PM Narendra Modi security: ಪ್ರಧಾನಿ ಮೋದಿ ಕಾರಿನ ಮುಂದೆ ಮಹಿಳೆಯ ಹರಸಾಹಸ: ಮೋದಿ ಬೆಂಗಾವಲು ವಾಹನದ ಎದುರು ಏಕಾಏಕಿ ಜಿಗಿದ ಮಹಿಳೆ! ಮುಂದೇನಾಯ್ತು?

National news Woman Jumps In Front of Prime Minister Narendra Modi's Convoy in Ranchi

PM Narendra Modi security: ಮೋದಿ ಎಂದರೆ ಸಾಕು!! ಜನರಲ್ಲಿ ವಿಶೇಷವಾದ ಅಭಿಮಾನ ಇರುವುದಂತೂ ಸುಳ್ಳಲ್ಲ. ಮೋದಿಯನ್ನು( PM Narendra Modi)ನೋಡಲು ಅದೆಷ್ಟೋ ಮಂದಿ ಜಾತಕಪಕ್ಷಿಯಂತೆ ಎದುರು ನೋಡುವುದು ಸಹಜ.ಪ್ರಧಾನಿ ಮೋದಿಯನ್ನ ನೋಡುವ ಸಲುವಾಗಿ ದಾರಿಯುದ್ದ ಕಿಕ್ಕಿರಿದ ಜನಸಂದಣಿ ಇರುವುದು ಮಾಮೂಲಿ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯ ವಾಹನದ ಮುಂದೆ ಮಹಿಳೆಯೊಬ್ಬಳು ಹಠಾತ್ತನೆ ಜಿಗಿದ ಘಟನೆಯೊಂದು ವರದಿಯಾಗಿದೆ.

 

ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ರಾಂಚಿಯಲ್ಲಿ ಬಿರ್ಸಾಮುಂಡ ಸ್ಮಾರಕಕ್ಕೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು (PM Narendra Modi security ) ವಾಹನದ ಮುಂದೆ ಹಾರಿದ ಘಟನೆ ನಡೆದಿದೆ. ಚಾಲಕ ತಕ್ಷಣವೇ ಬ್ರೇಕ್ ಹಾಕಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದು, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಪ್ರಧಾನಿ ಬರುವುದನ್ನು ರಸ್ತೆಬದಿಯಲ್ಲಿ ಕಾಯುತ್ತಾ ನಿಂತಿದ್ದ ಮಹಿಳೆ ಕಾರು ಕಂಡ ಕೂಡಲೇ ಏಕಾಏಕಿ ಮೋದಿಯ ಬೆಂಗಾವಲು ಕಾರಿನ ಎದುರು ಜಿಗಿದಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ಕಮಾಂಡೊಗಳು ಮಹಿಳೆಯನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಖಾಲಿ ರಸ್ತೆಯಲ್ಲಿ ಮೋದಿ ಬೆಂಗಾವಲು ವಾಹನ ತುಂಬಾ ವೇಗವಾಗಿ ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ.

ಇದನ್ನೂ ಓದಿ: LPG ಸಿಲಿಂಡರ್ ದರದಲ್ಲಿ ಮತ್ತೆ ಇಳಿಕೆ – ಇನ್ಮುಂದೆ ಈ ಕಡಿಮೆ ಬೆಲೆಗೆ ಸಿಗುತ್ತೆ ಗ್ಯಾಸ್ !!

Leave A Reply

Your email address will not be published.