EMI ಪಾವತಿ ಕುರಿತು RBI ನೀಡಿದೆ ಬಿಗ್ ಅಪ್ಡೇಟ್!!! ಇನ್ನು ಈ ಟೆನ್ಶನ್ ನಿಮಗಿಲ್ಲ!!!
Business news RBI big update on emi payment latest news
RBI on EMI payment : RBI EMI ಪಾವತಿ ಕುರಿತು ಬಿಗ್ ಅಪ್ಡೇಟ್ ನೀಡಿದೆ. ನಿಗದಿತ ದಿನಾಂಕದ ನಂತರ EMI ಪಾವತಿಸಲು ಬ್ಯಾಂಕ್ನಿಂದ ಯಾವುದೇ ಗ್ರೇಸ್ ಅವಧಿ ನೀಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಎಲ್ಲಾ ನಿಯಮಗಳು ಬದಲಾಗಲಿದೆ.ಆರ್ಬಿಐ ಈ ಕುರಿತು (RBI on EMI payment ) ದೃಢವಾದ ದಿನಾಂಕವನ್ನು ನೀಡದಿದ್ದರೂ, ಜನವರಿ 1, 2024 ರಿಂದ ನಿಯಮವನ್ನು ಜಾರಿಗೆ ತರುವ ನಿರೀಕ್ಷೆಯಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 2024 ರಿಂದ ಸಾಲಗಾರರಿಗೆ ಒಂದು ವಾರದ ಕಾಲಾವಕಾಶ ನೀಡಲಾಗುತ್ತದೆ. ತಮ್ಮ EMI ಬೌನ್ಸ್ ಆಗಿದ್ದರೆ ಗ್ರಾಹಕರು ಒಂದು ವಾರದವರೆಗೆ ಹೆದರುವ ಅವಶ್ಯಕತೆ ಇಲ್ಲ. EMI ಮೊತ್ತವನ್ನು ಪಾವತಿಸಲು ಗ್ರಾಹಕರಿಗೆ 7 ದಿನಗಳ ಅವಕಾಶವಿರುತ್ತದೆ. ರಿಸರ್ವ್ ಬ್ಯಾಂಕ್ ಪ್ರಕಟಣೆಯ ಬಳಿಕ ಎರಡರಿಂದ ಮೂರು ಕೋಟಿ ಗ್ರಾಹಕರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಇದಲ್ಲದೆ, ಈ ನಿಯಮವು ಎಲ್ಲಾ ಬ್ಯಾಂಕುಗಳು ಮತ್ತು NBFC ಗಳಿಗೆ ಅನ್ವಯವಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ಮೇಲೆ ಹೆಚ್ಚಿನ ಗಮನ ವಹಿಸಿದೆ. ದೊಡ್ಡ ಬ್ಯಾಂಕ್ಗಳ ವಿರುದ್ಧ ಆರ್ಬಿಐ ಕ್ರಮ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ನೆರವಾಗುವ ಕ್ರಮಗಳನ್ನು ಕೈಗೊಳ್ಳಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ CIBIL, ಎಕ್ಸ್ಪೀರಿಯನ್ ಮತ್ತು ಇತರ ಎಲ್ಲಾ ಕ್ರೆಡಿಟ್ ರಿಪೋರ್ಟಿಂಗ್ ಏಜೆನ್ಸಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಕ್ರೆಡಿಟ್ ಸ್ಕೋರ್ ಸಂಬಂಧಿತ ವಹಿವಾಟುಗಳಲ್ಲಿ ತೊಡಗಿರುವ ಕಂಪನಿಗಳ ವಿರುದ್ಧ ಕೇಂದ್ರ ಬ್ಯಾಂಕ್ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬ್ಯಾಂಕ್ಗಳು ಮತ್ತು ಕಂಪನಿಗಳು ತಮ್ಮ ವೆಬ್ಸೈಟ್ನಲ್ಲಿ ಲಿಂಕ್ ಅನ್ನು ಸಹ ಒದಗಿಸಬೇಕು. ಈ ಸೌಲಭ್ಯದ ಮೂಲಕ ಗ್ರಾಹಕರು ಉಚಿತ ಕ್ರೆಡಿಟ್ ವರದಿಯನ್ನು ಸುಲಭವಾಗಿ ಪಡೆಯಬಹುದು.
ಇದನ್ನೂ ಓದಿ: Deepavali 2023 Guidelines:ದೀಪಾವಳಿಗೆ ಮಾಲಿನ್ಯ ಮಂಡಳಿಯಿಂದ ಬಂತು ಹೊಸ ಗೈಡ್ ಲೈನ್ಸ್ !!