7th pay commission: ಬೆಳ್ಳಂಬೆಳಗ್ಗೆಯೇ ಸರ್ಕಾರಿ ನೌಕರರಿಗೆ ಬಿಗ್ ಶಾಕ್- ಸದ್ಯಕ್ಕಿಲ್ಲ ವೇತನ ಪರಿಷ್ಕರಣೆ !!
7th pay commission update there is no salary rivision for govt employees latest news
7th pay commission: ಬೆಳ್ಳಂಬೆಳಗ್ಗೆಯೇ ರಾಜ್ಯದ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಎದುರಾಗಿದ್ದು, ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ರಾಜ್ಯ ಸರಕಾರಿ ನೌಕರರಿಗೆ ಭಾರೀ ನಿರಾಸೆಯುಂಟಾಗಿದೆ. ಯಾಕೆಂದರೆ ವೇತನ ಪರಿಷ್ಕರಣೆಗೆ ನೇಮಕ ಮಾಡಲಾಗಿದ್ದ 7ನೇ ರಾಜ್ಯ ವೇತನ ಆಯೋಗದ(7th pay commission)ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಹೌದು, ಸರ್ಕಾರದಿಂದ ಒಂದು ನಿರಾಸದಾಯಕ ಮಾಹಿತಿ ಹೊರಬಿದ್ದಿದ್ದು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅಧ್ಯಕ್ಷತೆಯ 7ನೇ ರಾಜ್ಯವೇತನ ಆಯೋಗದ ಅವಧಿಯನ್ನು ಮತ್ತೆ 6 ತಿಂಗಳ ಕಾಲ ವಿಸ್ತರಿಸಲಾಗುವುದು. ಹೀಗಾಗಿ ಸದ್ಯಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ, ಸೌಲಭ್ಯಗಳ ಪರಿಷ್ಕರಣೆ ಅನುಮಾನವೆನ್ನಲಾಗಿದೆ. ಇದರಿಂದಾಗಿ ವೇತನ ಹೆಚ್ಚಳದ ಕನಸು ಕಂಡ ಲಕ್ಷಾಂತರ ನೌಕರರ ಆಸೆಗೆ ದೀಪಾವಳಿ ಹೊತ್ತಲ್ಲಿ ತಣ್ಣೀರೆರಚಿದಂತಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ಸರ್ಕಾರಕ್ಕೆ ಆರ್ಥಿಕ ಸವಾಲು ಎದುರಾಗಿದೆ. ಜೊತೆಗೆ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಈಗಲೇ ವರದಿ ಸಲ್ಲಿಕೆಯಾದರೆ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಒತ್ತಡ ಬೀಳಲಿದೆ.
ಅಂದಹಾಗೆ ಈ ಹಿಂದೆ ಇದ್ದ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ 7ನೇ ವೇತನ ಆಯೋಗ ಜಾರಿಯ ಭರವಸೆ ನೀಡುತ್ತಾ ಕೊನೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಿಂದ ಕಾರ್ಯಚಟುವಟಿಕೆಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಆಯೋಗ ಸಲ್ಲಿಸಿದ ಕೋರಿಕೆಯನ್ನು ಮನ್ನಿಸಿ ಅವಧಿಯನ್ನು ನವೆಂಬರ್ 19ರ ವರೆಗೆ ವಿಸ್ತರಣೆ ಮಾಡಿ ಹಣಕಾಸು ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ವೇತನ ಆಯೋಗದ ಅವಧಿ ನವೆಂಬರ್ 16ಕ್ಕೆ ಮುಕ್ತಾಯವಾಗಲಿದೆ. ಆದರೆ ಮತ್ತೆ ಅವಧಿಯನ್ನು 6 ತಿಂಗಳು ವಿಸ್ತರಿಸಲು ಚಿಂತನೆ ನಡೆದಿದೆ.
ಇದನ್ನೂ ಓದಿ: OLX ನಲ್ಲಿ ಬೈಕ್ ಮಾರಾಟದ ಜಾಹೀರಾತು ಹಾಕಿದ ಯುವತಿ, ಗ್ರಾಹಕನ ಸೋಗಿನಲ್ಲಿ ಬಂದ ವಂಚಕ; ಮುಂದೇನಾಯ್ತು ಗೊತ್ತೇ?