Transportation department: KSRTC ಯಿಂದ ಮತ್ತೊಂದು ಹೊಸ ಸೌಲಭ್ಯ ಘೋಷಣೆ!!
Karnataka news transportation department to introduce KSRTC parcel trucks soon
Transportation department: ಕೆಎಸ್ಆರ್ಟಿಸಿ(KSRTC) ಸಂಸ್ಥೆಯಿಂದ ಈಗಾಗಲೇ ಉಚಿತ ಪ್ರಯಾಣ ಹಾಗೂ ಅನೇಕ ಸೌಲಭ್ಯಗಳನ್ನು ಜನರಿಗಾಗಿ ಕಲ್ಪಿಸಲಾಗಿದೆ. ಈಗ ಸಂಸ್ಥೆಯು ಮತ್ತೊಂದು ಜನಪರವಾದ ಹಾಗೂ ತನ್ನ ಆದಾಯವನ್ನೂ ಹೆಚ್ಚಿಸಿಕೊಳ್ಳುವಂತಹ ಸೌಲಭ್ಯದ ಜಾರಿಗೆ ಸಾರಿಗೆ ಇಲಾಖೆಯು(Transportation department) ಮುಂದಾಗಿದ್ದು ನಾಡಿನ ಜನರಲ್ಲಿ ಸಂತಸ ಮನೆಮಾಡಿದೆ.
ಹೌದು, ಇಷ್ಟು ದಿನ ಪ್ರಯಾಣಣಿಕರು ಏನಾದರೂ ದೊಡ್ಡ ದೊಡ್ಡ ಪಾರ್ಸಲ್ ಗಳನ್ನು ಸಾಗಿಸಲು ಸಾಕಷ್ಟು ಕಷ್ಟ ಪಡಬೇಕಿತ್ತು. ಬಸ್ ನಲ್ಲಿ ಕಂಡಕ್ಟರ್ ಕಿರಿಕಿರಿಯಾದರೆ ಮತ್ತೊಂದೆಡೆ ಖಾಸಗಿ ವಾಹಣಗಳ ದುಪ್ಪಟ್ಟು ಹಣದ ಬಾದೆಯಿಂದ ಸುಸ್ತುಹೊಡೆದಿದ್ದರು. ಇದಲ್ಲದೆ ಯಾವ ದೊಡ್ಡ ವಸ್ತುಗಳನ್ನು ಸಾಗಿಸಲೂ ಹರಸಾಹಸ ಪಡಬೇಕಿತ್ತು. ಆದರೀಗ ಈ ಸಮಸ್ಯೆಗೆ ಪರಿಹಾರ ನೀಡಲು ಹಾಗೂ ಸಂಕಷ್ಟದಲ್ಲಿರುವ ತನ್ನ ನಷ್ಟವನ್ನು ಭರಿಸಲು KSRTC ಸಂಸ್ಥೆಯು ಮಹತ್ವದ ಹೆಜ್ಜೆ ಇಟ್ಟಿದ್ದು, ಪಾರ್ಸೆಲ್ಗಳನ್ನು ಒಯ್ಯಲು 20 ಲಾರಿ ಟ್ರಕ್ಗಳನ್ನು ಖರೀದಿಸಿದೆ. ಡಿ.15ರ ಒಳಗೆ ಇವು ಕಾರ್ಯಾರಂಭವನ್ನೂ ಮಾಡಲಿವೆ.
ಅಂದಹಾಗೆ ಆಕರ್ಷಕ ವಿನ್ಯಾಸದ, ಉತ್ತಮ ಗುಣಮಟ್ಟದ ಟ್ರಕ್ಗಳನ್ನು ಆರಿಸಲಾಗಿದೆ. ಟಾಟಾ ಕಂಪನಿಯ ಪುಣೆ ಶಾಖೆಯಲ್ಲಿ ಟ್ರಕ್ಗಳು ತಯಾರಾಗುತ್ತಿವೆ. 20 ಟ್ರಕ್ಗಳು ಇನ್ನು ಒಂದು ತಿಂಗಳ ಒಳಗೆ ಕೆಎಸ್ಆರ್ಟಿಸಿಗೆ ಬರಲಿವೆ. ಇದರಿಂದ ಇನ್ಮುಂದೆ ಪಾರ್ಸಲ್ ಸಾಗಿಸಲು ಜನರಾಗಲಿ, ಯಾವುದೇ ಕಂಪೆನಿಯವರಾಗಲಿ ಹರಸಾಹಸ ಪಡಬೇಕಾಗಿಲ್ಲ.
ಇನ್ನು KSRTC ಸಂಸ್ಥೆ ಪಾರ್ಸೆಲ್ಗಳಿಗಾಗಿ ಈ ಟ್ರಕ್ಗಳನ್ನು ಖರೀದಿಸಿದೆ. ದಶಕಗಳ ಹಿಂದೆ ಟ್ರಕ್ಗಳ ಮೂಲಕ ಪಾರ್ಸೆಲ್ ಒಯ್ಯುವ ಚಿಂತನೆ ಮಾಡಿದ್ದ ಸಂಸ್ಥೆಯು ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ. ಆದರೆ ಬಸ್ಸಲ್ಲಿ ಸಣ್ಣ ಪ್ರಮಾಣದ ಸರಕುಗಳನ್ನು ಸಾಗಿಸಲು ಅನುವುಮಾಡಿಕೊಟ್ಟಿದ್ದು ಇದರಿಂದ ವಾರ್ಷಿಕವಾಗಿ 13 ಕೋಟಿಯಷ್ಟು ಲಾಭ ಬರುತ್ತಿತ್ತು. ಆದರೀಗ ಈ ಹೊಸ ಯೋಜನೆಯ ಮೂಲಕ ದುಪ್ಪಟ್ಟು ಲಾಭ ಗಳಿಕೆಯ ಗುರಿ ಸಂಸ್ಥೆಯ ಮುಂದಿದೆ. ಸದ್ಯ ಗುರಿಯಂತೆ ಟ್ರಕ್ಗಳನ್ನು ಖರೀದಿಸಿ ಪಾರ್ಸೆಲ್ ತಲುಪಿಸುವ ಮೂಲಕ ಅಧಿಕ ಆದಾಯ ಗಳಿಕೆಗೆ ಮುಂದಾಗಿದೆ.