Old pension scheme: ಹಳೆ ಪಿಂಚಣಿ ಯೋಜನೆ ಜಾರಿಗೆ ಹೈಕೋರ್ಟ್ ಅಸ್ತು – ಆದರೆ ಈ ಸರ್ಕಾರಿ ನೌಕರರಿಗೆ ಮಾತ್ರ !!

High Court to implement old pension scheme but only for these government employees

Old pension scheme: ಹಳೆ ಪಿಂಚಣಿ ಯೋಜನೆ ಜಾರಿಯಾಗಬೇಕೆಂದು ರಾಜ್ಯ ಸರ್ಕಾರಿ ನೌಕರರೆಲ್ಲರೂ ಪಟ್ಟು ಹಿಡಿದು ಕೂತಿದ್ದಾರೆ. ಈ ಕುರಿತಾಗಿ ಸರ್ಕಾರದ ವಿರುದ್ಧ ಅನೇಕ ಪ್ರತಿಭಟನೆಗಳನ್ನು ಕೂಡ ನಡೆಸಿ ನಡೆಸಿದ್ದಾರೆ. ಆದರೆ ಇದೀಗ ಹೈಕೋರ್ಟ್ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಹಳೆ ಪಿಂಚಣಿ ಯೋಜನೆ(Old Pension scheme) ಜಾರಿ ಮಾಡುವಂತೆ ಆದೇಶ ಹೊರಡಿಸಿದೆ.

ಹೌದು, ಬಿಜೆಪಿ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆ ರದ್ಧುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕೆಂದು ಸರ್ಕಾರಿ ನೌಕರರು ಬಹಳ ಸಮಯದಿಂದ ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಇದು ಜಾರಿಯಲ್ಲಿದೆ. ಆದರೀಗ ಬಿಜೆಪಿ ಆಡಳಿವಿರುವ ಉತ್ತರ ಪ್ರದೇಶದಲ್ಲಿ ಹಳೆ ಪಿಂಚಣಿಯೋಜನೆಯನ್ನು ಜಾರಿಗೊಳಿಸುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಕೋರ್ಟ್ ಮೆಟ್ಟಿಲೇರಿದ್ದು ಶಿಕ್ಷಕರು ಮತ್ತು ಉದ್ಯೋಗಿಗಳಿಗೆ ಜಯ ಸಿಕ್ಕಂತಾಗಿದೆ.

ಯಾರಿಗೆಲ್ಲಾ ಹಳೆ ಪಿಂಚಣಿ ಯೋಜನೆ ಅನ್ವಯ?!
* ಏಪ್ರಿಲ್ 1, 2005 ಕ್ಕಿಂತ ಮೊದಲು ಯಾವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿ, ಪೋಸ್ಟಿಂಗ್ ನಂತರ ನಡೆಯಿತೋ ಅವರ ಪರವಾಗಿ ಕೋರ್ಟ್ ತೀರ್ಪು ನೀಡಿದೆ.
* ಹೀಗಾಗಿ ಏಪ್ರಿಲ್ 1, 2005 ಕ್ಕಿಂತ ಮೊದಲು ಆಯ್ಕೆಯಾದ ಲೆಕ್ಕಪರಿಶೋಧಕರಿಗೂ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಯಾಗುವ ಭರವಸೆ ಮೂಡಿದೆ.
* ಯುಪಿ ಹೈಕೋರ್ಟ್‌ನ ಆದೇಶದ ಅಡಿಯಲ್ಲಿ, ಹಳೆಯ ಪಿಂಚಣಿ ಯೋಜನೆಗೆ ಹೋಗಲು ಅರ್ಹರಾಗಿರುವ ಉದ್ಯೋಗಿಗಳ ವಿವರಗಳನ್ನು ಅನೇಕ ಇಲಾಖೆಗಳು ಕೇಳಲು ಪ್ರಾರಂಭಿಸಿವೆ.

ಇದನ್ನೂ ಓದಿ: CM Siddaramaiah: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಫಿಕ್ಸ್ ?!

Leave A Reply

Your email address will not be published.