Suicide: ವಿವಾಹಿತ ಮಹಿಳೆಯ ಜೊತೆ ಪ್ರೇಮ; ಮನೆಯವರ ವಿರೋಧ, ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಸಾವು!!!

Share the Article

ತಮ್ಮ ಪ್ರೀತಿಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬೇಸರಗೊಂಡ ಜೋಡಿಯೊಂದು ಮೈ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಖಾಸಗಿ ನರ್ಸಿಂಗ್‌ ಕಾಲೇಜಿನ ವಿವಾಹಿತೆ ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರಿಯಮ್ಮ ಅಗ್ರಹಾರ ನಿವಾಸಿ ಸೌಮಿನಿ ದಾಸ್‌ (21), ಅಭಿಲ್‌ ಅಬ್ರಾಹಂ (25) ಮೃತರು.

ದೊಡ್ಡ ಗುಬ್ಬಿ ಸಮೀಪದ ಡಿ ಮ್ಯಾಕ್ಸ್‌ ಸರ್ವಿಸ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಭಾನುವಾರ ಇಬ್ಬರು ಬೆಂಕಿ ಹಚ್ಚಿ ಈ ಕೃತ್ಯವೆಸಗಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಸೌಮಿನಿ ದಾಸ್‌ ಬೆಂಕಿಯಲ್ಲಿ ಬೆಂದು ಮೃತ ಹೊಂದಿದ್ದಾಳೆ. ಅಬ್ರಾಹಂ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ, ಆದರೆ ಚಿಕಿತ್ಸೆ ಫಲಿಸದೆ ಆತ ರಾತ್ರಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದ ಸೌಮಿನಿ ದಾಸ್‌, ಎರಡನೇ ವರ್ಷದ ನರ್ಸಿಂಗ್‌ ಓದುತ್ತಿದ್ದಳು. ಈಕೆಗೆ ಎರಡು ವರ್ಷದ ಹಿಂದೆಯೇ ಮದುವೆಯಾಗಿತ್ತು. ಇನ್ನು ನರ್ಸ್‌ ಸರ್ವಿಸ್‌ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂ ಗೆ ಸೌಮಿನಿ ದಾಸ್‌ಗೆ ಪರಿಚಯವಾಗಿದೆ. ಕಾಲೇಜಿಗೆ ರಜೆ ಅಥವಾ ಬಿಡುವಿನ ಸಮಯದಲ್ಲಿ ಸೌಮಿನಿದಾಸ್‌ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ಪತಿಗೆ ಕೂಡಾ ಈಕೆ ಅಬ್ರಾಹಂ ನ ಪರಿಚಯ ಮಾಡಿಸಿದ್ದಳು.

ಆದರೆ ಅನಂತರ ಇವರಿಬ್ಬರು ಆತ್ಮೀಯರಾಗಿದ್ದಾರೆ. ಇತ್ತೀಚೆಗೆ ಈಕೆ ತನ್ನ ಪತಿಗೆ ತನ್ನ ಪ್ರೀತಿಯ ಬಗ್ಗೆ ಫೋನನಲ್ಲಿ ಹೇಳಿದ್ದಳೆನ್ನಲಾಗಿದೆ. ಅನಂತರ ಈ ಘಟನೆ ನಡೆದಿದೆ.

Leave A Reply