Tamilunadu: ಒಂದು ದಿನವೂ ಮಿಸ್ ಮಾಡಲ್ವಂತೆ, ಪ್ರತೀ ದಿನವೂ ಮೋದಿಗೆ ಲೇಟರ್ ಬರೀತಾಳಂತೆ ಈ ಲೇಡಿ !! ಅಬ್ಬಬ್ಬಾ, ಈವರೆಗೂ ಬರೆದ ಪತ್ರವೆಷ್ಟು, ಮೋದಿ ಕೊಡ್ತಿರೋ ರಿಪ್ಲೇ ಏನು ?!

Tamil Nadu news Coimbatore pregnant woman writes daily letters to the Prime Minister Narendra Modi

Tamilunadu: ಪ್ರಧಾನಿ ಮೋದಿಯವರಿಗೆ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡು ಅನೇಕರು ಪತ್ರ ಬರೆಯುತ್ತಾರೆ. ಅದರಲ್ಲಿಯೂ ಪುಟಾಣಿ ಮಕ್ಕಳು ಕೂಡ ಪತ್ರವನ್ನು ಬರೆಯುವುದು ವಿಶೇಷ. ಅಂತೆಯೇ ಮೋದಿಯವರು ಆ ಎಲ್ಲ ಪತ್ರಗಳಿಗೂ ಕೂಡ ಉತ್ತರಿಸುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ಪ್ರತಿದಿನವೂ ಮೋದಿಗೆ ಪತ್ರ ಬರೆಯುತ್ತಾಳೆ ಎಂದರೆ ನೀವು ನಂಬುತ್ತೀರಾ ?! ಹೌದು ಈಕೆ ಪ್ರತಿದಿನವೂ ಮೋದಿಗೆ(PM Modi) ಪತ್ರ ಬರೆಯುತ್ತಾಳೆ. ಅಂದ ಹಾಗೆ ಈಕೆ ಇದುವರೆಗೂ ಬರೆದ ಪತ್ರ ಎಷ್ಟು ಎಂದು ತಿಳಿದರೆ, ಮೋದಿ ಅದಕ್ಕೆ ಏನು ಉತ್ತರ ಕೊಟ್ಟಿದ್ದಾರೆ ಎಂಬುದನ್ನು ನೀವು ಕೇಳಿದರೆ ಶಾಕ್ ಆಗುತ್ತೀರಾ.

ದೇಶದಲ್ಲಿ ದಿನಂಪ್ರತಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೀಗೆ ಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಮಹಿಳೆಯೊಬ್ಬರು ಪ್ರಧಾನಿ ಮೋದಿ ಅವರಿಗೆ ಪ್ರತಿನಿತ್ಯ ಪತ್ರ ಬರೆಯುತ್ತಿದ್ದಾರೆ. ಅಂದಹಾಗೆ ಸುಮಾರು 9 ತಿಂಗಳಿನಿಂದ ಪ್ರತಿದಿನವೂ ಮೋದಿಗೆ ಈ ಮಹಿಳೆಯಿಂದ ಪತ್ರ ಹೋಗುತ್ತಿದ್ದು 264 ಲೆಟರ್​ಗಳಿಗೆ ಪಿಎಂ ಉತ್ತರಿಸಿದ್ದಾರಂತೆ !!

ಅಂದಹಾಗೆ ಪತ್ರ ಬರೆಯುವ ಇವರ ಹೆಸರು ಕೃತಿಕಾ(Krithika). ಇವರು ಮೂಲತಃ ತಮಿಳುನಾಡಿನ (Tamilunadu) ಕೊಯಮತ್ತೂರಿನ ಗಾಂಧಿನಗರದವರು. ಇವರ ಪತಿ ಪಳನಿಸ್ವಾಮಿ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೃತಿತಾ ಈಗ ಒಂದು ತಿಂಗಳ ಗರ್ಭಿಣಿ. ಬಿಎಸ್​ಸಿ ಕಂಪ್ಯೂಟರ್ ಸೈನ್ಸ್​ ಪದವೀದರೆಯಾಗಿರುವ ಅವರು ಕಳೆದ ಮಾರ್ಚ್ 8ರಂದು ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿಗೆ ಮೊದಲ ಪತ್ರ ಬರೆದಿದ್ದರು. ಮೊದಲಿಗೆ ಅಡುಗೆ ಅನಿಲದ ಬೆಲೆ ಹೆಚ್ಚಾಗಿದ್ದು, ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಪತ್ರ ಬರೆದಿದ್ದರು. ಇದಾದ ಬಳಿಕ ಎರಡನೇ ಬಾರಿ ಪತ್ರವನ್ನು ಬರೆದು ಮಹಿಳೆಯರಿಗೆ 33 ರಷ್ಟು ಮೀಸಲಾತಿಗೆ ಒತ್ತಾಯ ಮಾಡಿದ್ದರು. ಅದೇ ರೀತಿ ಆನ್​ಲೈನ್​ ರಮ್ಮಿ ನಿಷೇಧ, ತಮಿಳುನಾಡಿಗೆ ಹೆಚ್ಚು ನಿರ್ಭಯ ವ್ಯವಸ್ಥೆ ನೀಡುವುದು, ಬಿಎಸ್​ಎನ್​ಎಲ್​ 5ಜಿ ಸೇವೆ ಸ್ಥಾಪನೆ, ಚುನಾವಣೆಗಳಲ್ಲಿ ಬ್ಯಾಲೆಟ್​ ಪೇಪರ್​ ಮತದಾನ ಹಾಗೂ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್​-ಗಾಜಾ ಯುದ್ಧ ಸೇರಿದಂತೆ ಇಲ್ಲಿಯವರೆಗೆ ಕೃತಿಕಾ ಪ್ರಧಾನಿ ಮೋದಿಗೆ 263 ಮೂರು ಬಾರಿ ಪತ್ರವನ್ನು ಬರೆದಿದ್ದಾರೆ. ನಿನ್ನೆಯಷ್ಟೇ ಕೃತಿಕಾ ಅವರು 264ನೇ ಪತ್ರವನ್ನು ಬರೆದು ಕಳುಹಿಸಿದ್ದಾರೆ.

ಬಹಳ ವಿಶೇಷ ಅಂದರೆ ದೇಶದ ಜನತೆಯ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ಕೃತಿಕಾ ಬರೆಯುತ್ತಿರುವ ಪತ್ರಕ್ಕೆ ಪ್ರಧಾನಿ ಮೋದಿಯವರ ಕಚೇರಿ ಮನ್ನಣೆ ನೀಡುತ್ತಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಅವರ ಮನವಿ ಕುರಿತು ಚರ್ಚಿಸುತ್ತಾರಂತೆ. ಪ್ರಧಾನಿಗೆ ಪತ್ರ ಬರೆಯುತ್ತಿರುವ ಕೃತಿಕಾಗೆ ನಾನಾ ಕಡೆಯಿಂದ ಪ್ರಶಂಸೆ, ಅಭಿನಂದನೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: Marichi: ಹೆಂಡತಿ ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾದ ವಿಜಯ್ ರಾಘವೇಂದ್ರ!! ಅರೆ ಏನಪ್ಪಾ ಇದು ಹೊಸ ಸುದ್ದಿ?!

Leave A Reply

Your email address will not be published.