Adhar card lock: ಜನಸಾಮಾನ್ಯರೇ ಎಚ್ಚರ.. !! ನೀವಿನ್ನೂ ಆಧಾರ್ ಲಾಕ್ ಮಾಡ್ಲಿಲ್ಲ ಅಂದ್ರೆ ಈ ತಕ್ಷಣ ಮಾಡಿಬಿಡಿ – ಇಲ್ಲಿದೆ ಸಂಪೂರ್ಣ ವಿವರ !!
Adhar card lock: ದೇಶಾದ್ಯಂತ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಸರ್ಕಾರದಿಂದ ಯಾವುದೇ ಪ್ರಯೋಜನ ಪಡೆಯಬೇಕೆಂದರೆ, ಯೋಜನೆಯ ಫಲಾನುಭವಿಗಳಾಗಬೇಕಂದ್ರೆ ಆಧಾರ್ ಕಡ್ಡಾಯ. ಈಗ ಆಧಾರ್ ಅಪ್ಡೇಟ್ ಆಗಿದ್ರೆ ಮಾತ್ರ ಇದೆಲ್ಲ ಸಾಧ್ಯ. ಹೀಗಾಗಿ ಸರ್ಕಾರ ಆಧಾರ್ ಅಪ್ಡೇಟ್ ಮಾಡಿಸಿ, ಅಪ್ಡೇಟ್ ಮಾಡಿಸಿ ಎಂದು ಸಾರಿ ಸಾರಿ ಹೇಳುತ್ತಿದೆ. ಇದರೊಂದಿಗೆ ಆಧಾರ್ ಅನ್ನು ಲಾಕ್(Adhar card lock) ಕೂಡ ಮಾಡಿ ಎಂದು ಹೇಳುತ್ತಿದೆ.
Adhar card lock: ತಂತ್ರಜ್ಞಾನ ಮುಂದುವರಿದ ಈ ಲೋಕದಲ್ಲಿ ಎಷ್ಟೇ ಜಾಗೃತರಾಗಿದ್ದರೂ ಸಾಲದು. ನಮಗೇ ಗೊತ್ತಿಲ್ಲದೆ ನಮ್ಮ ಸುತ್ತ ಅನೇಕ ವಂಚನೆಗಳು ನಡೆಯುತ್ತವೆ. ಅದು ನಮ್ಮ ಆಧಾರ್ ಕಾರ್ಡ್’ದಾರರಿಗೆ ಅನ್ನೂ ಬಿಟ್ಟಿಲ್ಲ. ಯಾಕೆಂದರೆ ನಮ್ಮೆಲ್ಲಾ ಮಾಹಿತಿಗಳು ಸುಲಭದಲ್ಲಿ ಒಂದೇ ಕಡೆ ಸಿಗುವಾಗ ಇದು ಇಂತಹ ದ್ರೋಹಿಗಳಿಗೆ ಕಷ್ಟದ ಕೆಲಸವಲ್ಲ. ಕ್ಷಣಾರ್ಧದಲ್ಲಿ ನಮ್ಮೆಲ್ಲಾ ಮಾಹಿತಿಗಳನ್ನು ಎಗರಿಸಿಬಿಡುತ್ತಾರೆ. ಜೊತೆಗೆ ಈ ಆಧಾರ್ ಮೂಲಕ ನಮ್ಮ ಬ್ಯಾಂಕ್ ಖಾತೆಯನ್ನೇ ಕಾಲಿಮಾಡುತ್ತಿದ್ದಾರೆ.
ಹೌದು, ಮೊದಲೆಲ್ಲ ಕಾಲ್ ಮಾಡಿ ವಂಚನೆಯಿಂದ ನಮ್ಮ ATM ಕಾರ್ಡ್ ನಂಬರ್ ತಿಳಿದು ಹಣ ಕಸಿಯುತ್ತಿದ್ದರು. ಆದರೀಗ ಈ ಕಿರಾತಕರು ನಮ್ಮ ಆಧಾರ್ ಬಳಸಿ ನಮ್ಮದೇ ಬ್ಯಾಂಕ್ ಖಾತೆಯನ್ನು ಲೂಟಿ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಅದಕ್ಕಾಗಿಯೇ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ತಕ್ಷಣ ಲಾಕ್ ಮಾಡಬೇಕಾಗುತ್ತದೆ.
ಆಧಾರ್ ಲಾಕ್ ಮಾಡುವುದು ಹೇಗೆ?
• ನಿಮ್ಮ ಆಧಾರ್ ಬಯೋಮೆಟ್ರಿಕ್ ಅನ್ನು ಲಾಕ್ ಮಾಡುವ ಮೊದಲು, ನೀವು ಆಧಾರ್ ಸಂಖ್ಯೆ ಮತ್ತು ಒಟಿಪಿ ಮೂಲಕ ಮೈ ಆಧಾರ್ ಪೋರ್ಟಲ್ಗೆ ಲಾಗ್ ಇನ್ ಆಗಬೇಕು.
• ಮುಖಪುಟದಲ್ಲಿ, ಲಾಕ್ ಮತ್ತು ಅನ್ಲಾಕ್ ಬಯೋಮೆಟ್ರಿಕ್ ಆಯ್ಕೆಯನ್ನು ಕ್ಲಿಕ್ ಮಾಡಿ (ಲಾಕ್ ಮತ್ತು ಅನ್ಲಾಕ್ ಹೇಗೆ ಉಪಯುಕ್ತವಾಗಿವೆ ಎಂಬುದರ ವಿವರಣೆಯನ್ನು ಇದು ಒಳಗೊಂಡಿದೆ)
• ಆ ಪುಟದಲ್ಲಿ ಗೋಚರಿಸುವ ಮುಂದಿನ ಬಟನ್ ಒತ್ತಿರಿ.
ಅದರ ನಂತರ ದಯವಿಟ್ಟು ಲಾಕ್ ತೆರೆಯಲು ಆಯ್ಕೆ ಮಾಡಿ.
• ಕೆಳಗಿನ ಟರ್ಮ್ ಬಾಕ್ಸ್ ನಲ್ಲಿ ಟಿಕ್ ಮಾಡಿ ಮತ್ತು ಮುಂದೆ ಕ್ಲಿಕ್ ಮಾಡಿ.
• ನಿಮ್ಮ ಬಯೋಮೆಟ್ರಿಕ್ ಲಾಕ್ ಆಗಿರುವಂತೆ ಪರದೆಯ ಮೇಲೆ ಗೋಚರಿಸುತ್ತದೆ. ಅಷ್ಟೇ, ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಆಗುತ್ತದೆ. ಲಾಕ್ ಆದ ತಕ್ಷಣ, ಲಾಕ್ ಮತ್ತು ಅನ್ಲಾಕ್ ಆಯ್ಕೆಯಲ್ಲಿ ಕೆಂಪು ಲಾಕ್ ಕಾಣಿಸಿಕೊಳ್ಳುತ್ತದೆ.
ಇದನ್ನು ಓದಿ: ಪುರುಷರೇ ನಿಮಗೂ ತಿಂಗಳಿಗೊಮ್ಮೆ ಮುಟ್ಟಾಗುತ್ತೆ, ಹೇಗಂತೀರಾ? ಶಾಕಿಂಗ್ ನ್ಯೂಸ್!!!