KSRTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್ -ಕುಟುಂಬ ಕಲ್ಯಾಣ ಯೋಜನೆ ಪರಿಹಾರ 233 % ಹೆಚ್ಚಳ, 10 ಲಕ್ಷಕ್ಕೆ ಏರಿದ ಮೊತ್ತ !
ksrtc staff death compensation amount increased from three lakh to ten lakh latest news
Ksrtc staff death compensation: ಕೆಎಸ್ಆರ್ಟಿಸಿ ನೌಕರರರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ (ksrtc staff death compensation) ಮೊತ್ತವನ್ನು 3 ಲಕ್ಷದಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.
ಸೇವಾ ಅವಧಿಯಲ್ಲಿ ಹೃದಯಾಘಾತ, ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಸ್ಟ್ರೋಕ್ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಅಪಘಾತ ಹೊರತುಪಡಿಸಿ ಉಳಿದ ಮೇಲಿನ ವಿಷಯದಲ್ಲಿ ಈ ಮೊತ್ತದ ಲಾಭ ಸಿಗಲಿದೆ.
ಪ್ರತಿವರ್ಷ ಸ್ಟ್ರೋಕ್, ಹೃದಯಾಘಾತ, ಕಿಡ್ನಿ ವೈಫಲ್ಯ, ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳಿಂದ ತಮ್ಮ ಸೇವಾವಧಿಯಲ್ಲೇ ಮರಣ ಹೊಂದುತ್ತಿರುವ ಸುಮಾರು 100ಕ್ಕೂ ಹೆಚ್ಚು ಪ್ರಕರಣಗಳು ನಿಗಮದಲ್ಲಿ ದಾಖಲಾಗುತ್ತಿವೆ. ಇದರಿಂದ ಕೆ ಎಸ್ ಆರ್ ಟಿ ಸಿ ನೌಕರರ ಕುಟುಂಬಕ್ಕೆ ದೊಡ್ಡ ಮಟ್ಟದ ಜೀವನ ಭದ್ರತೆ ಸಿಗಲಿದೆ.
ಅಪಘಾತದಿಂದ ಮೃತಪಟ್ಟ ಕೆಎಸ್ಆರ್ಟಿಸಿ ನೌಕರರ ಅವಲಂಬಿತರಿಗೆ ಈಗಾಗಲೇ 1 ಕೋಟಿ ರೂಪಾಯಿ ವಿಮಾ ಪರಿಹಾರ ಮೊತ್ತ ನೀಡಲಾಗಿದೆ. ಇದು ಭಾರತ ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಪರಿಹಾರ ನೀಡಲಾಗಿದೆ.
ಈ ಪರಿಷ್ಕೃತ ಆದೇಶವು ಇದೇ ನವೆಂಬರ್ 1 ರಿಂದ ಅನ್ವಯ ಆಗಲಿದೆ. ಅಲ್ಲಿಂದ ಮುಂದಕ್ಕೆ ಮರಣ ಹೊಂದುವ ಪ್ರಕರಣಗಳಿಗೆ ಇದು ಅನ್ವಯಿಸುತ್ತದೆ ಎಂದು ನಿಗಮ ತಿಳಿಸಿದೆ. ಈ ಯೋಜನೆಗೆ ಪೂರಕವಾಗಿ ನೌಕರರ ಮಾಸಿಕ ವಂತಿಕೆಯನ್ನು ಪ್ರಸ್ತುತ 100 ರೂಪಾಯಿಯಿಂದ 200 ರೂಪಾಯಿಗೆ ಹಾಗೂ ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುತ್ತಿರುವ 50 ರೂ. ವಂತಿಕೆಯನ್ನು 100 ರೂ.ಗೆ ಹೆಚ್ಚಿಸಲಾಗಿದೆ. ನೌಕರರ ವಂತಿಗೆ ಡಬಲ್ ಆದರೂ ಸರಿ, ಯೋಜನೆಯ ಮೊತ್ತ ಎರಡೂವರೆ ಪಟ್ಟು ಆಗಿರುವುದು ಮತ್ತು ಅದರಿಂದ ಕೆಎಸ್ಆರ್ಟಿಸಿ ಲೋಕದ ಕುಟುಂಬ ಹಲವು ಸೌಲಭ್ಯಗಳ ಭದ್ರತೆಯನ್ನು ಪಡೆಯುತ್ತಿರುವುದು ನೌಕರರಿಗೆ ಖುಷಿಯ ವಿಷಯ ಎನ್ನಬಹುದು.
ಇದನ್ನೂ ಓದಿ: EMI Repayment: EMI ಕಟ್ಟಲು ಕಷ್ಟ ಆಗ್ತಿದೆಯಾ ?! ಹಾಗಿದ್ರೆ ತಕ್ಷಣ ಈ 4 ಕೆಲಸ ಮಾಡಿ, ಸಮಸ್ಯೆಯಿಂದ ಪಾರಾಗಿ !!