Puducherry : ಕೆಂಪು ಬಣ್ಣಕ್ಕೆ ತಿರುಗುತ್ತಿದೆ ಸಮುದ್ರದ ನೀರು – ದಿಗ್ಭ್ರಮೆಗೊಂಡ ಜನರು, ಅಬ್ಬಬ್ಬಾ ಏನಿದು ವಿಚಿತ್ರ !!

Seawater in panducherry is turning red latest news

Puducherry: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಬೀಚ್‌ನಲ್ಲಿ ಸಮುದ್ರದಲ್ಲಿ ಕಂಡುಬರುತ್ತಿರುವ ಕೆಂಪು ನೀರು, ಮರಳು (Sea Red) ಆತಂಕವನ್ನು ಸೃಷ್ಟಿ ಮಾಡುತ್ತಿದೆ.(Puducherry National Centre For Coastal Research).

ಇತ್ತೀಚೆಗೆ ತಮಿಳುನಾಡಿನ ಹಲವೆಡೆ ಸಮುದ್ರದ ನೀರು ಬಣ್ಣ ಬದಲಿಸಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚೆನ್ನೈನ ಮರೀನಾ ಬೀಚ್ ನಲ್ಲಿ ಸಮುದ್ರದ ನೀರು ಗುಲಾಬಿ ಬಣ್ಣದ ಬದಲು ಹಸಿರು ಬಣ್ಣದಲ್ಲಿ ಕಾಣಿಸಿಕೊಂಡಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ನೋಡಬಹುದಾದ ಕನ್ಯಾಕುಮಾರಿಯಲ್ಲಿ ಕೂಡ ಸಮುದ್ರದಲ್ಲಿನ ನೀರಿನ ಬಣ್ಣ ಬದಲಾಗಿದೆ.

ಪುದುಚೇರಿ ಬೀಚ್ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಚೆನ್ನೈ ಜತೆಗೆ ಎರಡೂ ತೆಲುಗು ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇತ್ತೀಚೆಗಷ್ಟೇ ಪುದುಚೇರಿ ಸಮುದ್ರ ತೀರದಲ್ಲಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿತ್ತು.ಈ ಹಿನ್ನೆಲೆಯಲ್ಲಿ ಪುದುಚೇರಿಯ ಕರಾವಳಿ ಪ್ರದೇಶಗಳಲ್ಲಿ ಆಗುತ್ತಿರುವ ಬದಲಾವಣೆ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಕಳೆದ ನಾಲ್ಕು ದಿನಗಳಿಂದ ಬೀಚ್ ಬಳಿಯ ಸಮುದ್ರದಲ್ಲಿ ನೀರಿನ ಬಣ್ಣ ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ಹೀಗೆ, ಸಮುದ್ರದ ಬಣ್ಣ ಬದಲಾಗಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಬೀಚ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಮಾದರಿಗಳನ್ನು ಪರಿಶೀಲಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಸಮುದ್ರದ ನೀರಿನ ಬಣ್ಣ ಬದಲಾಗುತ್ತಿರುವ ಬಗ್ಗೆ ನಾನಾ ಊಹಾಪೋಹಗಳು ಹರಿದಾಡುತ್ತಿದ್ದು, ಬೀಚ್ ಪ್ರದೇಶಗಳಿಗೆ ತೆರಳಲು ಸ್ಥಳೀಯರು ಹಾಗೂ ಪ್ರವಾಸಿಗರು ಆತಂಕಪಡುವಂತಾಗಿದೆ.

ಇದನ್ನು ಓದಿ: Kannada Flag: ತಮಿಳನಾಡು ಚಪ್ಪಲಿ ಅಡ್ವರ್ಟೈಸ್ ನಲ್ಲಿ ಕನ್ನಡ ಬಾವುಟದ ಬಣ್ಣ ಬಳಕೆ !! ಅಭಿಮಾನಿಗಳಲ್ಲಿ ಹೆಚ್ಚಿದ ಆಕ್ರೋಶ!!

Leave A Reply

Your email address will not be published.