Pressure Cooker Leakage: ಒಂದಲ್ಲಾ ಒಂದು ಕಾರಣದಿಂದ ಅಡುಗೆಯ ಕುಕ್ಕರ್ ಕಿರಿ ಕಿರಿ ಮಾಡುತ್ತಾ?! ಹೀಗೆ ಮಾಡಿ ಸರಿಮಾಡ್ಕೊಳ್ಳಿ

Lifestyle kitchen hacks easy Tips for fix the pressure cooker leakage here is details

Pressure Cooker Leakage: ಕುಕ್ಕರ್‌ನಲ್ಲಿ (Cooker)ಅಡುಗೆ ಮಾಡುವಾಗ ಲಿಡ್ ನಿಂದ ಬುರ್ ಎಂದು ಹಬೆನೀರು ಸೋರಿಕೆಯಾಗುವ (Leakage) ಸಮಸ್ಯೆ ಆಗಾಗ್ಗೆ ಕಂಡುಬರುತ್ತದೆ. ನಿಮ್ಮ ಮನೆಯಲ್ಲಿರುವ ಕುಕ್ಕರ್ ಕೂಡ ನಿಮಗೆ ಇದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದರೆ, ಆ ಸಮಸ್ಯೆಗೆ ನಾವು ಹೇಳುವ ಟಿಪ್ಸ್ (Kitchen Tips)ಫಾಲೋ ಮಾಡಿ ಪರಿಹಾರ ನೀವೇ ಕಂಡುಕೊಳ್ಳಿ!!

ಅಡುಗೆ ಮನೆಯಲ್ಲಿ (Kitchen)ಆಹಾರ ಬೇಯಿಸಲು ಪ್ರೆಶರ್ ಕುಕ್ಕರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಕೆಲವೊಮ್ಮೆ ಕುಕ್ಕರ್ ಬಳಸುವಾಗ ಕೆಲವು ಸಮಸ್ಯೆಗಳನ್ನು ಎದುರಾಗುತ್ತವೆ. ಕುಕ್ಕರ್ ವಿಷಲ್ ಹಾಕಲು ಆರಂಭಿಸಿದಾಗ ಕುಕ್ಕರ್ ಒಳಗಡೆಯಿಂದ ಹಬೆ ನೀರು ಬುರ್ ಬುರ್ (Whistle sound) ಎಂದು ಹೊರ ಬರುವ(Pressure Cooker Leakage) ಸಮಸ್ಯೆ ಹೆಚ್ಚಿನವರನ್ನು ಕಾಡುತ್ತದೆ. ಕುಕ್ಕರ್‌ನಲ್ಲಿ ಆಹಾರವನ್ನು ಬೇಯಿಸುವ ಮೊದಲು, ರಬ್ಬರ್ ಗ್ಯಾಸ್ಕೆಟ್ ಅನ್ನು ಆಗಾಗ ಪರಿಶೀಲಿಸಬೇಕು. ಅಡುಗೆ ಮಾಡಿದ ಬಳಿಕ, ರಬ್ಬರ್ ಅನ್ನು ತಣ್ಣನೆಯ ನೀರಿನಲ್ಲಿ ಇಲ್ಲವೇ ಫ್ರೀಜರ್ನಲ್ಲಿ ಇಡುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಗ್ಯಾಸ್ಕೆಟ್ ಸಹ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ಅಡುಗೆ ಮಾಡುವಾಗ ಕುಕ್ಕರ್‌ನಲ್ಲಿ ಅಗತ್ಯ ಪ್ರಮಾಣದಲ್ಲಿ ಮಾತ್ರವೇ ನೀರು ತುಂಬಿಸಿರಬೇಕು. ಸರಿಯಾದ ಅಳತೆಯಲ್ಲಿ ಕುಕ್ಕರ್ ನಲ್ಲಿ ನೀರು ಶೇಖರಿಸದೆ ಇದ್ದರೆ ಕುಕ್ಕರ್ ಕೂಗಿದಾಗ, ಆ ಶಬ್ದದ ಜೊತೆಗೆ ನೀರು ಕೂಡ ಹೊರಬರುತ್ತದೆ. ಹೀಗಾಗಿ, ಆಹಾರದಲ್ಲಿ ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಬೇಕು.

ಅಡುಗೆ ಮಾಡುವ ಕುಕ್ಕರ್ ಕುದಿಯುತ್ತಿರುವಾಗ ಆಗಾಗ್ಗೆ ನೀರು ಬರುತ್ತಿದ್ದರೆ ಮೊದಲು ಪ್ರೆಶರ್ ಕುಕ್ಕರ್ ವಿಷಲ್ ಅನ್ನು ಎಚ್ಚರಿಕೆಯಿಂದ ಗಮನಿಸಿ. ಅನೇಕ ಬಾರಿ ಆಹಾರವು ಆ ವಿಷಲ್ ಸಂದಿನಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ. ಕುಕ್ಕರ್‌ ಸೀಟಿಯು ಕೊಳಕಾಗಿದ್ದ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಕುಕ್ಕರ್‌ನಿಂದ ನೀರು ಬರದ ಹಾಗೆ ತಡೆಯಲು ಒಂದು ಹನಿ ಎಣ್ಣೆಯನ್ನು ಸೇರಿಸಿ, ಇದರಿಂದ ಕುಕ್ಕರ್‌ನಿಂದ ನೀರು ಸೋರುವುದಿಲ್ಲ. ಕುಕ್ಕರ್‌ನಲ್ಲಿ ಮಾಡಿರುವ ಆಹಾರ ಕೂಡ ಅದಕ್ಕೆ ಅಂಟಿಕೊಳ್ಳುವುದಿಲ್ಲ. ಈ ರೀತಿಯಾಗಿ ಕುಕ್ಕರ್‌ನಲ್ಲಿ ಬೇಯಿಸಿದ ಆಹಾರವು ಹೆಚ್ಚು ಮೃದುವಾಗಿರುತ್ತದೆ.

ಇದನ್ನೂ ಓದಿ: BPL ಕಾರ್ಡ್ ಹೊಂದಿರುವ ಇಂತವರಿಗೆ ಇನ್ಮುಂದೆ ಯಾವುದೇ ಸೌಲಭ್ಯಗಳಿಲ್ಲ !! ಸರ್ಕಾರದಿಂದ ಖಡಕ್ ಸೂಚನೆ

Leave A Reply

Your email address will not be published.