Snake Bite: ಕಚ್ಚಿದ್ದು ಇದೇ ಹಾವೆಂದು ಗುರುತಿಸೋದು ಹೇಗೆ ?! ಇಲ್ಲಿದೆ ನೋಡಿ ಜೀವ ಉಳಿಸುವಂತ ಮಾಹಿತಿ

Lifestyle snake bite can be identified through these things

Snake Bite: ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ರೀತಿಯ ಭಯ ಇರುವುದು ಸಹಜ. ಕೆಲವರಿಗೆ ರಾತ್ರಿ ಎಂದರೆ ಭಯ, ಮತ್ತೆ ಕೆಲವರಿಗೆ ಕತ್ತಲು, ಹಾವು, ಜಿರಳೆ ಎಂದರೆ ಸಾಕು ಭಯದಲ್ಲಿ ಕಿರುಚಾಡುವುದನ್ನು ನೋಡಿರಬಹುದು. ಹಾವು(Snake)ಎಂದರೆ ಹೆದರದೇ ಇರುವವರು ವಿರಳ. ಹಾವುಗಳಲ್ಲಿ ಅನೇಕ ಪ್ರಭೇದಗಳಿರುವುದು ಗೊತ್ತಿರುವ ಸಂಗತಿ.

ಪ್ರತಿಯೊಂದು ಪ್ರಬೇಧದ ಹಾವುಗಳು ವಿಭಿನ್ನ ದೇಹ ರಚನೆಯನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೇ, ಒಂದು ಜಾತಿಯ ಹಾವುಗಳು ಮತ್ತೊಂದು ಜಾತಿಯ ಹಾವುಗಳಿಗಿಂತ ವಿಭಿನ್ನವಾಗಿರುತ್ತದೆ.ಒಂದು ವೇಳೆ, ಹಾವು ಕಚ್ಚಿದರೆ +Snake Bite)ಅದು ಯಾವ ಹಾವು ಎಂಬುದು ಕೂಡಲೇ ಹೆಚ್ಚಿನವರಿಗೆ ತಿಳಿಯುವುದಿಲ್ಲ. ಆದರೆ, ಹಾವು ಕಚ್ಚಿದ ಸಂದರ್ಭ ನಿರ್ಲಕ್ಷ್ಯ ಧೋರಣೆ ತೋರುವುದು ಕೂಡ ಸರಿಯಲ್ಲ.ಒಂದು ವೇಳೆ ಹಾವು ವಿಷಪೂರಿತವಾಗಿದ್ದರೆ ಜೀವಕ್ಕೆ ಕುತ್ತು ಬಂದರು ಅಚ್ಚರಿಯಿಲ್ಲ.

ವಿಷಪೂರಿತ ಹಾವುಗಳು (dangerous snake)ಎರಡೂ ಕೋರೆಹಲ್ಲುಗಳನ್ನು ಬಳಸಿ ಕಚ್ಚುತ್ತವೆ. ಅಷ್ಟೇ ಅಲ್ಲದೆ, ವಿಷರಹಿತ ಹಾವುಗಳು ಮೂರಕ್ಕಿಂತ ಹೆಚ್ಚು ಬಾರಿ ಕಚ್ಚುತ್ತವೆ. ಹಾವು ಕಚ್ಚಿದ ಗುರುತು ಕಂಡುಬರುತ್ತದೆ. ಹಾವು ಕಚ್ಚಿದ ಜಾಗದಲ್ಲಿ ಕಪ್ಪು ಚುಕ್ಕೆಯಾಗಿ ಬದಲಾಗುತ್ತದೆ. ನಾಗರಹಾವು ವಿಷಕಾರಿ ಹಾವುಗಳಲ್ಲಿ ನಾಗರಹಾವು ಕೂಡ ಒಂದಾಗಿದ್ದು, ಬಿಳಿ ಪಟ್ಟೆಯುಳ್ಳ ದೇಹವನ್ನು ಹೊಂದಿದ್ದು ತುಂಬಾ ತೆಳ್ಳಗಿರುತ್ತದೆ. ಇದರ ವಯಸ್ಸಿನ ಆಧಾರದ ಮೇರೆಗೆ ನಾಗರಹಾವು 20 ಇಂಚುಗಳಿಂದ 8 ರಿಂದ 9 ಅಡಿಗಳವರೆಗೆ ಇರುತ್ತದೆ. ಹಾವು ಕಚ್ಚಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಹಾವು ಕಚ್ಚಿದ ಸಂದರ್ಭ ಮುಂಜಾಗ್ರತಾ ಕ್ರಮ ವಹಿಸಿಯೇ ಚಿಕಿತ್ಸೆ ನೀಡುವುದು ಒಳ್ಳೆಯದು.

 

ಇದನ್ನು ಓದಿ: Supreme Court Warns: ತ್ಯಾಜ್ಯ ವಿಲೇವಾರಿ ಕುರಿತು ಸುಪ್ರೀಂ ನಿಂದ ಬಂತು ಮಹತ್ವದ ಆದೇಶ

Leave A Reply

Your email address will not be published.