Missing Case: ಬಿಜೆಪಿ ಶಾಸಕನ ಪತ್ನಿ ನಾಪತ್ತೆ!

Share the Article

Missing Case: ಭಾರತೀಯ ಜನತಾ ಪಕ್ಷದ (BJP) ಶಾಸಕ ಸೀತಾರಾಮ್‌ ವರ್ಮಾ ಅವರ ಪತ್ನಿ ಮಂಗಳವಾರ ಬೆಳಗ್ಗೆ ಪತ್ನಿ ತಮ್ಮ ಮನೆಯಿಂದ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸುಲ್ತಾನ್‌ಪುರದ ಲಂಬುವಾ ಕ್ಷೇತ್ರದ ಬಿಜೆಪಿ ಶಾಸಕರ ಪತ್ನಿ ಪುಷ್ಪಾ ವರ್ಮಾ (65) ಮಂಗಳವಾರ ಮುಂಜಾನೆ ನಾಪತ್ತೆಯಾಗಿದ್ದಾರೆ( Missing Case) . ಈ ಕುರಿತಂತೆ ಉತ್ತರ ಪ್ರದೇಶದ ಗಾಜಿಪುರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿದೆ.

ಪುಷ್ಪಾ ಅವರು ಮನೆಯಲ್ಲಿ ಯಾರಿಗೂ ಏನೂ ಹೇಳದೆ ಮಂಗಳವಾರ ಬೆಳಗ್ಗೆ 6 ಗಂಟೆಗೆ ಹೊರಟಿದ್ದಾರೆ. ಶಾಸಕ ಸೀತಾರಾಮ್‌ ಅವರು ಡಿಎಸ್‌ಪಿ ಅವರನ್ನು ಭೇಟಿಯಾಗಿ ತಮ್ಮ ಪತ್ನಿಯನ್ನು ಶೀಘ್ರ ಪತ್ತೆ ಮಾಡುವಂತೆ ಕೋರಿದ್ದಾರೆ. ಶಾಸಕರ ಪತ್ನಿ ಅಮ್ನೇಸಿಯಾದಿಂದ ಬಳಲುತ್ತಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದರೆಂದು ವರದಿಯಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಶೋಧ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.

 

ಇದನ್ನು ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿರೋರಿಗೆ ಸಿಹಿ ಸುದ್ದಿ – ದೀಪಾವಳಿ ವೇಳೆ ಹೊಸ ಯೋಜನೆ ಆರಂಭ

Leave A Reply