Ather 450s Festive Offer: ದೀಪಾವಳಿಗೆ ‘ಏತರ್’ ಕೊಡ್ತು ಬಂಪರ್ ಆಫರ್- 1.32 ಲಕ್ಷದ ಎಲೆಕ್ಟ್ರಿಕ್ ಸ್ಕೂಟರ್ ಈಗ 86,000ಕ್ಕೆ ಖರೀದಿಸಿ !!

Automobile news ather 450s festival offer buy 1.32 lakh electric scooter for 86 thousand

Ather 450s Festive Offer: ನೀವೇನಾದರೂ ದ್ವಿ ಚಕ್ರ ವಾಹನ ಖರೀದಿ ಮಾಡುವ ಯೋಜನೆಯಲ್ಲಿದ್ದರೆ, ನಿಮಗಿದೋ ಮುಖ್ಯ ಮಾಹಿತಿ!! ಹಬ್ಬದ ಸಂದರ್ಭದಲ್ಲಿ ಹಲವು ಕಂಪನಿಗಳು ಆಕರ್ಷಕ ಕೊಡುಗೆಗಳನ್ನು ನೀಡುವುದು ಸಾಮಾನ್ಯ. ಇದೀಗ, Ather ಕಂಪನಿ ತನ್ನ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ್(Ather 450s Festive Offer) ಮೇಲೆ ಬೊಂಬಾಟ್ ಆಫರ್ ಘೋಷಿಸಿದೆ.

ಭಾರತದ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾದ ಅಥರ್ ಎನರ್ಜಿ ದೀಪಾವಳಿ ಹಬ್ಬದ ಸೀಸನ್ ನಲ್ಲಿ ತನ್ನ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ. ಅಥರ್ ಎನರ್ಜಿ ದೀಪಾವಳಿ ಸಂದರ್ಭದಲ್ಲಿ ತನ್ನ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅಥರ್ 450s ನಲ್ಲಿ 5000 ರೂ.ಗಳ ಹೆಚ್ಚುವರಿ ಹಬ್ಬದ ಆಫರ್ ನೀಡುತ್ತಿದೆ. ಇದರಲ್ಲಿ ಫೆಸ್ಟೀವ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ಇನ್ನೂ ಹೆಚ್ಚಿನ ಕೊಡುಗೆಗಳನ್ನು ಪಡೆಯಬಹುದು.

ಅಥರ್ 450S ನಲ್ಲಿನ ಬ್ಯಾಟರಿ ಸಾಮರ್ಥ್ಯವು 2.9 kWh ಆಗಿದ್ದು, ಕಂಪನಿಯ ಪ್ರವೇಶ ಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. Ather 450s ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಗ್ರಾಹಕರು ಒಟ್ಟು 18ಕ್ಕೂ ಹೆಚ್ಚು ನ್ಯಾವಿಗೇಷನ್ ಪಾಯಿಂಟ್‌ಗಳನ್ನು ಪಡೆಯಬಹುದು. ಗಂಟೆಗೆ ಇದರ ಗರಿಷ್ಠ ವೇಗ 90 ಕಿಲೋಮೀಟರ್ ಮತ್ತು ಈ ಸ್ಕೂಟರ್ 105 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುವ ಕುರಿತು ಕಂಪನಿ ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.

ದೇಶದ ಪ್ರಮುಖ ಆಟೋ ಕಂಪನಿಯಾದ ಅಥರ್ ಎನರ್ಜಿ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ಅತ್ಯಾಕರ್ಷಕ ಫೆಸ್ಟೀವ್ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಗ್ರಾಹಕರು 1.32 ಲಕ್ಷ ರೂ.ಗಳ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ₹86000ಕ್ಕೆ ಖರೀದಿಸಬಹುದಾಗಿದೆ. Ather 450s ವಾಸ್ತವಿಕ ಬೆಲೆ: ₹1,32,550 ಆಗಿದ್ದು, ಫೆಸ್ಟೀವ್ ಆಫರ್: ₹5000 ಸಿಗಲಿದ್ದು, ಇದರ ಜೊತೆಗೆ ಕಾರ್ಪೊರೇಟ್ ಡಿಸ್ಕೌಂಟ್: ₹1500 ನೀಡಲಾಗುತ್ತದೆ. ಇಷ್ಟೇ ಅಲ್ಲ ಕಣ್ರೀ!!Ather 450s ನ ಹೊಸ ಬೆಲೆ: ₹86050 ಮತ್ತು 2ವಾಟ್‌ನ ವಿನಿಮಯ ಮೌಲ್ಯ: ₹40000 ಆಫರ್ ಸಿಗಲಿದೆ.

ಇದನ್ನೂ ಓದಿ: Solar Pumpset: ರೈತರಿಗೆ ಖುಷಿ ಸುದ್ದಿ- ಸೋಲಾರ್ ಪಂಪ್‌ಸೆಟ್‌ಗಾಗಿ ಅರ್ಜಿ ಆಹ್ವಾನ – ಸಿಗೋ ಸಹಾಯಧನ ಎಷ್ಟು, ಅರ್ಜಿ ಸಲ್ಲಿಸುವುದು ಎಲ್ಲಿ ?

Leave A Reply

Your email address will not be published.