Ayodhya rama bhoomi: ಅಯೋಧ್ಯೆಯ ರಾಮ ಮಂದಿರಕ್ಕೆ ನೀಡಿದ ಮಸೀದಿ ಜಾಗ ಮರಳಿ ಮುಸ್ಲಿಮರಿಗೆ ?! ಹೊತ್ತಿತು ನೋಡಿ ಮತ್ತೊಂದು ವಿವಾದದ ಕಿಡಿ !!

National news Muslims complaint against mosque take care on selling land to Ayodhya Rama bhoomi trust

Ayodhya rama bhoomi: ಕೊಟ್ಯಂತರ ಹಿಂದೂಗಳ ಕನಸಾಗಿರುವ ಅಯೋಧ್ಯಾ ರಾಮಮಂದಿರ(Ayodhya rama bhoomi) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತದೆ. ಬರುವ ವರ್ಷದಲ್ಲಿ ಭವ್ಯ ಮಂದಿರ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ಮೋದಿ ಅವರು ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜನವರಿಯಲ್ಲಿ ರಾಮನಮೂರ್ತಿಗೆ ಪ್ರಾಣ ಪ್ರತಿಷ್ಟೆ ಕೂಡ ನಡೆಯಲಿದೆ. ಈ ಬೆನ್ನಲ್ಲೇ ಮತ್ತೆ ರಾಮ ಜನ್ಮ ಭೂಮಿಯ ವಿವಾದದ ಕಿಡಿ ಹೊತ್ತಲು ಹಪಿಹಪಿಸುತ್ತಿದೆ.

ಹೌದು, ಆಯೋಧ್ಯೆ ರಾಮ ಮಂದಿ ಹಾಗೂ ಬಾಬ್ರಿ ಮಸೀದಿ ವಿವಾದ ಕುರಿತು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಸುಪ್ರೀಂ ಕೋರ್ಟ್ ಇತಿಶ್ರಿ ಹಾಡಿದ ಬಳಿಕ ಇದೀಗ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಅಯೋಧ್ಯೆಯ ರಾಮ ಜನ್ಮಭೂಮಿಯ ಹೋರಾಟದ ಬಗ್ಗೆ ಸಾಧಾರಣವಾಗಿ ದೇಶದ ಎಲ್ಲರಿಗೂ ತಿಳಿದಿದೆ. ಹಿಂದೂಗಳ ಪುಣ್ಯಭೂಮಿಯಾದ ಈ ಜಾಗವನ್ನು ನಮ್ಮದಾಗಿಸಿಕೊಳ್ಳಲು ಅನೇಕರು ಅದಕ್ಕಾಗಿ ದುಡಿದಿದ್ದಾರೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಇದರ ಕಾನೂನು ಹೋರಾಟಗಳು ಹೆಚ್ಚಾಗಿ ಕೊನೆಗೂ ಅಯೋಧ್ಯೆಯ ಈ ಭೂಮಿ ಹಿಂದೂಗಳದ್ದೆಂದು ಘೋಷಣೆಯಾಗಿ, ಮುಸ್ಲಿಂ ಬಾಂಧವರ ಸಹಕಾರದಿಂದಲೂ ಇಂದು ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ. ಆದರೀಗ ರಾಮ ಮಂದಿರ ಸಮಿತಿಗೆ ನೀಡಿದ್ದ ಸ್ಥಳೀಯ ಮಸೀದಿ ಜಾಗವನ್ನು ಮುಸ್ಲಿಮರು ವಾಪಸ್ ನೀಡುವಂತೆ ಪಟ್ಟು ಹಿಡಿದ್ದಾರೆ. ಈ ಮೂಲಕ ಹೊಸ ವಿವಾದವೊಂದು ಶುರುವಾದಂತಿದೆ.

ಏನಿದು ಹೊಸ ವಿವಾದ?
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಪಕ್ಕದಲ್ಲೇ ಸ್ಥಳೀಯ ಮಸೀದಿಯೊಂದಿತ್ತು. ಭವ್ಯ ಮಂದಿರದ ಜಾಗಕ್ಕೆ ತಾಗಿಕೊಂಡೆ ಇದ್ದ ಮಸೀದಿ ಜಾಗವನ್ನು ಮಸೀದಿ ಮೇಲ್ವಿಚಾರಕ ಮಾರಾಟ ಮಾಡಲು ಮುಂದಾಗಿದ್ದಾನೆ. ಸೆಪ್ಟೆಂಬರ್ 1 ರಂದು ಮಸೀದಿ ಸ್ಥಳವನ್ನು ಆಯೋಧ್ಯೆ ಶ್ರೀರಾಮ ಮಂದಿರ ಸಮಿತಿಗೆ ಮಾರಾಟಕ್ಕೆ ಒಪ್ಪಂದ ಮಾಡಿದ್ದಾರೆ. 30 ಲಕ್ಷ ರೂಪಾಯಿಗೆ ಈ ಸ್ಥಳ ಮಾರಾಟಕ್ಕೆ ಒಪ್ಪಂದ ಮಾಡಲಾಗಿದೆ. ಆದರೆ ಇದಕ್ಕೆ ಸುನ್ನಿ ಮುಸ್ಲಿಂ ಬೋರ್ಡ್ ಹಾಗೂ ಸ್ಥಳೀಯ ಮುಸ್ಲಿಮರು ಭಾರಿ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಅಂದಹಾಗೆ ಆಯೋಧ್ಯೆಯಲ್ಲಿರುವ ಸ್ಥಳೀಯ ಮಸೀದಿ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಅಡಿಯಲ್ಲಿ ನೋಂದಣಿಯಾಗಿದೆ. ಹೀಗಾಗಿ ಇದನ್ನೇ ಮುಂದಿಟ್ಟುಕೊಂಡು ಮುಸ್ಲಿಮ್ ಹೋರಾಟ ಸಮಿತಿ ಪ್ರತಿಭಟನೆ ಆರಂಭಿಸಿದೆ. ಮಸೀದಿ ಇರುವುದು ವಕ್ಫ್ ಆಸ್ತಿ, ಇದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆಗ್ರಹಿಸಿದೆ. ಇಷ್ಟೇ ಅಲ್ಲ ಈ ಕುರಿತು ದೂರು ದಾಖಲಿಸಿ ಸೂಕ್ತ ನ್ಯಾಯ ಒದಗಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ: SBI ATM New Rule: SBI ಗ್ರಾಹಕರಿಗೆ ಮಹತ್ವದ ಸುದ್ದಿ- ATM ನಿಂದ ಹಣ ಡ್ರಾ ಮಾಡುವವರಿಗೆ ಬಂತು ಹೊಸ ರೂಲ್ಸ್ !!

Leave A Reply

Your email address will not be published.