Yuva Nidhi Yojane: ಸರ್ಕಾರದ 5ನೇ ಗ್ಯಾರಂಟಿ ‘ಯುವನಿಧಿ’ ಜಾರಿಗೆ ಮುಹೂರ್ತ ಫಿಕ್ಸ್ – ಈ ದಿನದಿಂದಲೇ ಖಾತೆಗೆ ಹಣ

Karnataka news state government to implement Congress 5th guarantee yuva nidhi yojane

Yuva Nidhi Yojane: ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ(Congress Government)ಮಹತ್ವಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳ(Guarantee Schemes) ಪೈಕಿ ಕರ್ನಾಟಕ ಯುವನಿಧಿ ಯೋಜನೆ ಕೂಡ ಒಂದು. ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆ (Yuva Nidhi Yojane)ಡಿಪ್ಲೋಮಾ, ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ದೆಸೆಯಲ್ಲಿ ರಾಜ್ಯ ಸರ್ಕಾರ ಭರದ ತಯಾರಿ ನಡೆಸುತ್ತಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತದೆ. ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ 1,500 ರೂ. ನೀಡಲಾಗುತ್ತದೆ. ಅದೇ ರೀತಿ, ಪದವಿ ಪೂರ್ಣಗೊಳಿಸಿದವರಿಗೆ 3,000 ರೂ. ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ 2024 ರ ಜನವರಿಯಿಂದ ಈ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಶಿಕ್ಷಣ ಮುಗಿಸಿ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದೇ ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗಬಾರದು ಜೊತೆಗೆ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ನೆರವಾಗಲಿ ಎಂಬ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೆ ತರಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪರವರು ಹೇಳಿದ್ದಾರೆ.

ಇದನ್ನೂ ಓದಿ:Supreme court: ದೇಶದ ಎಲ್ಲಾ MP, MLAಗಳಿಗೆ ನಡುಕ ಹುಟ್ಟಿಸಿದ ಸುಪ್ರೀಂ ಕೋರ್ಟ್- ಬಂತು ನೋಡಿ ಹೊಸ ಆದೇಶ

Leave A Reply

Your email address will not be published.