Jio Deepvali offer: ಜಿಯೋ ಗ್ರಾಹಕರಿಗೆ ದೀಪಾವಳಿ ಧಮಾಕ – ರಿಲಾಯನ್ಸ್ ನಿಂದ ಸಿಗಲಿದೆ ಈ ಭರ್ಜರಿ ಆಫರ್

Jio launches Swiggy One Lite subscription on prepaid plans as part of its Deepvali promotions

Swiggy One Lite subscription : ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲಯನ್ಸ್ ಜಿಯೋ (Relaince Jio)ಭರ್ಜರಿ ಯೋಜನೆಯನ್ನು(Jio Deepvali Offer) ಘೋಷಣೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಯೋಜನೆ ಲಾಂಚ್ ಮಾಡಲಾಗಿದೆ. ಈ ಪ್ರಿಪೇಯ್ಡ್ ಪ್ಲಾನ್ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯೂ(Swiggy One Lite subscription)ಉಚಿತವಾಗಿ ದೊರೆಯಲಿದೆ.

 

ಜಿಯೋ- ಸ್ವಿಗ್ಗಿ ಜತೆಗಿನ ಪ್ಲಾನ್ ರೀಚಾರ್ಜ್ ಮಾಡಿಸುವವರ ಮೈ ಜಿಯೋ(MY JIo)ಖಾತೆಗೆ ಐವತ್ತು ರೂಪಾಯಿಯ ಕ್ಯಾಶ್ ಬ್ಯಾಕ್ ಕೂಡ ದೊರೆಯಲಿದೆಯಂತೆ. ಒಂದು ವೇಳೆ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು (Swiggy One Lite subscription)ಮೂರು ತಿಂಗಳ ಅವಧಿಗೆ ಪಡೆಯುವುದಾದರೆ ಅದಕ್ಕಾಗಿ 99 ರೂಪಾಯಿ ಯೋಜನೆ ರೂಪಿಸಲಾಗಿದೆ.ಜಿಯೋ ಪ್ರಿಪೇಯ್ಡ್ 866 ರೂಪಾಯಿಯ ಪ್ಲಾನ್ ಹಾಕಿಸಿಕೊಂಡರೆ, ಜಿಯೋ ಪ್ರಿಪೇಯ್ಡ್ ಗ್ರಾಹಕರು ಸ್ವಿಗ್ಗಿಯಲ್ಲಿ ಉಚಿತ ಡೆಲಿವರಿ ಅನುಕೂಲಗಳನ್ನು ಪಡೆದುಕೊಳ್ಳಬಹುದು. ಸ್ವಿಗ್ಗಿಯ ಆಹಾರ, ದಿನಸಿ ಮತ್ತು ಇತರ ವಿಭಾಗಗಳಿಗೂ ಅನ್ವಯವಾಗಲಿದೆ.

ರಿಲಯನ್ಸ್ ಜಿಯೋದ 866 ರೂಪಾಯಿಯ ಪ್ಲಾನ್ ಪಡೆದುಕೊಂಡರೆ ದಿನಕ್ಕೆ 2 ಜಿಬಿ ಡೇಟಾ ದೊರೆಯಲಿದೆ. ಇದಲ್ಲದೇ, ಅನಿಯಮಿತ ಕರೆ ಹಾಗೂ ಪ್ಲಾನ್ ಅಡಿಯಲ್ಲಿ ಚಂದಾದಾರರಿಗೆ ಅನಿಯಮಿತ 5ಜಿ ಡೇಟಾ ಕೂಡ ಸಿಗಲಿದೆ. ಇದರ ವ್ಯಾಲಿಡಿಟಿ 84 ದಿನಗಳ ಅವಧಿಗೆ ಇರಲಿದ್ದು, ಈ ಪ್ಲಾನ್ ನಲ್ಲಿ ಮೂರು ತಿಂಗಳ ಅವಧಿಗೆ ಸ್ವಿಗ್ಗಿ ಒನ್ ಲೈಟ್ ಸಬ್ ಸ್ಕ್ರಿಪ್ಷನ್ ಮತ್ತು ಜಿಯೋಸೂಟ್ ಅಪ್ಲಿಕೇಷನ್ ಗಳಿಗೆ ಸಂಪರ್ಕ ಕೂಡ ದೊರೆಯಲಿದೆ.

ಸ್ವಿಗ್ಗಿ ಒನ್ ಲೈಟ್ ಸಬ್ ಸ್ಕ್ರಿಪ್ಷನ್ ನಿಂದ ನಿಮಗೆ ಸಿಗಲಿದೆ ಭರಪೂರ ಪ್ರಯೋಜನ:
*149 ರೂಪಾಯಿ ಮೇಲ್ಪಟ್ಟ ಆಹಾರ ಪದಾರ್ಥ ಹತ್ತು ಉಚಿತ ಹೋಮ್ ಡೆಲಿವರಿ ಪ್ರಯೋಜನ ಸಿಗಲಿದೆ.
* 60 ರೂಪಾಯಿ ಮೇಲ್ಪಟ್ಟ ಜೆನಿ ಡೆಲಿವರಿಗಳ ಮೇಲೆ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ.
* 199 ರೂಪಾಯಿ ಮೇಲ್ಪಟ್ಟ ಹತ್ತು ಇನ್ ಸ್ಟಾಮಾರ್ಟ್ಮಾರ್ಟ್ ಆರ್ಡರ್ ಗಳ ಹತ್ತು ಉಚಿತ ಹೋಮ್ ಡೆಲಿವರಿ ಪ್ರಯೋಜನ ಸಿಗಲಿದೆ.
* ಆಹಾರ ಮತ್ತು ಇನ್ ಸ್ಟಾಮಾರ್ಟ್ ಆರ್ಡರ್ ಗಳಿಗೆ ಯಾವುದೇ ಹೆಚ್ಚು ಶುಲ್ಕಗಳಿರುವುದಿಲ್ಲ.
* ಇಪ್ಪತ್ತು ಸಾವಿರಕ್ಕೂ ಹೆಚ್ಚು ಆಹಾರ ಡೆಲಿವರಿ ರೆಸ್ಟೋರೆಂಟ್ ಗಳಲ್ಲಿ ಸಾಮಾನ್ಯವಾಗಿ ಸಿಗುವಂಥ ಆಫರ್ ಗಳಿಗಿಂತ 30 ಪರ್ಸೆಂಟ್ ತನಕ ಹೆಚ್ಚುವರಿ ರಿಯಾಯಿತಿ ಸಿಗಲಿದೆ.

 

ಇದನ್ನು ಓದಿ: Hair Care: ಆಹಾರದಲ್ಲಿ ಇದನ್ನು ಸೇವಿಸುವುದರಿಂದ ವಯಸ್ಸಾದರೂ ನಿಮ್ಮ ಕೂದಲು ಬಿಳಿ ಆಗಲ್ಲ !!

Leave A Reply

Your email address will not be published.