Tirupati Darshan Tickets: ವೈಕುಂಠ ಏಕಾದಶಿಯಂದು ತಿಮ್ಮಪ್ಪನ ದರ್ಶನ ಮಾಡುವವರಿಗೆ TTD ಕಡೆಯಿಂದ ಗುಡ್ ನ್ಯೂಸ್ !!
Tirupati TTD to released ticket for Vaikunta ekadasi Dwara Darshan
Tirupati Darshan Tickets: ಭಾರತದಲ್ಲಿ ಒಂದೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ವೈಶಿಷ್ಯಗಳನ್ನು ಒಳಗೊಂಡಿದೆ. ಹಾಗೆಯೇ ಭಾರತದ ಶ್ರೀಮಂತ ದೇವಾಲಯವಾದ ‘ಕಲಿಯುಗದ ವೈಕುಂಠ’ ಅಂತಾನೇ ಕರೆಯಲ್ಪಡುವ ತಿರುಪತಿ ತಿಮ್ಮಪ್ಪನ ಆವಾಸ ಸ್ಥಾನ ದ ಭೇಟಿಗೆ ಟಿಟಿಡಿ (Tirupati Darshan Tickets) ಕಡೆಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಹೌದು, ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಹೋಗುವವರಿಗೆ ಟಿಟಿಡಿ ಗುಡ್‌ನ್ಯೂಸ್ ನೀಡಿದೆ. ಸಾಮಾನ್ಯವಾಗಿ ವೈಕುಂಠ ಏಕಾದಶಿಯ ಸಮಯದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಿರುತ್ತದೆ. ಇದೆ ಕಾರಣಕ್ಕೆ ಟಿಟಿಡಿ ದರ್ಶನ ಟಿಕೆಟ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ಅದರಂತೆ ಸಾಮಾನ್ಯ ಯಾತ್ರಾರ್ಥಿಗಳಿಗೆ 4.25 ಲಕ್ಷ ಸಮಯ-ಸ್ಲಾಟ್ ಸರ್ವ ದರ್ಶನ ಟೋಕನ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಇನ್ನು ಈ ದರ್ಶನ ಟೋಕನ್‌ಗಳು ಡಿಸೆಂಬರ್ 23 ರಿಂದ ತಿರುಪತಿಯ ಒಂಬತ್ತು ವಿವಿಧ ಪಾಯಿಂಟ್‌ಗಳಲ್ಲಿರುವ ಸುಮಾರು 100 ಕೌಂಟರ್‌ಗಳಲ್ಲಿ ಲಭ್ಯವಾಗಲಿವೆ.
ಇನ್ನು ವೈಕುಂಠ ದ್ವಾರ ದರ್ಶನವು ಡಿಸೆಂಬರ್ 23 ರಂದು ಪ್ರಾರಂಭವಾಗಲಿದ್ದು, ಜನವರಿ 1 ರವರೆಗೆ ನಡೆಯಲಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ. 10 ದಿನಗಳಲ್ಲಿ 4.25 ಲಕ್ಷ ಎಸ್‌ಎಸ್‌ಡಿ ಟೋಕನ್‌ಗಳನ್ನು ವಿತರಿಸಲಿದೆ. SSD ಟೋಕನ್‌ಗಳ ಜೊತೆಗೆ, TTD ನವೆಂಬರ್ 10 ರಿಂದ ಆನ್‌ಲೈನ್‌ನಲ್ಲಿ 300ರೂ. ಬೆಲೆಯ 2.25 ಲಕ್ಷ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡುವುದಾಗಿಯು ಹೇಳಿದೆ. ಅಲ್ಲದೆ ಹೆಚ್ಚುವರಿಯಾಗಿ, 20,000 ಶ್ರೀವಾಣಿ-ಟ್ರಸ್ಟ್ ಲಿಂಕ್ಡ್ ದರ್ಶನ ಟಿಕೆಟ್‌ಗಳನ್ನು ಸಹ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಇನ್ನು ಹಿಂದಿನ ವರ್ಷಗಳಂತೆಯೇ ವೈಕುಂಠ ದ್ವಾರದ ಅವಧಿಯಲ್ಲಿ ಶ್ರೀವಾಣಿ ಟಿಕೆಟ್ ಹೊಂದಿರುವವರಿಗೆ 300 ರೂ.ಗಳ ದರ್ಶನವನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಇದರೊಂದಿಗೆ ಶ್ರೀವಾರಿ ಪುಷ್ಪಯಾಗ ಮಾಡಿಸಬೇಕೆಂದು ಕೊಂಡವರಿಗಾಗಿ ನವೆಂಬರ್ 4 ರಿಂದ ಆನ್‌ಲೈನ್‌ನಲ್ಲಿ 1,000 ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರತಿ ಟಿಕೆಟ್‌ಗೆ ತಲಾ 700 ರೂ. ನಿಗಧಿಪಡಿಸಲಾಗಿದೆ. ಇದಲ್ಲದೆ ಶ್ರೀವಾರಿ ಟ್ರಸ್ಟ್ ಗೆ 10 ಸಾವಿರ ರೂ ದೇಣಿಗೆ ನೀಡುವವರು ಕೂಡ 300ರೂಪಾಯಿ ದರ್ಶನ ಟಿಕೆಟ್ ಖರೀದಿಸಬೇಕು. ಆದರೆ ಈ ಟಿಕೆಟ್‌ಗಳನ್ನು ಪಡೆಯುವ ಭಕ್ತರಿಗೆ ಶೀಘ್ರದರ್ಶನಕ್ಕೆ (ಜಯ ವಿಜಯದಿಂದ ಮಾತ್ರ) ಅವಕಾಶ ಇರಲಿದೆ.
ಇನ್ನು ಈ 10 ದಿನಗಳಲ್ಲಿ ವಿಐಪಿ ಬ್ರೇಕ್ ದರ್ಶನಗಳು, ಆರ್ಜಿತ ಸೇವಾ ದರ್ಶನಗಳು ಮತ್ತು ಶಿಶುಗಳನ್ನು ಹೊಂದಿರುವ ಪೋಷಕರು, ದೈಹಿಕ ವಿಕಲಚೇತನರು, ಹಿರಿಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಸೇರಿದಂತೆ ಇತರ ವಿಶೇಷ ದರ್ಶನಗಳನ್ನು ರದ್ದುಗೊಳಿಸುವುದಕ್ಕೆ ಟಿಟಿಡಿ ನಿರ್ಧರಿಸಿದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಿದವರ ಗಮನಕ್ಕೆ – ಸರ್ಕಾರದಿಂದ ನಿಮಗೆ ಭರ್ಜರಿ ಗುಡ್ ನ್ಯೂಸ್ !!