Ration card: ಡಿಸೆಂಬರ್ ಅಂತ್ಯದೊಳಗೆ ಇಂತವರ ರೇಷನ್ ಕಾರ್ಡ್ ರದ್ದು – ಸರ್ಕಾರಿಂದ ಖಡಕ್ ನಿರ್ಧಾರ !!
Karnataka news ration Card of such people will be cancelled from December month latest news
Ration card: ರೇಷನ್ ಕಾರ್ಡ ವಿಚಾರವಾಗಿ ಸರ್ಕಾರವು ಹಲವಾರು ನಿಯಮಗಳನ್ನು ಜಾರಿಗೆ ತರುತ್ತದೆ. ಕೆಲವರು ಅದನ್ನು ಪಾಲಿಸಿದರೆ ಇನ್ನು ಕೆಲವರು ಬೇಕಾಬಿಟ್ಟಿಯಾಗಿ ಅದನ್ನು ನೆಗ್ಲೆಟ್ ಮಾಡುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಅಂತವರಿಗೆ ರುಚಿ ಮುಟ್ಟಿಸಲು ಮುಂದಾಗಿದ್ದು ಡಿಸೆಂಬರ್ ಅಂತ್ಯದೊಳಗೆ ಇವರೆಲ್ಲರ BPL ಕಾರ್ಡ್ ಗಳು ರದ್ದಾಗಲಿವೆ.
ಹೌದು, ಇಂದಿನ ದಿನಗಳಲ್ಲಿ ರೇಷನ್ ಕಾರ್ಡ್(Ration card) ಕೇವಲ ಪಡಿತರವನ್ನು ಪಡೆಯಲು ಮಾತ್ರ ಸೀಮಿತವಾಗಿಲ್ಲ. ಸರ್ಕಾರದ ಹಲವು ಯೋಜನೆಗಳನ್ನು ಪಡೆಯಲು ಇದು ಬಹಳ ಮುಖ್ಯ. ಅದರಲ್ಲಿಯೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ಎಲ್ಲಾ ಯೋಜನೆಯ ಪ್ರಯೋಜನಗಳೂ ಸಿಗುತ್ತಿದೆ. ಆದರೆ ಇಂದು ಎಲ್ಲಾ ರೀತಿಯ ಅನುಕೂಲ ಇದ್ದವರು ಸರ್ಕಾರಕ್ಕೆ ವಂಚಿಸಿ ಬಿಪಿಎಲ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದು ಸರ್ಕಾರದ ಯೋಜನೆಗಳನ್ನು ಪಡೆಯುತ್ತಿದ್ದಾರೆ. ಇದೀಗ ಸರ್ಕಾರ ಇಂಥವರನ್ನು ಪತ್ತೆ ಹಚ್ಚಿದ್ದು ಡಿಸೆಂಬರ್ ಅಂತ್ಯದೊಳಗೆ ಇವರೆಲ್ಲರ ರೇಷನ್ ಕಾರ್ಡ್ ಅನ್ನು ರದ್ಧುಮಾಡುವುದಲ್ಲದೆ ಅಲ್ಲದೆ ಕಠಿಣ ಕ್ರಮವನ್ನು ಕೂಡ ವಿಧಿಸಲಿದೆ.
ಅಂದಹಾಗೆ BPL ಕಾರ್ಡ್ ಪಡೆಯಲು ಈ ಮಾನದಂಡಗಳು ಇರಬೇಕೆಂದು ಸರ್ಕಾರ ಹೇಳಿದೆ.
• ನೂರು ಚದರ ಮೀಟರ್ ಗಿಂತಲೂ ದೊಡ್ಡ ಸ್ವಂತ ಮನೆಯನ್ನು (own house) ಹೊಂದಿರಬಾರದು.
• ಸ್ವಂತ 4 ಚಕ್ರದ ವಾಹನ (Own Car or Four Wheeler) ಅಥವಾ ಟ್ರ್ಯಾಕ್ಟರ್ ಹೊಂದಿರಬಾರದು
• ಯಾವುದೇ ಶಸ್ತ್ರಾಸ್ತ್ರ ಪರವಾನಿಗೆ ಪಡೆದುಕೊಂಡಿರಬಾರದು.
• ಹಳ್ಳಿಯಲ್ಲಿ ವಾರ್ಷಿಕ ಆದಾಯ ಎರಡು ಲಕ್ಷ ಹಾಗೂ ನಗರದಲ್ಲಿ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು.
ಇದನ್ನೂ ಓದಿ : Karnataka Congress: ಕಾಂಗ್ರೆಸ್ ನಿಂದ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!!