High Court : ಮುರುಘಾ ಶ್ರೀ ಕೇಸ್ ಕುರಿತು ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್ !!

Karnataka news surrender all documents in the pocso case against muruga shree High Court order

Murugha shree case: ಮಠದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾಶ್ರೀಗಳು(Murugha shree case) ಜೈಲಿನಿಂದ ಬಿಡುಗಡೆಯಾಗಿದ್ದು ಈ ಕೇಸ್ ಕುರಿತು ಹೈಕೋರ್ಟ್(High Court) ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಹೌದು, ಫೋಕ್ಸೋ ಪ್ರಕರಣದಡಿ ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದು ಸದ್ಯ ಬಿಡುಗಡೆಯ ಭಾಗ್ಯ ಕಂಡಿರುವ ಮುರುಘಾಶ್ರೀ ವಿರುದ್ಧದ ಪೋಕ್ಸೋ ಕೇಸ್‍ನ (POCSO Case) ಎಲ್ಲಾ ದಾಖಲಾತಿಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಕರ್ನಾಟಕ ಹೈಕೋರ್ಟ್ (High Court) ಆದೇಶಿಸಿದೆ.

ಅಂದಹಾಗೆ ನವೆಂಬರ್ 8 ರಂದು ಹೈಕೋರ್ಟ್ ಜಾಮೀನು ನೀಡಿದ್ದರೂ ನವೆಂಬರ್ 16ಕ್ಕೆ ರಿಲೀಸ್ ಆದೇಶ ನೀಡಿದ್ದು ಯಾಕೆ…? ಎಂದು ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಏಕಸದಸ್ಯ ಪೀಠ, ಕೆಳ ನ್ಯಾಯಾಲಯದ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದಿಷ್ಟೇ ಅಲ್ಲದೆ ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಷರತ್ತು ಇದ್ದರೂ ವಾರಂಟ್ ಹೊರಡಿಸಿರೋದು ಸಮಂಜಸ ಅಲ್ಲ, ಟ್ರಯಲ್ ಕೋರ್ಟ್ ಇರುವ ದಾಖಲೆಗಳನ್ನ ರಿಜಿಸ್ಟ್ರಾರ್ ತರಿಸಿ ಇಟ್ಟುಕೊಳ್ಳಬೇಕು. ತಕ್ಷಣ ಫೋನ್ ಮಾಡಿ ಕೋರ್ಟ್ ಮುಂದೆ ಇರುವ ಎಲ್ಲಾ ದಾಖಲೆ ಸೀಜ್ ಮಾಡಬೇಕು. ಎಸ್‍ಪಿಪಿ ವಿರುದ್ಧ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ: Kerala: ಪ್ರಿಯತಮನನ್ನು ವರಿಸಲು ಮುಸ್ಲಿಂಗೆ ಮತಾಂತರವಾಗಿದ್ದ ಹಿಂದೂ ಯುವತಿ ಬಾಳೀಗ ನರಕ !! ವೈರಲ್ ಆಯ್ತು ಪೋಸ್ಟ್ !!

Leave A Reply

Your email address will not be published.