SmartPhone new features: ಈ ಮೊಬೈಲ್ ಕೊಂಡುಕೊಂಡ್ರೆ ಯಾವುದೇ ಭಾಷೆಯಲ್ಲೂ ನೀವು ಮಾತಾಡ್ಬೋದು – ಅರೆ ಹೇಗೆ ಅಂತೀರಾ..!?
Technology NEWS new features this smartphone can translate any language call into your language
SmartPhone new features: ಜನಪ್ರಿಯ ಮೊಬೈಲ್ ಕಂಪೆನಿಗಳಲ್ಲಿ ಒಂದಾದ ಸ್ಯಾಮ್ಸಂಗ್ ತನ್ನ ಕಂಪೆನಿಯಿಂದ ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ಎಂಬಂತೆ ಇದುವರೆಗೆ ಯಾವ ಮೊಬೈಲ್ ಕಂಪನಿಯು ಮಾರುಕಟ್ಟೆಗೆ ತಂದಿರದ ಒಂದು ಹೊಸ ವೈಶಿಷ್ಟ್ಯವನ್ನು (SmartPhone new features) ತರೋಕೆ ಸ್ಯಾಮ್ಸಂಗ್ (Samsung) ಕಂಪನಿಯು ಮುಂದಾಗಿದೆ.
ಸ್ಯಾಮ್ಸಂಗ್ Galaxy AI ಯನ್ನು ಪರಿಚಯಿಸಿದ್ದು ಈ ಹೊಸ ವೈಶಿಷ್ಟ್ಯವು ಯಾವ ರೀತಿ ಇದೆ ಎಂದರೆ ಮತ್ತೊಬ್ಬರ ಭಾಷೆ ನಿಮಗೆ ಅರ್ಥವಾಗದೇ ಇದ್ದರೂ ಸಹ ನೀವು ನಿರಾಳವಾಗಿ ಅವರೊಂದಿಗೆ ಮಾತನಾಡಬಹುದಾಗಿದೆ. ಹೆಸರೇ ತಿಳಿಸುವಂತೆ ಈ ಆಯ್ಕೆಯು ನಿಮಗೆ ಕರೆಯನ್ನು ಅನುವಾದ ಮಾಡಲು ಸಹಾಯ ಮಾಡುತ್ತದೆ. AI ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನೀವು ಬೇರೆ ಭಾಷೆಯ ಕರೆಗಳು ಹಾಗೂ ಮೆಸೇಜ್ಗಳನ್ನು ನಿಮಗೆ ಗೊತ್ತಿರುವ ಭಾಷೆಗೆ ಅನುವಾದಿಸಿಕೊಳ್ಳಬಹುದಾಗಿದೆ. ಅಲ್ಲದೇ ಈ ವೈಶಿಷ್ಟ್ಯವು ನಿಮ್ಮ ಡೇಟಾ ಹಾಗೂ ಗೌಪ್ಯತೆಗೆ ಯಾವುದೇ ರೀತಿಯ ತೊಂದರೆಯನ್ನೂ ಉಂಟು ಮಾಡೋದಿಲ್ಲ ಎಂದು ಸ್ಯಾಮ್ಸಂಗ್ ಕಂಪನಿಯು ಮಾಹಿತಿ ನೀಡಿದೆ.
AI ತಂತ್ರಜ್ಞಾನವನ್ನು ಬಳಸಿ ಮೊಬೈಲ್ ಕರೆಗಳನ್ನು ಅನುವಾದ ಮಾಡುವ ಈ ಹೊಸ ವೈಶಿಷ್ಟ್ಯವು ಶೀಘ್ರದಲ್ಲಿಯೇ ಗ್ಯಾಲಕ್ಸಿ ಫೋನ್ ಬಳಕೆದಾರರಿಗೆ ಸಿಗಲಿದೆ ಎನ್ನಲಾಗಿದೆ. ಇದರಿಂದ ನೀವು ಈ ರೀತಿಯ ಕೆಲಸಕ್ಕಾಗಿ ಯಾವುದೋ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಕೆ ಮಾಡಿ ಗೌಪ್ಯತೆಗಳ ಬಗ್ಗೆ ಅನುಮಾನ ಪಡುವ ಅಗತ್ಯ ಇರೋದಿಲ್ಲ. ಇದರಿಂದ ನೀವು ನಿಮಗೆ ಗೊತ್ತಿಲ್ಲದ ಭಾಷೆಯನ್ನು ಮಾತನಾಡುವ ವ್ಯಕ್ತಿಯೊಂದಿಗೂ ನಿರಾಳವಾಗಿ ಮಾತನಾಡಬಹುದಾಗಿದೆ.
Galaxy AI 2024 ಆರಂಭದಲ್ಲಿ ಲಾಂಚ್ಗೊಳ್ಳಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ಆದರೆ ಸ್ಯಾಮ್ಸಂಗ್ನ ಯಾವ ಫೋನ್ನಿಂದ ಈ ಸೌಕರ್ಯ ಸಿಗಲಿದೆ ಎಂಬುದರ ಬಗ್ಗೆ ಕಂಪನಿಯು ಇನ್ನೂ ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ವಾಟ್ಸಪ್ ಗೆ ಬಂತು ಮತ್ತೊಂದು ಹೊಸ ಅಪ್ಡೇಟ್- ಏನೆಂದು ತಿಳಿದ್ರೆ ಖಂಡಿತಾ ಬೆರಗಾಗ್ತೀರಾ!!