2000 Note Exchange: 2,000 ನೋಟು ಬದಲಾಣೆಗೆ ಬಂತು ಮತ್ತೊಂದು ಹೊಸ ನಿಯಮ- RBI ನಿಂದ ಘೋಷಣೆ

Business news 2000 note exchange new rules from RBI

2000 Note Exchange: 2000 ರೂಪಾಯಿ ನೋಟುಗಳ ವಿನಿಮಯದಲ್ಲಿ ಸಾರ್ವಜನಿಕರಿಗೆ ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಆರ್‌ಬಿಐ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ.

ಹೌದು, ಇನ್ನು ಮುಂದೆ ನಿಮ್ಮ ಖಾತೆಗೆ 2000 ರೂಪಾಯಿ ನೋಟು ಜಮಾ ಮಾಡಲು ಆರ್‌ಬಿಐ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಇದಕ್ಕಾಗಿ ದೇಶದ ಯಾವುದೇ ಅಂಚೆ ಕಚೇರಿಯ ಮೂಲಕ ಯಾವುದೇ ವ್ಯಕ್ತಿ ಆರ್‌ಬಿಐ ವಿತರಣಾ ಕಚೇರಿಗೆ ರೂ 2,000 ನೋಟು ಕಳುಹಿಸಬಹುದು ಮತ್ತು ಅದನ್ನು ತನ್ನ ಖಾತೆಗೆ ಜಮಾ ಮಾಡಬಹುದು. ಇದಲ್ಲದೇ 2000 ರೂಪಾಯಿ ನೋಟು ಬದಲಾಯಿಸಿಕೊಳ್ಳಲು (2000 Note Exchange) ಆರ್‌ಬಿಐ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ. ಇದನ್ನು ಟ್ರಿಪಲ್ ಲಾಕ್ ರೆಸೆಪ್ಟಾಕಲ್ (TLR) ಎಂದು ಕರೆಯಲಾಗುತ್ತದೆ.

ಮುಖ್ಯವಾಗಿ ಕರೆನ್ಸಿ ನೋಟುಗಳ ವಿನಿಮಯದಲ್ಲಿ ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಸೆಂಟ್ರಲ್ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. ಈ ವರ್ಷ ಮೇ 19 ರಂದು ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಅಂತಹ ನೋಟುಗಳನ್ನು ಹೊಂದಿರುವ ಸಾರ್ವಜನಿಕರು ಮತ್ತು ಕಂಪನಿಗಳು ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ಬದಲಾಯಿಸಲು ಅಥವಾ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲು ಮೊದಲು ತಿಳಿಸಲಾಯಿತು. ನಂತರ ಗಡುವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಅಕ್ಟೋಬರ್ 7 ರಂದು ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮತ್ತು ವರ್ಗಾವಣೆ ಸೇವೆಗಳನ್ನು ಮುಚ್ಚಲಾಯಿತು. ಅಕ್ಟೋಬರ್ 8 ರಿಂದ,19 RBI ಕಚೇರಿಗಳಲ್ಲಿ ಕರೆನ್ಸಿ ವಿನಿಮಯ ಮಾಡಿಕೊಳ್ಳಬಹುದು ಅಥವಾ ಅವರ ಬ್ಯಾಂಕ್ ಖಾತೆಗೆ ಸಮಾನ ಮೊತ್ತವನ್ನು ಜಮಾ ಮಾಡಬಹುದು ಎಂದು ತಿಳಿಸಲಾಗಿತ್ತು. ಆದರೆ, ಈಗ ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತಿಲ್ಲ. 2,000 ರೂಪಾಯಿ ನೋಟುಗಳನ್ನು 19 ಆರ್‌ಬಿಐ ಕಚೇರಿಗಳಲ್ಲಿ ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದಾಗಿದೆ.

ಸದ್ಯ ಟ್ರಿಪಲ್ ಲಾಕ್ ರೆಸೆಪ್ಟಾಕಲ್ (TLR) ಏಜೆನ್ಸಿ ಹೇಳಿಕೆಯ ಪ್ರಕಾರ, ನಾವು ಗ್ರಾಹಕರಿಗೆ 2000 ರೂಪಾಯಿ ನೋಟುಗಳನ್ನು ಅಂಚೆ ಮೂಲಕ ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತಿದ್ದೇವೆ ಎಂದು ಆರ್‌ಬಿಐ ಪ್ರಾದೇಶಿಕ ನಿರ್ದೇಶಕ ರೋಹಿತ್ ಪಿ.ದಾಸ್ ತಿಳಿಸಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ, ಇದುವರೆಗೆ 2000 ರೂಪಾಯಿ ನೋಟುಗಳ ಶೇಕಡಾ 97 ರಷ್ಟು ಮಾತ್ರ ಆರ್‌ಬಿಐಗೆ ಠೇವಣಿಯಾಗಿದೆ. ಆದರೆ ಇಲ್ಲಿಯವರೆಗೆ ರೂ.10,000 ಕೋಟಿ ಮೌಲ್ಯದ ರೂ.2000 ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ. ಈ ಸಂದರ್ಭದಲ್ಲಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ನೋಟುಗಳನ್ನು ಆದಷ್ಟು ಬೇಗ ಠೇವಣಿ ಮಾಡುವಂತೆ ಜನರಿಗೆ ವಿನಂತಿಸಿದ್ದಾರೆ.

ಇದನ್ನೂ ಓದಿ: ವೈಕುಂಠ ಏಕಾದಶಿಯಂದು ತಿಮ್ಮಪ್ಪನ ದರ್ಶನ ಮಾಡುವವರಿಗೆ TTD ಕಡೆಯಿಂದ ಗುಡ್ ನ್ಯೂಸ್ !!

Leave A Reply

Your email address will not be published.