Passport Renewal: ಪಾಸ್ ಪೋರ್ಟ್ ಯಾವಾಗ ರಿನೆವಲ್ ಮಾಡ್ಬೇಕು ಗೊತ್ತೇ ? ರೀನೇವಲ್ ಮಾಡಲು ಈ ಒಂದು ಡಾಕ್ಯುಮೆಂಟ್ಸ್ ಅತ್ಯಗತ್ಯ !
When to renew passport and these documents are essential for renewal
ಪ್ರತಿ 10 ವರ್ಷಕ್ಕೊಂದು ಬಾರಿ ಪಾಸ್ಪೋರ್ಟ್ ಅನ್ನು ರಿನಿವಲ್ ಮಾಡಬೇಕಾಗಿರುತ್ತದೆ. ಎಷ್ಟೋ ಸಲ ಪಾಸ್ಪೋರ್ಟ್ ರಿನಿವಲ್ ಮಾಡಲು ಹೋದಾಗ ಅನಿರೀಕ್ಷಿತ ತೊಂದರೆಗಳು ಉಂಟಾಗುತ್ತವೆ. ಪಾಸ್ಪೋರ್ಟ್ ನವೀಕರಣ ಮಾಡುವಾಗ, ನಮ್ಮ ಈಗಿರುವ ಪಾಸ್ ಪೋರ್ಟ್ ನ ಮಾಹಿತಿಗಳಿಗೂ ನಾವು ದಾಖಲಾತಿಗಾಗಿ ಕೊಡುವ ಮಾಹಿತಿಗಳಿಗೂ ಸರಿಯಾಗಿ ತಾಳೆ ಬರಬೇಕು. ಅಂದರೆ, ನಿಮ್ಮ ಹೆಸರು, ತಂದೆಯ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇತ್ಯಾದಿ ಮಾಹಿತಿಗಳು ನಿಮ್ಮ ಪಾಸ್ಪೋರ್ಟ್ ರಿನೇಬಲ್ ಗೆ ಅಗತ್ಯವಾಗಿರುತ್ತದೆ. ನೀವು ಪಾಸ್ಪೋರ್ಟ್ ಅನ್ನು ನವೀಕರಿಸಲು ಅಪ್ಲೈ ಮಾಡುವಾಗ ಈ ಹಿಂದೆ ಪಾಸ್ ಪೋರ್ಟ್ ನಲ್ಲಿ ಇರುವ ನಿಮ್ಮ ಹೆಸರು, ಅಪ್ಪನ ಹೆಸರು ಮತ್ತು ಹುಟ್ಟಿದ ದಿನಾಂಕಗಳು ಈಗ ನೀವು ಕೊಡುವ ಡಾಕ್ಯುಮೆಂಟ್ಗಳಿಗೆ ಸರಿಯಾಗಿ ಮ್ಯಾಚ್ ಆಗಬೇಕು. ಈ ಹಿಂದೆ ಪಾಸ್ ಪೋರ್ಟ್ ಗೆ ಕೊಟ್ಟ ಮಾದರಿಯಲ್ಲಿಯೇ ನಿಮ್ಮ ಹೊಸ ಡಾಕ್ಯುಮೆಂಟುಗಳು ಇರಬೇಕು. ಇಲ್ಲದೆ ಹೋದರೆ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗುವ ಸಂಭವ ಹೆಚ್ಚು.
ಹಾಗಾಗಿ ಪಾಸ್ಪೋರ್ಟ್ ಅನ್ನು ನವೀಕರಿಸುವ ಮೊದಲು ನಿಮ್ಮ ಈಗಿರುವ ಪಾಸ್ ಪೋರ್ಟ್ ನ ಜೊತೆ ನೀವು ಕೊಡಲು ಇಚ್ಚಿಸುವ ಡಾಕ್ಯುಮೆಂಟ್ ಗಳನ್ನು ಅಕ್ಕಪಕ್ಕ ಇಟ್ಟು ಯಾವುದೇ ಸ್ಪೆಲ್ಲಿಂಗ್ ಮಿಸ್ಟೇಕ್ ಕೂಡ ಇಲ್ಲದಂತೆ ನೋಡಿಕೊಳ್ಳುವುದು ಮುಖ್ಯ. ಅದು ಕೂಡ ಪಾಸ್ಪೋರ್ಟ್ ಗಳನ್ನು ಕೊನೆಯ ಹಂತದಲ್ಲಿ ರಿನೇವಲ್ ಮಾಡಿಸಬೇಡಿ ಇನ್ನು ಒಂದು ವರ್ಷ ಇರುವಂತೆಯೇ ನವೀಕರಿಸಲು ಸಿದ್ದರಾಗಿ. ಕೆಲವೊಮ್ಮೆ ನಮಗೆ ನಾವು ಊಹಿಸದ ರೀತಿಯಲ್ಲಿ ವಿದೇಶ ಪ್ರಯಾಣದ ಯೋಗ ಕೂಡಿಬರುತ್ತದೆ. ಆ ಸಂದರ್ಭದಲ್ಲಿ ಪಾಸ್ಪೋರ್ಟ್ ರೆನೇಬಲ್ ಮಾಡುತ್ತಾ ಕೂತರೆ ಅವಕಾಶ ವಂಚಿತ ಆಗುವುದು ಖಚಿತ. ಉದ್ಯೋಗ ಮುಂತಾದ ಕಾರಣಗಳಿಂದ ವಿದೇಶಕ್ಕೆ ಹೋಗುವಾಗ ಪಾಸ್ಪೋರ್ಟ್ ಕನಿಷ್ಠ ಆರು ತಿಂಗಳ ಮೇಲೆ ವ್ಯಾಲಿಡ್ ಇರಬೇಕು. ಇಲ್ಲದೆ ಹೋದರೆ ವೀಸಾ ದೊರೆಯುವುದಿಲ್ಲ. ಹಾಗಾಗಿ ನೀವು ನಿಮ್ಮ ಪಾಸ್ಪೋರ್ಟ್ ಅನ್ನು ನವೀಕರಿಸಲು ಹೊರಡುವ ಮುನ್ನ ಅತ್ಯಂತ ಜಾಗರೂಕತೆ ವಹಿಸಬೇಕು.
ನಿಮ್ಮ ಪಾಸ್ ಪೋರ್ಟ್ ನಲ್ಲಿ ಮತ್ತು ಅಥವಾ ನೀವು ಕೊಡಲಿಚ್ಚಿಸುವ ಆಧಾರ್ ಕಾರ್ಡ್ ವೋಟರ್ ಬಿಲ್ ಗ್ಯಾಸ್ ಬಿಲ್ ಮುಂತಾದ ವಿಳಾಸದ ಡಾಕ್ಯುಮೆಂಟುಗಳಲ್ಲಿ ತಪ್ಪು ಇದ್ದರೆ ಬದಲು ಇಂತಹ ಬೇಸ್ ಡಾಕ್ಯುಮೆಂಟ್ ಅಂದರೆ ಮೂಲ ದಾಖಲಾತಿಗಳನ್ನು ಸರಿಪಡಿಸಿಕೊಂಡು ನಂತರ ಪಾಸ್ಪೋರ್ಟ್ ರಿನಿವಲ್ ಗೆ ಹೊರಡುವುದು ಅತ್ಯಂತ ಸೂಕ್ತ. ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು ಅಥವಾ ಹುಟ್ಟಿದ ದಿನಾಂಕ, ವಿಳಾಸ ಇತ್ಯಾದಿಗಳು ನಿಮ್ಮ ಆಧಾರ್ ಕಾರ್ಡಿನಲ್ಲಿ ತಪ್ಪಾಗಿ ಮುದ್ರಿತವಾಗಿದ್ದರೆ ಆವಾಗ ನೀವು ಪಾಸ್ಪೋರ್ಟ್ ನವೀಕರಣ ಮಾಡುವ ಮೊದಲು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಒಂದು ಸಣ್ಣ ಸ್ಪೆಲ್ಲಿಂಗ್ ಮಿಸ್ಟೇಕ್ ಕೂಡಾ ಪಾಸ್ಪೋರ್ಟ್ ವಿಷಯದಲ್ಲಿ ದೊಡ್ಡ ಸಮಸ್ಯೆಯೇ. ಆಧಾರ್ ನಲ್ಲಿ ‘ಪದ್ಮ ಎ ಶೇಖರ್ ‘ ಅಂತ ಇದೆ ಅಂದುಕೊಳ್ಳಿ. ಅದೇ ಈಗಿರುವ ಪಾಸ್ ಪೋರ್ಟ್ ನಲ್ಲಿ ‘ಪದ್ಮ ಅನಂತ್ ಶೇಖರ್ ‘ ಎಂದಿದೆ ಅಂದುಕೊಳ್ಳಿ. ಇಲ್ಲಿ ಅನಂತ್ ಅನ್ನುವುದು ಅಪ್ಪನ ಹೆಸರು (ಮಿಡ್ಲ್ ನೇಮ್) ಎಂದು ಹೇಳಬಹುದು. ಆದರೆ ಟೆಕ್ನಿಕಲ್ ಆಗಿ ಆಧಾರ್ ನಲ್ಲಿರುವ ಹೆಸರು ಮತ್ತು ಪಾಸ್ ಪೋರ್ಟ್ ನಲ್ಲಿರುವ ಹೆಸರು ಬೇರೆ ಬೇರೆಯೇ. ಹಾಗಾಗಿ, ಪಾಸ್ಪೋರ್ಟ್ ರಿಜೆಕ್ಟ್ ಕೂಡ ಆಗಬಹುದು. ಅದೇ ಕಾರಣಕ್ಕೆ ಆಧಾರ್ ಮತ್ತು ಇತರ ಸಪೋರ್ಟಿಂಗ್ ದಾಖಲಾತಿಗಳನ್ನು ನೀಟ್ ಆಗಿ ಸರಿ ಮಾಡಿ ಇಟ್ಟುಕೊಳ್ಳಿ ಎಂದು ಹೇಳಿದ್ದು.
ಆಧಾರ್ ಕಾರ್ಡ್ ಅಪಡೇಷನ್ ಕೂಡ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕೇವಲ ವಿಳಾಸ ಬದಲಾವಣೆ ಇದ್ದರೆ ಎರಡು ಮೂರು ದಿನಗಳಲ್ಲಿ ಆಧಾರ್ ಅಪ್ಡೇಟ್ ಆಗಿ ಬರುತ್ತದೆ. ಆದರೆ ನಿಮ್ಮ ಹೆಸರಿನಲ್ಲಿ ಸಮಸ್ಯೆ, ತಂದೆಯ ಹೆಸರು, ಹುಟ್ಟಿದ ದಿನಾಂಕ ಮುಂತಾದ ಬದಲಾವಣೆಗಳು ಇದ್ದರೆ ಆಧಾರ್ ರೆಡಿ ಆಗಿ ಬರುವಾಗ ಕನಿಷ್ಠ ಒಂದು ವಾರ ತಗೊಳ್ಳುತ್ತದೆ. ಹಾಗಾಗಿ ಒಂದು ಬಾರಿ ನಿಮ್ಮ ಮೂಲಾ ದಾಖಲಾತಿಗಳನ್ನು ಪರಿಶೀಲಿಸಿಕೊಂಡು ಆಧಾರ್ ಕಾರ್ಡ್ ಸರಿ ಮಾಡಿದ ಬಳಿಕ ಪಾಸ್ಪೋರ್ಟ್ ಗೆ ಅಪ್ಲೈ ಮಾಡಿ ಇಲ್ಲದೆ ಹೋದರೆ ಪಾಸ್ಪೋರ್ಟ್ ಅಪ್ಲೈ ಮಾಡಿದ ನಂತರ ಅದು ರಿಜೆಕ್ಟ್ ಆದರೆ ಅಲ್ಲಿ ಮತ್ತೆ 3 ದಿನ ಕಾಯಬೇಕಾಗುತ್ತದೆ. ಕೆಲವು ಸಲ 3 ದಿನಗಳು ಕೂಡಾ ದೊಡ್ಡ ಕಾಲ ಸಮಯ. ಅಲ್ಲಿಯತನಕ ಅವಕಾಶಗಳು ಕಾದು ಕುಳಿತಿರುವುದು ದುರ್ಲಭ.