Government holiday : ಹಿಂದೂ ಹಬ್ಬಗಳ ಸರ್ಕಾರಿ ರಜೆ ಕಟ್, ಮುಸ್ಲಿಂ ಹಬ್ಬಗಳಿಗೆ ಮಾತ್ರ ಸಾಲು ಸಾಲು ರಜೆ – ರಾಜ್ಯ ಸರ್ಕಾರದಿಂದ ಹೊಸ ಆದೇಶ !!

Education news School holidays calen 2024 govt removes holidays for Hindu festivals and increases Muslim festival

School holidays calendar : ಹಿಂದೂಗಳ ಪ್ರಮುಖ ಹಬ್ಬಗಳಿಗೆ ಶಾಲೆಗಳಲ್ಲಿ ನೀಡಲಾಗುವ ಸರ್ಕಾರಿ ರಜೆಗಳನ್ನು(Government Holiday) ಕಟ್ ಮಾಡಿ ಮುಸ್ಲಿಂರ ಒಂದೊಂದು ಹಬ್ಬಗಳಿಗೂ ಸಾಲು ಸಾಲು ರಜೆಗಳನ್ನು ನೀಡಿ ಬಿಹಾರ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರ ವಿರುದ್ಧ ಇದೀಗ ಭಾರೀ ಆಕ್ರೋಶ ಕೇಳಿ ಬರುತ್ತಿದೆ.

ಹೌದು, ಬಿಹಾರದಲ್ಲಿ(Bihar) ನಿತೀಶ್ ಕುಮಾರ್(Nithish kumar) ನೇತೃತ್ವದ ಸರ್ಕಾರವು ಬಿಹಾರ ಸರ್ಕಾರವು ಶಾಲೆಗಳಲ್ಲಿ ಹಿಂದೂ ಹಬ್ಬಗಳಿಗೆ ಕತ್ತರಿ ಹಾಕಿ, ಮುಸ್ಲಿಂ ಹಬ್ಬಗಳಿಗೆ ರಜೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಶಿಕ್ಷಣ ಇಲಾಖೆಯು 2024 ರ ರಜೆಯ ಕ್ಯಾಲೆಂಡರ್(School holidays calendar)  ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಜೆ ವಿಚಾರದಲ್ಲಿ ಸರ್ಕಾರ ಮಾಡಿರುವ ತಾರತಮ್ಯವನ್ನು ಕಾಣಬಹುದು.

ಅಂದಹಾಗೆ ಶಿಕ್ಷಣಿಲಾಖೆಯು ಶಾಲಾ ಮಕ್ಕಳಿಗಾಗಿ ನೀಡಿದ ಕ್ಯಾಲೆಂಡರ್ ನಲ್ಲಿ ರಜೆ ಪಟ್ಟಿಯನ್ನು ನೀಡಲಾಗಿದ್ದು, ರಕ್ಷಾ ಬಂಧನ, ಮಹಾಶಿವರಾತ್ರಿ, ಜನ್ಮಾಷ್ಟಮಿಯ ರಜೆಯನ್ನು ರದ್ದುಪಡಿಸಲಾಗಿದೆ. ಮುಸ್ಲಿಮರ ಹಬ್ಬ ಈದ್​ಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ. ಸದ್ಯ ಇದರ ಕುರಿತು ಬಿಜೆಪಿ ಭಾರೀ ವಾಗ್ದಾಳಿ ನಡೆಸಿದೆ.

ಇನ್ನು ಕ ಕುರಿತು ಈ ಬಗ್ಗೆ ಬಿಜೆಪಿ ಸಂಸದ ಸುಶೀಲ್ ಮೋದಿ ಮಾತನಾಡಿದ್ದು, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಹಿಂದೂ ವಿರೋಧಿ ಮುಖವನ್ನು ತೋರಿಸಿದೆ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ನಿರ್ಧಾರವನ್ನು ತೆಗೆದುಕೊಂಡಿದೆ. ಹಿಂದೂ ಹಬ್ಬಗಳ ರಜಾದಿನಗಳನ್ನು ಆಯ್ದವಾಗಿ ಕಡಿತಗೊಳಿಸಲಾಗಿದೆ, ಆದರೆ ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಲಾಗಿದೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: C T Ravi: ಮುಂದಿನ ದಿನಗಳಲ್ಲಿ ಪಂಜುರ್ಲಿ ದೈವ, ಕಂಬಳ ಏನೂ ಇರೋಲ್ಲ !! ಹೀಗ್ಯಾಕಂದ್ರು ಸಿಟಿ ರವಿ

Leave A Reply

Your email address will not be published.