Pension Scheme: ಮಹಿಳೆಯರೇ ನಿಮಗಾಗಿ ಬಂದಿದೆ 5 ಹೊಸ ಪೆನ್ಶನ್ ಸ್ಕೀಮ್ – ಇದರಿಂದ ನಿಮಗೆ ಸಿಗಲಿದೆ ದುಪ್ಪಟ್ಟು ಹಣ

Business news personal savings 5 new pension scheme for women here is details

Pension Scheme: ಮನೆಯ ಜವಾಬ್ದಾರಿ ನಿಭಾಯಿಸುವ ಪ್ರತಿ ಮಹಿಳೆಯರು ಉಳಿತಾಯ ಮಾಡುವ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸಹಜ. ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ. ಆದರೆ, ಉಳಿಕೆಗಿಂತ ಹೆಚ್ಚಾಗಿ ಹಣ ನೀರಿನಂತೆ ಖರ್ಚಾಗುವುದನ್ನು ತಪ್ಪಿಸಲು ಮಹಿಳೆಯರು ಪಿಂಚಣಿ ಯೋಜನೆಗಳ(Pension Scheme) ಬಗ್ಗೆ ತಿಳಿದು ಅಲ್ಲಿ ಹೂಡಿಕೆ ಮಾಡುವುದು ಉತ್ತಮ.

ಮಹಿಳೆಯರಿಗೆ 5 ಅತ್ಯುತ್ತಮ ಪಿಂಚಣಿ ಯೋಜನೆಗಳು:

* ಅಟಲ್ ಪಿಂಚಣಿ ಯೋಜನೆ:
ಮಹಿಳೆಯರಿಗೆ ಹೂಡಿಕೆಗೆ ಉತ್ತಮ ಆಯ್ಕೆಗಳಲ್ಲಿ, ಅಟಲ್ ಪಿಂಚಣಿ ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆಯು ಕಡಿಮೆ ಆದಾಯ ಹೊಂದಿರುವವರಿಗೆ ಹೆಚ್ಚು ಪ್ರಯೋಜನಕಾರಿ.18 ವರ್ಷದಿಂದ 40 ವರ್ಷದೊಳಗಿನ ಯಾರು ಬೇಕಾದರೂ ಈ ಯೋಜನೆಯಡಿ ಹೂಡಿಕೆ ಮಾಡಿ ಪ್ರಯೋಜನ ಪಡೆಯಬಹುದು. 60 ವರ್ಷ ವಯಸ್ಸಿನ ಬಳಿಕ ಅವರು 1000 ರಿಂದ 5000 ರೂ.ವರೆಗೆ ಪಿಂಚಣಿ ಪಡೆಯಬಹುದು.

* ಮ್ಯೂಚುವಲ್ ಫಂಡ್:
ಮಹಿಳೆಯರು ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚು ಆದಾಯವನ್ನು ಪಡೆಯಲು ಅವಕಾಶವಿದೆ. SIP ಅಡಿಯಲ್ಲಿ ಮಾಸಿಕ ಪ್ರೀಮಿಯಂ ಪಾವತಿ ಮಾಡಿ, SWP ಮೂಲಕ,ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ನಿರ್ದಿಷ್ಟ ಅವಧಿಗೆ ಪಿಂಚಣಿ ಪಡೆಯಬಹುದಾಗಿದೆ.

*ರಾಷ್ಟ್ರೀಯ ಪಿಂಚಣಿ ಯೋಜನೆ:
ರಾಷ್ಟ್ರೀಯ ಪಿಂಚಣಿ ಯೋಜನೆ ಮೂಲಕ ಮಹಿಳೆಯರು ಹೆಚ್ಚಿನ ಪ್ರಯೋಜನ ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮತ್ತು ವಯಸ್ಸಿನ ಆಧಾರದ ಮೇಲೆ ಪಿಂಚಣಿ ಸಿಗಲಿದ್ದು, ಮಹಿಳೆ ತನ್ನ 30ರ ಹರೆಯದಲ್ಲಿ ಪ್ರತಿ ತಿಂಗಳು 5000 ರೂಪಾಯಿ ಹೂಡಿಕೆ ಮಾಡಿದ್ದಲ್ಲಿ 60 ವರ್ಷ ಪೂರೈಸಿದ ಬಳಿಕ ಆಕೆಗೆ ಸುಮಾರು 45,000 ರೂಪಾಯಿ ಪಿಂಚಣಿ ದೊರೆಯಲಿದೆ.

* LIC ಜೀವನ್ ಅಕ್ಷಯ್ 7 ಪಿಂಚಣಿ ಯೋಜನೆ :
LICಯ ಈ ವರ್ಷಾಶನ ಯೋಜನೆಯ ಮೂಲಕ ಹೂಡಿಕೆ ಮಾಡಬಹುದು. 30 ನೇ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿ ಮಾಡಬಹುದಾಗಿದ್ದು, ಕನಿಷ್ಠ ಖರೀದಿ ಬೆಲೆ 1 ಲಕ್ಷ ರೂ.ಯಾಗಿದೆ.

* ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್:
ಎಲ್ಐಸಿ ಸೇರಿದಂತೆ ಹಲವು ವಿಮಾ ಕಂಪನಿಗಳು ಈ ಯೋಜನೆಗಳನ್ನು ನಡೆಸುತ್ತಿದ್ದು, Mayumi ULIP ಎಂಬ ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪಾಲಿಸಿಯು ಷೇರು ಮಾರುಕಟ್ಟೆಯಲ್ಲಿ ವಿಮೆಯೊಂದಿಗೆ ಸಿಗುವ ಹೂಡಿಕೆ ಯೋಜನೆಯಾಗಿದೆ. ಐದು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಯುಲಿಪ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.ಯುನಿಟ್ ಲಿಂಕ್ಡ್ ವಿಮಾ ಯೋಜನೆ ಮಹಿಳೆಯರಿಗೆ ಉತ್ತಮ ಹೂಡಿಕೆಯ ಆಯ್ಕೆಯಾಗಿದ್ದು, ಈ ಯೋಜನೆಯಲ್ಲಿ ಜೀವ ವಿಮೆ ಹಾಗೂ ಹೂಡಿಕೆ ಸೌಲಭ್ಯ ಕೂಡ ಸಿಗಲಿದೆ. ಮೆಚ್ಯುರಿಟಿ ಬಳಿಕ ಸಾಮಾನ್ಯ ಪಿಂಚಣಿಯ ಪ್ರಯೋಜನ ಕೂಡ ಸಿಗಲಿದೆ.

ಇದನ್ನೂ ಓದಿ: Kichcha Sudeep: ತಾನು ತೊಟ್ಟ ಉಡುಗೆಯನ್ನು ಬಿಗ್ ಬಾಸ್ ಬಾಯ್ಸ್ ಗೆ ಗಿಫ್ಟ್ ಕೊಟ್ಟ ಕಿಚ್ಚ- ಕಾರಣ ಕೇಳಿದ್ರೆ ಆಶ್ಚರ್ಯ ಪಡ್ತೀರಾ!!

Leave A Reply

Your email address will not be published.