Indian Railway Rules: ರೈಲ್ವೆ ಪ್ರಯಾಣಿಕರು ಇನ್ಮುಂದೆ ಇವುಗಳನ್ನು ರೈಲಲ್ಲಿ ಕೊಂಡೋಗುವಂತಿಲ್ಲ- ಇಲಾಖೆಯಿಂದ ಖಡಕ್ ಸೂಚನೆ !!

National news Indian Railway new rules South Western railway warns passengers not to carry inflammable

Indian Railway Rules: ಇತ್ತೀಚೆಗೆ ದೇಶದಲ್ಲಿ ರೈಲುಗಳಲ್ಲಿ (Train) ಬೆಂಕಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರೈಲಿನಲ್ಲಿ ಬೆಂಕಿ (Fire) ಆವರಿಸುವ ವಸ್ತುಗಳನ್ನು ಸಾಗಿಸದಂತೆ (Indian Railway Rules) ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಮುಖ್ಯವಾಗಿ ಪಟಾಕಿ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಸ್ಟವ್, ಮ್ಯಾಚ್ ಬಾಕ್ಸ್, ಸಿಗರೇಟ್ ಲೈಟರ್, ಸೇರಿದಂತೆ ಯಾವುದೇ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್ ಶುಕ್ರವಾರ ಪ್ರಯಾಣಿಕರಿಗೆ ಸೂಚಿಸಿದ್ದಾರೆ.

ಮುಖ್ಯವಾಗಿ ರೈಲ್ವೆಯಲ್ಲಿ ದಹನಕಾರಿ ಮತ್ತು ಸ್ಫೋಟಕ ವಸ್ತುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ರೈಲ್ವೆ ಕಾಯಿದೆ, 1989 ರ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ 1,000 ರೂ.ವರೆಗೆ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಜೊತೆಗೆ ಚಲಿಸುವ ರೈಲುಗಳಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಪ್ರಯಾಣಿಕರು ಧೂಮಪಾನ ಮಾಡಬಾರದು ಎಂದು ಅವರು ರೈಲ್ವೆ ಇಲಾಖೆ ಈಗಾಗಲೆ ಸುತ್ತೋಲೆ ಹೊರಡಿಸಿದೆ.

ಸದ್ಯ ರೈಲ್ವೆ ಕಾರ್ಯಾಚರಣೆಗೆ ಸಂಬಂಧಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಅಗ್ನಿಶಾಮಕಗಳನ್ನು ಹೇಗೆ ಬಳಸಬೇಕೆಂದು ತರಬೇತಿ ನೀಡಲಾಗಿದ್ದು, ವಿಭಾಗದ 30 ನಿಲ್ದಾಣಗಳಲ್ಲಿ ರೈಲ್ವೆ ಮೇಲ್ವಿಚಾರಕರು ಮತ್ತು ಸಿಬ್ಬಂದಿ ಅಗ್ನಿ ಸುರಕ್ಷತಾ ತಪಾಸಣೆ ನಡೆಸಿದ್ದು, 182 ಪ್ಯಾಂಟ್ರಿ ಕಾರುಗಳನ್ನು ಸಹ ಪರಿಶೀಲಿಸಲಾಗಿದೆ ಮತ್ತು ನ್ಯೂನತೆಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Good News for Gram Panchayat Employees: ಗಾ.ಪಂ ನೌಕರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್- 11, 543 ನೌಕರರ ನೇಮಕಾತಿಗೆ ಸಿಕ್ತು ಅಸ್ತು !!

Leave A Reply

Your email address will not be published.