KSRTC ಯ ಹಿರಿಯ ನೌಕರರಿಗೆ ಭರ್ಜರಿ ಸಿಹಿ ಸುದ್ದಿ !!

Good news for senior employees of KSRTC

KSRTC: ಕೆಎಸ್ಆರ್​ಟಿಸಿಯ ಹಿರಿಯ ನೌಕರರಿಗೆ ಕೆಎಸ್​​ಆರ್​ಟಿಸಿ(KSRTC) ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು, ನೌಕರರಿಗೆ ಹೃದಯ(Heart) ಸಂಬಂಧಿ ತಪಾಸಣೆ ಮಾಡಿಸಲು ಕೆಎಸ್​​ಆರ್​ಟಿಸಿ ಮುಂದಾಗಿದೆ. ಇದರಿಂದ ಸಾವಿರಾರು ನೌಕರರಿಗೆ ಅನುಕೂಲವಾಗಲಿದೆ.

ಈಗಾಗಲೇ ಕೆಎಸ್ಆರ್​ಟಿಸಿಯಲ್ಲಿ
34000 ಸಾವಿರ ಸಿಬ್ಬಂದಿಗಳಿದ್ದು, 24686 ಡ್ರೈವರ್ ಹಾಗೂ ಕಂಡಕ್ಟರ್​ಗಳಿದ್ದಾರೆ. ಅದರಲ್ಲಿ 40 ವರ್ಷ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ನೌಕರರಿದ್ದು, ಹೃದಯ(Heart) ಸಂಬಂಧಿ ತಪಾಸಣೆಯ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಿದ್ದಾರೆ. ಈ ಕುರಿತು ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಒಡಂಬಡಿಕೆ ಪತ್ರಕ್ಕೆ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ. ಮಂಜುನಾಥ್ ಹಾಗೂ ಕೆಎಸ್ಆರ್​ಟಿಸಿ ಎಂಡಿ ಅನ್ಬು ಕುಮಾರ್ ಸಹಿ ಮಾಡಿದ್ದಾರೆ.

ಹೃದಯ(Heart) ಸಂಬಂಧಿ ತಪಾಸಣೆಗಾಗಿ ಈಗಾಗಲೇ ಜಯದೇವ ಆಸ್ಪತ್ರೆಯೊಂದಿಗೆ ಐದು ವರ್ಷಗಳವರೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ಸಾರಿಗೆ ನೌಕರರಿಗೆ ಯಾವುದೇ ರೀತಿಯ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಕುರಿತು ತಪಾಸಣೆಯನ್ನು ನಡೆಸಿ ಚಿಕಿತ್ಸೆ ಒದಗಿಸಲಿದೆ. ಇನ್ನು ತಪಾಸಣೆ ಮಾಡಲು ಪ್ರತಿ ನೌಕರನಿಗೆ 1200 ರೂಪಾಯಿ ನಿಗದಿ ಮಾಡಲಾಗಿದ್ದು, ಎಲ್ಲಾ ನೌಕರರಿಗೆ ತಪಾಸಣೆ ಮಾಡಲು ವರ್ಷಕ್ಕೆ ಕೆಎಸ್ಆರ್​ಟಿಸಿ 2.55 ಕೋಟಿ ರೂಪಾಯಿ ವೆಚ್ಚವಾಗಲಿದೆ.

 

ಇದನ್ನು ಓದಿ: Premier Padmini: ಮುಂಬೈನ ಬೀದಿಗಳ ಹೆಮ್ಮೆ ಟ್ಯಾಕ್ಸಿ ʼಪ್ರೀಮಿಯರ್‌ ಪದ್ಮಿನಿʼ ಸಂಚಾರ ಇನ್ನಿಲ್ಲ!!!

Leave A Reply

Your email address will not be published.