PM Modi: ಪ್ರಧಾನಿ ಮೋದಿಯಿಂದ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ !!
National news political news Prime Minister Narendra Modi should lay foundation for masjid
Prime minister Modi : ಕೊಟ್ಯಂತರ ಹಿಂದೂಗಳ ಕನಸಾಗಿರುವ ಅಯೋಧ್ಯಾ ರಾಮಮಂದಿರ ಬರುವ ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ಮೋದಿ ಅವರು ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕೂ ಮೊದಲು ಮೋದಿಯವರು ರಾಮನ ಮೂರ್ತಿ ಪ್ರತಿಷ್ಠೆಗಾಗಿ ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಈ ಬೆನ್ನಲ್ಲೇ ಪ್ರಧಾನಿ ಮೋದಿ(Prime minister Modi ) ಅವರು ಮುಸ್ಲಿಮರ ಮಸೀದಿ ನಿರ್ಮಾಣಕ್ಕೂ ಕೂಡ ಶಂಕುಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.
ಹೌದು, ಅಯೋಧ್ಯೆಯ ರಾಮ ಜನ್ಮಭೂಮಿಯ ಹೋರಾಟದ ಬಗ್ಗೆ ಸಾಧಾರಣವಾಗಿ ದೇಶದ ಎಲ್ಲರಿಗೂ ತಿಳಿದಿದೆ. ಹಿಂದೂಗಳ ಪುಣ್ಯಭೂಮಿಯಾದ ಈ ಜಾಗವನ್ನು ನಮ್ಮದಾಗಿಸಿಕೊಳ್ಳಲು ಅನೇಕರು ಅದಕ್ಕಾಗಿ ದುಡಿದಿದ್ದಾರೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಇದರ ಕಾನೂನು ಹೋರಾಟಗಳು ಹೆಚ್ಚಾಗಿ ಕೊನೆಗೂ ಅಯೋಧ್ಯೆಯ ಈ ಭೂಮಿ ಹಿಂದೂಗಳದ್ದೆಂದು ಘೋಷಣೆಯಾಗಿ, ಮುಸ್ಲಿಂ ಬಾಂಧವರ ಸಹಕಾರದಿಂದಲೂ ಇಂದು ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ.
ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದೆಂದು ಕೋರ್ಟ್ ತೀರ್ಪು ನೀಡುವುದರೊಂದಿಗೆ ಅಯೋಧ್ಯೆಯ ಸ್ಥಳೀಯ ಆಡಳಿತ ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಧನ್ನಿಪುರ ಗ್ರಾಮದಲ್ಲಿ 5 ಎಕರೆಯಷ್ಟು ಭೂಮಿಯನ್ನು ಮಂಜೂರು ಮಾಡಿತ್ತು. ಇಲ್ಲಿ ಇದೀಗ ಭವ್ಯ ಮಸೀದಿ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ಅಂದಹಾಗೆ ಮೂರ್ತಿ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಿದಾಗ, ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಗೂ ಶಂಕುಸ್ಥಾಪನೆಯನ್ನು ಅವರೇ ನೆರವೇರಿಸಬೇಕೆಂಬ ಬೇಡಿಕೆ ಬಂದಿದೆ.
ಇನ್ನು ಬಾಬ್ರಿ ಮಸೀದಿಯ ಮರು ನಿರ್ಮಾಣಕ್ಕೆ ಧ್ವನಿ ಎತ್ತಿದ್ದ ಭಾರತೀಯ ಮುಸ್ಲಿಂ ಲೀಗ್ ನ ರಾಜ್ಯಾಧ್ಯಕ್ಷ ನಜ್ಮುಲ್ ಹಸನ್ ಘನಿ, ಪ್ರಧಾನಿ ಮೋದಿ ಸುಪ್ರೀಂ ಕೋರ್ಟ್ ನ ಆದೇಶವನ್ನು ಗೌರವಿಸಿ ಮಸೀದಿಯ ಶಂಕುಸ್ಥಾಪನೆಯನ್ನೂ ನೆರವೇರಿಸಬೇಕು. ಮೋದಿ ಭಾರತದ ಪ್ರಧಾನಿ, ಅವರು ಹಿಂದೂ, ಮುಸ್ಲಿಮರಿಗೂ ಸಮವಾಗಿರಬೇಕು. ಅವರು ಹಿಂದೂ ಸಹೋದರರ ಮಂದಿರವನ್ನು ಉದ್ಘಾಟಿಸಲು ಆಗಮಿಸುವುದಾದರೆ, ಮಸೀದಿಗೂ ಅವರು ಶಂಕುಸ್ಥಾಪನೆ ನೆರವೇರಿಸಲಿ ಎಂದು ಜಮೈತ್ ಉಲಮಾ-ಎ-ಹಿಂದ್ ಅಯೋಧ್ಯೆ ವಿಭಾಗದ ಅಧ್ಯಕ್ಷ ಹಿಸ್ಬುಲ್ಲಾ ಬಾದ್ ಶಾ ಖಾನ್ ಒತ್ತಾಯಿಸಿದ್ದಾರೆ.
ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ, ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ (ಐಐಎಫ್ ಸಿ) ಮಸೀದಿಯ ನಕ್ಷೆ ಅನುಮೋದನೆಗೊಳ್ಳುವುದಕ್ಕೂ ಮುನ್ನ ಹಾಗೂ ಸಮರ್ಪಕ ನಿಧಿ ಸಂಗ್ರಹಕ್ಕೂ ಮುನ್ನವೇ ಪ್ರಧಾನಿ ಮೋದಿ ಅವರನ್ನು ಶಂಕುಸ್ಥಾಪನೆಗೆ ಆಹ್ವಾನಿಸುವ ಮೂಲಕ ಮಸೀದಿ ಯೋಜನೆಯನ್ನು ರಾಜಕೀಯಗೊಳಿಸುವುದು ಸೂಕ್ತವಲ್ಲ ಎಂದು ಹೇಳಿದೆ. ಆದರೆ ಪ್ರಧಾನಿಯವರಿಗೆ ಇದು ಅಧಿಕೃತವಾಗಿ ಆಹ್ವಾನ ಹೋಗಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಬೆಳವಣಿಗೆಗಳು ಆಗಬಹುದೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಮೃತ್ಯು