Home latest Belagavi: ಬೋರ್ ವೆಲ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್ ತಗುಲಿ ತಂದೆ-ಮಗ ಸಾವು !

Belagavi: ಬೋರ್ ವೆಲ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್ ತಗುಲಿ ತಂದೆ-ಮಗ ಸಾವು !

Hindu neighbor gifts plot of land

Hindu neighbour gifts land to Muslim journalist

Belagavi: ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದು ಬೆಂಗಳೂರಿನಲ್ಲಿ (Bengaluru) ತಾಯಿ ಹಾಗೂ ಮಗು ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಬೆಳಗಾವಿಯ ಅಥಣಿಯಲ್ಲಿ (Athani) ತಂದೆ ಮತ್ತು ಮಗನಿಗೆ (Father – Son) ವಿದ್ಯುತ್ ಶಾಕ್ (Electrocution) ತಗುಲಿ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (7) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ನಿನ್ನೆ, ಭಾನುವಾರ ಮಧ್ಯಾಹ್ನ ಮಲ್ಲಿಕಾರ್ಜುನರವರು ತಮ್ಮ ತೋಟದಲ್ಲಿ ಬೋರ್ವೆಲ್ ಮೋಟಾರ್ ಆನ್ ಮಾಡಿ ಬೇರೆ ಕಡೆ ನೀರು ತಿರುವಿಗೆ (ವಾಲ್ ಟರ್ನ್) ಮುಂದಾಗಿದ್ದಾರೆ.

ಇದನ್ನು ಓದಿ: Visa-Free Entry: ಈ ದೇಶಕ್ಕೆ ತೆರಳಲು ಡಿಸೆಂಬರ್ ನಿಂದ ಭಾರತೀಯರಿಗೆ ವೀಸಾ ಬೇಕಿಲ್ಲಾ – ಏನಿದು ಸ್ಪೆಶಲ್ ಆಫರ್

ಆದರೆ ಬೋರ್ವೆಲ್ ಹತ್ತಿರ ವೈರ್ ತುಂಡಾಗಿದ್ದು ಗಮನಿಸದೇ ವಿದ್ಯುತ್ ಕೈಗೆ ತಗುಲಿ ಸಾವು ಸಂಭವಿಸಿದೆ. ಅಪ್ಪ ವಿದ್ಯುತ್ ಶಾಕ್ ತಗಳಿದ್ದಿ ಒದ್ದಾಡುವುದನ್ನು ಕಂಡ ಮಗ ಅಪ್ಪನನ್ನು ಮುಟ್ಟಲು ಹೋಗಿ ಮಗ ಪ್ರೀತಮ್ ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಿನ್ನೆ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Karnataka Weather: ಮತ್ತೆ ರಜೆ ಹಾಕಿದ ಮಳೆರಾಯ – ಇನ್ಯಾವಾಗ ಪ್ರತ್ಯಕ್ಷ ಆಗ್ತಾನೆ ಗೊತ್ತಾ ?!