Kannada Flag: ತಮಿಳನಾಡು ಚಪ್ಪಲಿ ಅಡ್ವರ್ಟೈಸ್ ನಲ್ಲಿ ಕನ್ನಡ ಬಾವುಟದ ಬಣ್ಣ ಬಳಕೆ !! ಅಭಿಮಾನಿಗಳಲ್ಲಿ ಹೆಚ್ಚಿದ ಆಕ್ರೋಶ!!

Ramanagar news Karnataka flag conflict latest news

Kannada Flag: ತಮಿಳುನಾಡು ಮೂಲದ ಪಾದರಕ್ಷೆ ತಯಾರಿಕಾ ಕಂಪನಿ ತನ್ನ ಕಂಪನಿಯ ಉತ್ಪನ್ನಗಳ ಜಾಹೀರಾತು ಬೋರ್ಡ್‌ನಲ್ಲಿ ಕನ್ನಡದ ಬಾವುಟ ಹಳದಿ ಮತ್ತಿ ಕೆಂಪು ಬಣ್ಣ ಬಳಸುವ ಮೂಲಕ‌ ಕನ್ನಡ ಬಾವುಟಕ್ಕೆ(Kannada Flag)ದಕ್ಕೆ ತಂದಿದ್ದು, ಇದರಿಂದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬೈರಾಪಟ್ಟಣ ಗ್ರಾಮದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದ ರೈತರೊಬ್ಬರ ಜಮೀನಿನಲ್ಲಿ ವಾಕರ್ ಶೂ (Walker Shoe)ಮತ್ತು ಚಪ್ಪಲಿ ತಯಾರಿಕಾ ಸಂಸ್ಥೆ ವತಿಯಿಂದ ಬ್ಯಾನರ್ ಹಾಕಲಾಗಿದ್ದು, ಚಪ್ಪಲಿ ಮತ್ತು ಶೂ ಗಳ ಜಾಹೀರಾರು ನಾಮಫಲಕದಲ್ಲಿ ಕನ್ನಡ ಬಾವುಟದ ಬಣ್ಣವನ್ನು ಬಳಕೆ ಮಾಡಿರುವುದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪತ್ರಿಭಟನೆ ನಡೆಸಿದ್ದಾರೆ.

ಕನ್ನಡ ರಾಜ್ಯೋತ್ಸವದ ದಿನದಂದೇ ಕಾಲಿಗೆ ಹಾಕುವ ಚಪ್ಪಲಿಗಳ ಜಾಹೀರಾತಿನ ಬೋರ್ಡ್‌ನಲ್ಲಿ ನಮ್ಮ ನಾಡಿನ ಕನ್ನಡ ಬಾವುಟದ ಬಣ್ಣವನ್ನು ಬಳಸುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ತಮಿಳುನಾಡು ಮೂಲದ ಕಂಪನಿ ಕೆಣಕುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳು ಜಾಹೀರಾತು ಫಲಕ ಹಾಕಿರುವ ಸಂಸ್ಥೆಯ ವಿರುದ್ಧ ಪ್ರತಿಭಟನೆ ಮಾಡಿ ನಾಮಫಲಕವನ್ನು ಹರಿದು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದಲ್ಲದೇ, ಪ್ರತಿಭಟನೆ ಕೂಡ ನಡೆದಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಮಳೂರು ಗ್ರಾಮ ಪಂಚಾಯ್ತಿಯ ಪಿಡಿಒ ಮತ್ತು ಅಧಿಕಾರಿಗಳು ಜಾಹೀರಾತನ್ನು ತೆರವು ಮಾಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಗಿದೆ.

 

ಇದನ್ನು ಓದಿ: KSRTC ಯ ಹಿರಿಯ ನೌಕರರಿಗೆ ಭರ್ಜರಿ ಸಿಹಿ ಸುದ್ದಿ

Leave A Reply

Your email address will not be published.