Hair Care: ಆಹಾರದಲ್ಲಿ ಇದನ್ನು ಸೇವಿಸುವುದರಿಂದ ವಯಸ್ಸಾದರೂ ನಿಮ್ಮ ಕೂದಲು ಬಿಳಿ ಆಗಲ್ಲ !!

Hair Care Tips home care remidies to white hair removal

Hair Care: ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ(Hair Care), ಉದ್ದ ಮತ್ತು ಕಪ್ಪು ಆಗಿರಬೇಕೆಂದು ಬಯಸುವುದು ಸಹಜ. ವಯಸ್ಸಾದಂತೆ, ನಮ್ಮ ತ್ವಚೆ ಕಾಂತಿಯನ್ನು ಕಳೆದುಕೊಂಡ ಹಾಗೆ, ನಮ್ಮ ತಲೆ ಕೂದಲಿನ ಬಣ್ಣ ಕೂಡ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರು, ಸಣ್ಣ ವಯಸ್ಸಿಗೆ ಕೂದಲು ಬೆಳ್ಳಗೆ ಆಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಪರಿಸರ ಮಾಲಿನ್ಯದಿಂದ ಕೂದಲು ಉದುರುವಿಕೆ(Hair Fall Problem), ಬಿಳಿ ಕೂದಲು(White Hair), ಕೂದಲು ಒಣಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ನೀವೇನಾದರೂ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ, ಇಲ್ಲಿದೆ ನೋಡಿ ಸರಳ ಪರಿಹಾರ!!!

ಕೆಲವರಿಗೆ ವಯಸ್ಸಾಗುವ ಮುನ್ನ ಕೂದಲು ಬೆಳ್ಳಗಾಗುತ್ತದೆ. ಇದನ್ನು ತಡೆಯಲು ನಿಮ್ಮ ಆಹಾರದಲ್ಲಿ ಇದನ್ನು ಮಿಸ್ ಮಾಡದೇ ಸೇವಿಸಿ. ಆಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿರುವ ಆಹಾರ ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು. ಇದರಿಂದ ಕೂದಲಿನ ಕಿರುಚೀಲವನ್ನು ಹಾನಿಗೊಳಿಸುವಂತಹ ಫ್ರೀರಾಡಿಕಲ್ಸ್ ಗಳನ್ನು ತಟಸ್ಥಗೊಳಿಸಬಹುದು. ಅಷ್ಟೇ ಅಲ್ಲದೆ, ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ತಾಮ್ರ ಸಮೃದ್ಧವಾಗಿರುವ ಆಹಾರ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದ ಮೆಲನಿನ್ ಅಂಶವನ್ನು ಹೆಚ್ಚಾಗುತ್ತದೆ. ಇದರಿಂದ ಕೂದಲು ಕಪ್ಪಾಗಿರುತ್ತದೆ. ಹೀಗಾಗಿ, ಮಾಂಸಗಳು, ಬೀಜಗಳು, ಡಾರ್ಕ್ ಚಾಕೋಲೆಟ್ ಮುಂತಾದವುಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.

ನಿಮ್ಮ ಕೂದಲು ಕಪ್ಪಾಗಿರಲು ವಿಟಮಿನ್ ಬಿ12 ಅನ್ನು ಸೇವಿಸಿ. ಅಂದರೆ, ಡೈರಿ ಉತ್ಪನ್ನಗಳು, ಮೊಟ್ಟೆಗಳು, ಮೀನು, ಮಾಂಸ ಮುಂತಾದವುಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ. ಇದಲ್ಲದೇ, ಸಸ್ಯಹಾರಿಗಳು ಧಾನ್ಯಗಳು, ಸೊಪ್ಪು, ಮತ್ತು ಸೋಯಾ, ಬಾದಾಮಿ ಹಾಲನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

 

ಇದನ್ನು ಓದಿ: Chanakya Niti: ಚಾಣಕ್ಯ ಹೇಳಿದ ಈ 7 ನೀತಿಪಾಠಗಳನ್ನು ಅರಿತು ನಡೆದರೆ ನಿಮ್ಮ ಲೈಫ್ 100% ಸಕ್ಸಸ್ !!

Leave A Reply

Your email address will not be published.