Putturu: ಪುತ್ತೂರು ಶಾಸಕರ ಸಾಧನೆ- ಕ್ಷೇತ್ರದ ಈ 19 ರೂಟ್ ಗಳಿಗೆ KSRTC ಬಸ್ ಸೌಲಭ್ಯ

Pitturu: ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ರೈ(MLA Ashok rai) ಅವರ ಕೋರಿಕೆಯ ಮೇರೆಗೆ ಶಾಂತಿಮೊಗರು ಮಾರ್ಗವಾಗಿ ಪುತ್ತೂರು, ಕಡಬ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಕೆಎಸ್ಆರ್‌ಟಿಸಿ ಬಸ್ಸುಗಳ ಓಡಾಟ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಹೌದು, ಪುತ್ತೂರಿನ(Putturu) ಕೆಲವೆಡೆ ಹೆಚ್ಚುವರಿ ಬಸ್ಸುಗಳ ಓಡಾಟದ ಕೊರತೆಯಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಈ ಕುರಿತು ಹಲವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ದೂರು ನೀಡಿ, ಬಸ್ಸುಗಳ ಓಡಾಟಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 19 ರೂಟ್‌ಗಳಲ್ಲಿ ಬಸ್ಸುಗಳ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ವ್ಯವಸ್ಥೆ ಮಾಡಿದ್ದು ಪುತ್ತೂರಿನ ಜನತೆಯ ಬಹು ವರ್ಷಗಳ ಬೇಡಿಕೆಯನ್ನು ನೂತನ ಶಾಸಕರಾದ ಅಶೋಕ್ ರೈ ಅವರು ನೆರವೇರಿಸಿದ್ದಾರೆ. ಈ ಮೂಲಕ ಕೆಎಸ್‌ಆರ್‌ಟಿಸಿ ಬಸ್ಸುಗಳ ಓಡಾಟ ಕುರಿತು ಬಹುಸಮಯದ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಂತಾಗಿದೆ.

ಎಲ್ಲೆಲ್ಲಿಗೆ ಬಸ್ ಸೌಲಭ್ಯ ಹಾಗೂ ಸಮಯದ ವಿವರ –
(ಆಗಮಿಸುವ ಹಾಗೂ ನಿರ್ಗಮಿಸುವ ಸಮಯ)
• ಶಾಂತಿಮೊಗರು-ಕಡಬ(18.00, 19.00),
• ಕಡಬ ಶಾಂತಿಮೊಗರು-ಪುತ್ತೂರು (6.45, 7.45),
• ಪುತ್ತೂರು-ಮುಡ್ಡಿನಡ್ಕ ವಯಾ ಬಡಗನ್ನೂರು(07.30, 08.05)
• ಮುಡ್ಡಿನಡ್ಕ-ಪುತ್ತೂರು ವಯಾ ಬಡಗನ್ನೂರು(08.10, 08.45),
• ಪುತ್ತೂರು-ಮುಚ್ಚಿನಡ್ಕ ವಯಾ ಬಡಗನ್ನೂರು(16.30, 17.05),
• ಮುಡ್ಡಿನಡ್ಕ-ಪುತ್ತೂರು ವಯಾ ಬಡಗನ್ನೂರು(17.35, 18.10),
• ಪುತ್ತೂರು-ವಿಟ್ಲ ವಯಾ ಬುಳೇರಿಕಟ್ಟೆ, ಪುಣಚ(07.15, 08.00),
• ವಿಟ್ಲ-ಪುತ್ತೂರು ವಯಾ ಪುಣಚ, ಬುಳೇರಿಕಟ್ಟೆ (08.10, 08.55),
• ಪುತ್ತೂರು-ವಿಟ್ಲ ವಯಾ ಬುಳೇರಿಕಟ್ಟೆ,
• ಪುಣಚ(17.15, 18.00), ವಿಟ್ಲ-ಪುತ್ತೂರು
• ಪುಣಚ ಬುಳೇರಿಕಟ್ಟೆ (18.15, 19.00), ಪುತ್ತೂರು-ಸುಳ್ಯಪದವು ವಯಾ ರೆಂಜ ಮುಡ್ಡಿನಡ್ಕ(16.30, 17.30),
• ಸುಳ್ಯಪದವು- ಪುತ್ತೂರು ವಯಾ ಮುಡ್ನನಡ್ಕ, ರೆಂಜ(17.30, 18.35),
• ಸುಳ್ಯಪದವು-ಪುತ್ತೂರು ವಯಾ ಮುಡ್ಡಿನಡ್ಕ, ರೆಂಜ(08.20, 09.20),
• ಪುತ್ತೂರು-ನುಳಿಯಾಲು ವಯಾ ರೆಂಜ ಬೆಟ್ಟಂಪಾಡಿ, ಕೊರಿಂಗಿಲ, ಕಕ್ಕೂರು(07.25, 08.05)
• ನುಳಿಯಾಲು-ಪುತ್ತೂರು ವಯಾ ತಂಬುತ್ತಡ್ಕ, ರೆಂಜ(08.10, 08.50)
• ಪುತ್ತೂರು ನುಳಿಯಾಲು ವಯಾ ರೆಂಜ, ತಂಬುತ್ತಡ್ಕ(16.45, 17.25)
• ನುಳಿಯಾಲು-ಪುತ್ತೂರು ವಯಾ ಕಕ್ಕೂರು,ಕೊರಿಂಗಿಲ, ಬೆಟ್ಟಂಪಾಡಿ,ರೆಂಜ(17.30, 18.10)
• ಪುತ್ತೂರು-ನುಳಿಯಾಲು ವಯಾ ರೆಂಜ, ತಂಬುತ್ತಡ್ಕ (13.00, 13.40)
• ನುಳಿಯಾಲು-ಪುತ್ತೂರು ವಯಾ ಕಕ್ಕೂರು, ಕೊರಿಂಗಿಲ, ಬೆಟ್ಟಂಪಾಡಿ, ರೆಂಜ(13.45, 14.25)

ಇದನ್ನು ಓದಿ: Beating By slippers: ಚುನಾವಣೆ ಗೆಲ್ಲುವ ಆಸೆ – ಕಾಂಗ್ರೆಸ್ ಅಭ್ಯರ್ಥಿಗೆ ಬಿತ್ತು ಚಪ್ಪಲಿ ಏಟು !! ಕೊಟ್ಟಿದ್ಯಾರು?

Leave A Reply

Your email address will not be published.