GPS tracking: ರಾಜ್ಯದ ಖಾಸಗಿ ವಾಹನಗಳಿಗೆ ಬಂತು ಹೊಸ ರೂಲ್ಸ್ – ಡಿಸೆಂಬರ್ ನಿಂದಲೇ ಜಾರಿ, ಸರ್ಕಾರದ ಖಡಕ್ ಸೂಚನೆ

National news panic button GPS tracking in private buses compulsory from December

GPS tracking : ರಾಜ್ಯದಲ್ಲಿ ಮಕ್ಕಳು, ಮಹಿಳೆಯರು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು(Safety Measures)ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್(GPS Tracking and Panic Button)ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ ಮಾಡಲಾಗುತ್ತಿದ್ದು, ಡಿಸೆಂಬರ್ ನಿಂದ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆಯಿದೆ.

ಜಿಪಿಎಸ್ ಮಾನಿಟರಿಂಗ್ ನಕ್ಷೆಯಲ್ಲಿ ವಾಹನಗಳ ನೈಜ ಸಮಯದ ಟ್ರ್ಯಾಕಿಂಗ್ ಮಾಡಲಾಗುತ್ತದೆ. ಈ ಮೂಲಕ ವಾಹನ ಯಾವ ಸ್ಥಳದಲ್ಲಿದೆ ಮಾತ್ರವಲ್ಲದೇ ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ವಾಹನದಲ್ಲಿರುವ ಪ್ರಯಾಣಿಕರಿಗೆ ತುರ್ತು ಪರಿಸ್ಥಿತಿ ಎದುರಾದರೆ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್ ಗೆ ಸಂದೇಶ ರವಾನೆಯಾಗಲಿದ್ದು ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಿ ನೆರವಿಗೆ ಬರಬಹುದು.

ಸಾರಿಗೆ ಇಲಾಖೆ ಟೆಂಡರ್ ಮೂಲಕ 13 ಕಂಪನಿಗಳನ್ನು ಅಂತಿಮಗೊಳಿಸಿ ಈ ಕುರಿತು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದಿಂದ ಸಮ್ಮತಿ ಸಿಕ್ಕ ಬಳಿಕ ಯೋಜನೆ ಜಾರಿಯಾಗಿದೆ ಎನ್ನಲಾಗಿದೆ.ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳು, ಕ್ಯಾಬ್ ಗಳು, ಖಾಸಗಿ ಬಸ್ ಗಳಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಸಂಭವನೀಯ ಅಪರಾಧ ನಿಯಂತ್ರಣ ಮಾಡಬಹುದಾಗಿದ್ದು, ಮಹಿಳೆಯರು, ಮಕ್ಕಳು, ಪ್ರಯಾಣಿಕರಿಗೆ ರಕ್ಷಣೆ ದೊರೆಯಲಿದೆ. ಕಳ್ಳತನ(Robbery), ಅತ್ಯಾಚಾರ, ಲೈಂಗಿಕ ದೌರ್ಜನ್ಯ(Physical Harrasment)ರೀತಿಯ ಪ್ರಕರಣ ತಡೆಯಲು ಇದು ನೆರವಾಗುತ್ತದೆ.

ಇದನ್ನೂ ಓದಿ: KEA ಇಂದ 4 ನಿಗಮಗಳಿಗೆ ಹುದ್ದೆಗಳ ಭರ್ತಿ; ಎರಡೆರಡು ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಸೂಚನೆ ಪ್ರಕಟ!

Leave A Reply

Your email address will not be published.