಇದನ್ನು ಮನಗಂಡಿರುವ ಸರ್ಕಾರ ಹೊಸ ಕಾರ್ಡ್ ವಿತರಿಸಲು ಕೆಲವು ಹೊಸ ರೂಲ್ಸ್ ಜಾರಿಗೆ ತಂದಿದೆ. ಅದೇನೆಂದರೆ ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕುಟುಂಬದ ಪರಿಸ್ಥಿತಿ ಪರಿಶೀಲಿಸಿ ನಂತರವಷ್ಟೇ ಹೊಸ ಪಡಿತರ ವಿತರಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಅನೇಕರಿಗೆ ಹೊಸ ಕಾರ್ಡ್ ವಿತರಣೆಯಾಗದ ಸಾಧ್ಯತೆ ಉಂಟು.
ಇಷ್ಟು ಮಾತ್ರವಲ್ಲದೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಕೂಡ ಬಹಳ ಸೂಕ್ಷ್ಮವಾಗಿ ಪರಿಶೀಲಿಸಿ ನೂರಕ್ಕೆ ನೂರು ಪ್ರತಿಶತದಷ್ಟು ಅರ್ಹರು ಎನಿಸಿದ ಕುಟುಂಬದವರಿಗೆ ಮಾತ್ರ ಹೊಸ ಪಡಿತರ ಚೀಟಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಅಂದಹಾಗೆ ಆಹಾರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಸದ್ಯದಲ್ಲಿಯೇ ಸುಮಾರು ಏಳು ಸಾವಿರ ಹೊಸ ಪಡಿತರ 233 (new ration card distribution) ಮಾಡಲಾಗುವುದು ಎಂಬ ವಿಚಾರ ಕೂಡ ಹೊರಬಿದ್ದಿದೆ.
ಇದನ್ನೂ ಓದಿ: Basavana gouda yatnal: ಡಿ ಕೆ ಶಿವಕುಮಾರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್ – ಕಾರಣ ಮಾತ್ರ ಅಚ್ಚರಿ !!