WhatsApp new features: ವಾಟ್ಸಪ್ ಗೆ ಬಂತು ಮತ್ತೊಂದು ಹೊಸ ಅಪ್ಡೇಟ್- ಏನೆಂದು ತಿಳಿದ್ರೆ ಖಂಡಿತಾ ಬೆರಗಾಗ್ತೀರಾ!!

Technology news Whatsapp introduce new feature to protect ip address in calls

WhatsApp new features: ಮೆಟಾ ಮಾಲೀಕತ್ವದ ವಾಟ್ಸಾಪ್ ಅಪ್ಲಿಕೇಶನ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದ್ದು, ಲೀಡಿಂಗ್ ಇನ್‌ಸ್ಟಂಟ್ ಮೆಸೆಜ್ ಪ್ಲಾಟ್‌ಫಾರ್ಮ್ ಆಗಿದೆ. ವಾಟ್ಸಾಪ್ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದ್ದು, ಇದೀಗ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ‘ಪ್ರೊಟೆಕ್ಟ್‌ IP ಅಡ್ರೆಸ್‌ ಇನ್‌ ಕಾಲ್ಸ್‌ (Protect IP address in calls) ಫೀಚರ್ಸ್‌ ಸೇರ್ಪಡೆ ಮಾಡಿದ್ದು, ಇದರಿಂದ ಬಳಕೆದಾರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಯಾವುದೇ ಕರೆಗಳನ್ನು ಸ್ವೀಕರಿಸುವಾಗ ಬಳಕೆದಾರರ ಪ್ರೈವೆಸಿಯನ್ನು ಹೆಚ್ಚಿಸಲಿದೆ.

ಹೌದು, ವಾಟ್ಸಾಪ್‌ Protect IP address in calls ಫೀಚರ್ಸ್‌ ಪರಿಚಯಿಸಿದೆ. ಇದು ಕರೆಗಳನ್ನು ಮಾಡುವಾಗ ನಿಮ್ಮ IP ಅಡ್ರೆಸ್‌ ಅನ್ನು ಮರೆಮಾಡುವ ಆಯ್ಕೆ ನೀಡಲಿದೆ. ಇದರಿಂದ ನಿಮ್ಮ ಕರೆಗಳನ್ನು ಇತರ ವ್ಯಕ್ತಿಗೆ ನೇರವಾಗಿ ಸಂಪರ್ಕಿಸುವ ಬದಲು ಕಂಪನಿಯ ಸರ್ವರ್‌ಗಳ ಮೂಲಕ ಪ್ರಸಾರ ಮಾಡುತ್ತದೆ. ಹಾಗಾದ್ರೆ ವಾಟ್ಸಾಪ್‌ನ ಈ ಫೀಚರ್ಸ್‌ನ (WhatsApp new features) ಕಾರ್ಯ ವೈಖರಿ ಬಗ್ಗೆ ಇಲ್ಲಿ ತಿಳಿಯಿರಿ.

ವಾಟ್ಸಾಪ್‌ಗೆ ಸೇರ್ಪಡೆ ಆಗಿರುವ Protect IP address in calls ಫೀಚರ್ಸ್‌, ನಿಮ್ಮ ಐಪಿ ಅಡ್ರೆಸ್‌ ಅನ್ನು ಸೆಕ್ಯುರ್‌ ಮಾಡಲಿದೆ. ಇದು ಇಬ್ಬರು ಬಳಕೆದಾರರ ನಡುವಿನ ಕರೆಗಳನ್ನು WhatsApp ನಲ್ಲಿ ಹೇಗೆ ಸಂಪರ್ಕಿಸಲಾಗಿದೆ ಎಂಬುದನ್ನು ಬದಲಾಯಿಸುತ್ತದೆ. ಇದರಿಂದ ನೀವು ಕರೆ ಮಾಡಿದರು ಅಥವಾ ಕರೆ ಸ್ವೀಕರಿಸಿದರೂ ಕೂಡ ನಿಮ್ಮ ಐಪಿ ಅಡ್ರೆಸ್‌ ಕಾಣುವುದಿಲ್ಲ. ಇದಕ್ಕಾಗಿ ವಾಟ್ಸಾಪ್‌ ಎಲ್ಲಾ ಕರೆಗಳನ್ನು ಕಂಪನಿಯ ಸರ್ವರ್‌ಗಳ ಮೂಲಕ ಪ್ರಸಾರ ಮಾಡಲಿದ್ದು, ಪೀರ್-ಟು-ಪೀರ್ ಸಂಪರ್ಕವನ್ನು ಹೊಂದಿಸಲಿದೆ.

ಇದರಿಂದ ನಿಮ್ಮ IP ಅಡ್ರೆಸ್‌ ಅನ್ನು ಹೈಡ್‌ ಮಾಡಲು ಸಾದ್ಯವಾಗಲಿದ್ದು, ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತದೆ. ಆದರೆ ಈ ಕರೆಯ ಸಂಭಾಷಣೆಗಳು ಕೂಡ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್‌ ಆಗಿರಲಿದೆ. ಸದ್ಯ ಈ ಹೊಸ ಆಯ್ಕೆಯನ್ನು ಆಕ್ಟಿವ್‌ ಮಾಡುವ ಸೆಟ್ಟಿಂಗ್ iOS ಮತ್ತು Android ನಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. ಇನ್ನು ಈ ಹೊಸ ಫೀಚರ್ಸ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಿವ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

ಮೊದಲಿಗೆ ನಿಮ್ಮ ವಾಟ್ಸಾಪ್‌ ಅನ್ನು ಅಪ್ಡೇಟ್‌ ಮಾಡಿ. ನಂತರ ವಾಟ್ಸಾಪ್‌ ಸೆಟ್ಟಿಂಗ್ಸ್‌ ಮೆನು ತೆರೆಯಿರಿ ಮತ್ತು ಗೌಪ್ಯತೆ ಟ್ಯಾಪ್ ಮಾಡಿ. ಈಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅಡ್ವಾನ್ಸಡ್ ಟ್ಯಾಪ್ ಮಾಡಿ. ನಂತರ ಹೊಸ ಪ್ರೈವೆಸಿ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು ಕರೆಗಳ ಸ್ವಿಚ್‌ನಲ್ಲಿ IP ವಿಳಾಸವನ್ನು ರಕ್ಷಿಸಿ ಟ್ಯಾಪ್ ಮಾಡಿ.

ಇದನ್ನೂ ಓದಿ: ಚುನಾವಣಾ ಅಕಾಡಕ್ಕಿಳಿದ ಮಠಾಧೀಶರು- ಯಾರ್ಯಾರು ಎಲ್ಲೆಲ್ಲಿಂದ ಸ್ಫರ್ಧೆ ?!

Leave A Reply

Your email address will not be published.