Password: ಭಾರತೀಯರು ಜಾಸ್ತಿ ಯೂಸ್ ಮಾಡೋ ಪಾಸ್’ವರ್ಡ್ ಗಳಿವು – ಅಬ್ಬಬ್ಬಾ.. ಒಂದೊಂದೂ ಇಂಟ್ರೆಸ್ಟಿಂಗ್ ಆಗಿವೆ !!

National news intresting news here are most common passwords used by indians

Password: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದಿನ ಕಾಲದಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಸಾಧನಗಳ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ತಂತ್ರಜ್ಞಾನ (Technology) ಬೆಳೆದಂತೆ ಭದ್ರತೆ ಕೂಡ ಮಹತ್ವ ಪಡೆದುಕೊಂಡಿದೆ. ತಂತ್ರಜ್ಞಾನ ಆಧಾರಿತ ಭದ್ರತೆಯ ಕಡೆಗೆ ವಿಶೇಷ ಗಮನ ವಹಿಸಲಾಗುತ್ತದೆ. ಯಾವುದೇ ತಂತ್ರಜ್ಞಾನ ಬಳಕೆ ಮಾಡುವಾಗ ಪಾಸ್ ವರ್ಡ್ (Password) ಬಳಸೋದು ಸಹಜ.

ಅನೇಕ ಸೈಟ್, ಆ್ಯಪ್ ಬಳಕೆ ಮಾಡುವಾಗ ಪಾಸ್ ವರ್ಡ್ ಮರೆತುಹೋಗೋದು ಕಾಮನ್. ಹೀಗಾಗಿ, ಹೆಚ್ಚಿನ ಮಂದಿ ಅ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಪಾಸ್‌ವರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಅತಿಹೆಚ್ಚು ಬಳಸಿದ ಪಾಸ್‌ವರ್ಡ್‌ಗಳನ್ನು ಬಹಿರಂಗಪಡಿಸಲಾಗಿದೆ.

ಕೆಲ ಬಲ್ಲ ಮೂಲಗಳ ವರದಿಯ ಪ್ರಕಾರ ಬ್ರೌಸರ್‌ನಲ್ಲಿ ಸೇವ್ ಮಾಡಿದ ಪಾಸ್‌ವರ್ಡ್‌ಗಳು ಹೆಚ್ಚು ಸುರಕ್ಷಿತವಾಗಿರುವುದಿಲ್ಲ. ಪಾಸ್‌ವರ್ಡ್ ಡೇಟಾಬೇಸ್‌ನಲ್ಲಿ ಒಳಗೊಂಡಿರುವ ಸುಮಾರು 70 ಪ್ರತಿಶತದಷ್ಟು ಪಾಸ್‌ವರ್ಡ್‌ಗಳನ್ನು ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಟ್ರ್ಯಾಕ್ ಮಾಡಬಹುದು. ಹ್ಯಾಕರ್ ನಿಮ್ಮ ಬ್ರೌಸರ್ ಅನ್ನು ಹ್ಯಾಕ್ ಮಾಡಿದಲ್ಲಿ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಲಿಂಕ್ ಹ್ಯಾಕ್ ಮಾಡಬಹುದು.

ಭಾರತದಲ್ಲಿ ಜನರು ಬಳಕೆ ಮಾಡುತ್ತಿರುವ ಸರಳ ಪಾಸ್‌ವರ್ಡ್‌ಗಳು ಯಾವುದೆಲ್ಲ ಗೊತ್ತಾ??

ಅತಿ ಹೆಚ್ಚು ಬಳಸುವ ಪಾಸ್‌ವರ್ಡ್‌ಗಳು.
123456
12345678
12345
Pass@123 123456789
Admin@123
India@123
admin@123
Pass@1234
1234567890
Abcd@1234
Welcome@123
Abcd@123
admin123
administrator
Password@123
Password

NordPass ಮಾಹಿತಿ ಅನುಸಾರ, ಜನರು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮರೆತು ಹೋಗುವ ಭಯದಲ್ಲಿ ಸುಲಭದ ಅಥವಾ ದುರ್ಬಲ ಪಾಸ್‌ವರ್ಡ್‌ಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲಿಯೂ ಹೆಚ್ಚಿನ ಭಾರತೀಯರು ತಮ್ಮ ಪಾಸ್‌ವರ್ಡ್‌ಗಳಲ್ಲಿ ಇಂಡಿಯಾ ಎಂಬ ಪದವನ್ನು ಬಳಸುತ್ತಾರಂತೆ. ಇದರಲ್ಲಿಯೂ india@124 ಪಾಸ್ವರ್ಡ್ ಸಾಮಾನ್ಯವಾಗಿ ಹೆಚ್ಚಿನ ಮಂದಿ ಬಳಕೆ ಮಾಡುತ್ತಾರಂತೆ.ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸಲು ಅವುಗಳನ್ನು ಸೇಫ್ ಆಗಿ ಸೇವ್ ಮಾಡಬೇಕು. ಪಾಸ್ವರ್ಡ್ ನಿರ್ವಾಹಕವನ್ನೂ ಬಳಕೆ ಮಾಡುವುದು ಉತ್ತಮ ಸುರಕ್ಷಿತ ಆಯ್ಕೆಯಾಗಿದೆ.

ಇದನ್ನೂ ಓದಿ: ಬಾಲಿವುಡ್ ನಟಿ ಕಾಜೋಲ್ ಬಟ್ಟೆ ಬದಲಿಸುವ ವಿಡಿಯೋ ವೈರಲ್ – ಕೇಂದ್ರ ಎಚ್ಚರಿಸಿದ್ರೂ ನಿಲ್ಲದ ಕಿಡಿಗೇಡಿಗಳ ಅಟ್ಟಹಾಸ !!

1 Comment
  1. […] ಇದನ್ನೂ ಓದಿ: Password: ಭಾರತೀಯರು ಜಾಸ್ತಿ ಯೂಸ್ ಮಾಡೋ ಪಾಸ್&#8217… […]

Leave A Reply

Your email address will not be published.