School college holiday: ಈ ದಿನದಿಂದ ಶಾಲಾ ಮಕ್ಕಳಿಗೆ ಸರಣಿ ರಜೆ !!

Share the Article

School-College Holidays: ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 30 ರಂದು ಮತದಾನ ನಡೆಯಲಿದೆ. ಇದಕ್ಕಾಗಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಚುನಾವಣಾ ಕರ್ತವ್ಯಗಳಲ್ಲಿ ಶಿಕ್ಷಕರಿಗೆ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ, ಶಾಲಾ ಮಕ್ಕಳಿಗೆ ರಜೆ(School Holidays) ಇರಲಿದೆ.

ತೆಲಂಗಾಣ ವಿದ್ಯಾರ್ಥಿಗಳಿಗೆ ನವೆಂಬರ್ 26ರಿಂದ ನವೆಂಬರ್ 30 ರವರೆಗೆ ಅಂದರೆ ಸತತ 4 ದಿನ ರಜೆ(School-College Holidays) ಇರಲಿದೆ. ತೆಲಂಗಾಣದ ವಿದ್ಯಾರ್ಥಿಗಳಿಗೆ ಕಾರ್ತಿಕ ಸೋಮವಾರದ ಜೊತೆಗೆ ಗುರುನಾನಕ್ ಜಯಂತಿ ಇರುವ ಹಿನ್ನೆಲೆ ಸಾರ್ವಜನಿಕ ರಜೆ ನೀಡಲಾಗುತ್ತದೆ. ಇದರ ಜೊತೆಗೆ ನವೆಂಬರ್ 26 ಭಾನುವಾರ, ನವೆಂಬರ್ 27 ರಂದು ರಜೆ ಇರಲಿದ್ದು, ಸರ್ಕಾರಿ ಶಾಲೆಗಳಿಗೆ ನವೆಂಬರ್ 29ರಂದು ರಜೆ ಘೋಷಿಸುವ ಸಾಧ್ಯತೆಯಿದೆ. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್ಗಳು ಈ ಎರಡು ದಿನಗಳ ಕಾಲ ಮುಚ್ಚಲಿವೆ. ಈ ನಡುವೆ ಶೇ.80 ರಷ್ಟು ಶಿಕ್ಷಕರು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ನವೆಂಬರ್ 29 ರಂದು ಬೆಳಿಗ್ಗೆ 7 ಗಂಟೆಯೊಳಗೆ ಶಿಕ್ಷಕರು ಇವಿಎಂಗಳನ್ನು ಸಂಗ್ರಹಿಸಲು ವರದಿ ಮಾಡಬೇಕು. ಹೀಗಾಗಿ ನವೆಂಬರ್ 29ರಂದು ಶಾಲೆಗಳಿಗೂ ರಜೆ ಇರಲಿದೆ ಎನ್ನಲಾಗಿದೆ.

ಇದನ್ನು ಓದಿ: Maharashtra Shocker: ಹೆಂಡತಿ ನೀಡಿದ ಪಂಚ್ ಗೆ ಗಂಡನ ಹಲ್ಲು ಉದುರೋಗಿ, ಪ್ರಾಣ ಬಿಟ್ಟ ಗಂಡ!!!

Leave A Reply

Your email address will not be published.