Gruhalakshmi scheme: ‘ಗೃಹಲಕ್ಷ್ಮೀ’ಯರಿಗೆ ಮತ್ತೆ ಬಿಗ್ ಶಾಕ್ – 50,000 ಯಜಮಾನಿಯರ ಅರ್ಜಿ ರಿಜೆಕ್ಟ್ !!

Karnataka news Congress guarantee application applied for gruhalakshmi scheme was rejected

Gruhalakshmi scheme application: ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಯ(Gruhalakshmi Scheme) ಯಜಮಾನಿಯರಿಗೆ ಬಿಗ್ ಶಾಕ್ ಎದುರಾಗಿದ್ದು ಸುಮಾರು 50, 000 ಮಹಿಳೆಯರ ಗೃಹಲಕ್ಷ್ಮೀ ಅರ್ಜಿ(Gruhalakshmi scheme application )ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ದೊರೆತಿದೆ.

ಹೌದು, ಸಿದ್ದರಾಮಯ್ಯ(C M Siddaramaiah) ನೇತೃತ್ವದ ಸರ್ಕಾರದ ಮಹತ್ವಕಾಂಕ್ಷೀ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಮೂರು ಕಂತಿನ ಹಣ ಕೂಡ ಬಿಡುಗಡೆಯಾಗಿದೆ. ಆದರೆ ಈ ನಡುವೆ ಹಲವಾರು ಮಹಿಳೆಯರಿಗೆ ಇನ್ನೂ ಕೂಡ ಗೃಹಲಕ್ಷ್ಮಿಯ ಒಂದು ಕಂತಿನ ಹಣ ಕೂಡ ಬಂದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಕೂಡ ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ. ಆದರೆ ಈ ನಡುವೆ ಶಾಕಿಂಗ್ ಸುದ್ಧಿಯೊಂದು ಹೊರಬಿದ್ದಿದ್ದು ಸುಮಾರು 50, 000 ಸಾವಿರ ಯಜಮಾನಿಯರ ಗೃಹಲಕ್ಷ್ಮೀ ಅರ್ಜಿ ಕ್ಯಾನ್ಸಲ್ ಆಗಿದೆ. ಹಾಗಿದ್ರೆ ಯಾರ ಅರ್ಜಿ ಕ್ಯಾನ್ಸಲ್ ನೋಡೋಣ ಬನ್ನಿ.

ಯಾರ ಅರ್ಜಿಗಳು ತಿರಸ್ಕೃತ ?!
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ತಿಳಿಸಿತ್ತು. ಅದರಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಅಂತೆಯೇ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಯೋಜನೆ ಕೂಡ ಜಾರಿಯಾಯಿತು. ಆದರೆ ಇದನ್ನು ಜಾರಿಗೊಳಿಸುವಾಗ ಸರ್ಕಾರ ಹಲವಾರು ಷರತ್ತುಗಳನ್ನು ವಿಧಿಸಿತು. ಅಂದರೆ ಕುಟುಂಬದ ಯಜಮಾನಿ ಅಥವಾ ಆಕೆಯ ಪತಿ ಅಥವಾ ಅವರ ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಂತಹ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ ಎಂದು ಹೇಳಿತ್ತು. ಆದರೂ ಕೂಡ ಹಲವಾರು ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದರು. ಹೀಗಾಗಿ ಇದೀಗ ಅಂತಹ ಅರ್ಜಿಗಳನ್ನು ಈಗ ತಿರಸ್ಕೃತಗೊಳಿಸಲಾಗಿದೆ.

ಇದನ್ನೂ ಓದಿ:B Y Vijayendra: ರಾಜ್ಯ ಬಿಜೆಪಿ ಕಾರ್ಯಕರ್ತರಿಗೆ ಭರ್ಜರಿ ಗುಡ್ ನ್ಯೂಸ್- ರಾಜ್ಯಾಧ್ಯಕ್ಷ ವಿಜಯೇಂದ್ರರಿಂದ ಹೊಸ ಘೋಷಣೆ !!

Leave A Reply

Your email address will not be published.