Putturu: ಪುತ್ತಿಲ ಪರಿವಾರ ಕಚೇರಿಯ ಎದುರು ತಲವಾರ್ ಛಳಪಿಸಿದ ಪ್ರಕರಣ ; ಆರೋಪಿಗಳಿಗೆ ಷರತ್ತು ಬದ್ದ ಜಾಮೀನು
Putturu: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ತಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಗೆ ಪುತ್ತೂರು ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.
ಪುತ್ತಿಲ ಪರಿವಾರದ ಕಚೇರಿಗೆ ತಂಡವೊಂದು ತಲ್ವಾರು ತೆಗೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಘಟನೆಗ ನ.10ರಂದು ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ, ನರಿಮೊಗರು ಗ್ರಾಮದ ಭವಿತ್, ಬೊಳುವಾರು ನಿವಾಸಿ ಮನ್ವಿತ್, ಚಿಕ್ಕಮುಡ್ನೂರು ನಿವಾಸಿ ಜಯಪ್ರಕಾಶ್, ಚರಣ್, ಬನ್ನೂರು ಗ್ರಾಮದ ಮನೀಶ್, ವಿನೀತ್ ಮತ್ತು ಇಬ್ಬರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು.
ಅಪ್ರಾಪ್ತರನ್ನು ಈ ಮೊದಲು ಬಿಡುಗಡೆ ಮಾಡಲಾಗಿತ್ತು. ಉಳಿದ ಏಳು ಮಂದಿಗೆ ನ್ಯಾಯಾಲಯವು ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.