Dakshina Kannada KSRTC: 60 ಮಂದಿ ಹಿಡಿಸೋ ಬಸ್ಸನ್ನು ಏರಿದ್ದು ಬರೋಬ್ಬರಿ 150 ಮಂದಿ !! ಡ್ರೈವರ್ ಮಾಡಿದ್ದೇನು ಗೊತ್ತಾ ?!
Dakshina kannada KSRTC Bus driver refuses to drive a bus latest news
Dakshina Kannada KSRTC: ಕಡಬದಿಂದ ಪುತ್ತೂರಿಗೆ(Puttur)ತೆರಳುವ ಬಸ್ ನಲ್ಲಿ ಪ್ರಯಾಣಿಕರ ಓವರ್ ಲೋಡ್ ಕಂಡು ಕೆಎಸ್‌ಆರ್ ಟಿಸಿ (Dakshina Kannada KSRTC Bus)ಬಸ್ ಓಡಿಸಲು ಚಾಲಕ ನಿರಾಕರಿಸಿದ ಘಟನೆ ವರದಿಯಾಗಿದೆ.
ಇತ್ತೀಚೆಗೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಪುತ್ತೂರಿಗೆ ತೆರಳುವ ಬಸ್ಸನ್ನು ನಿಲ್ಲಿಸಿದ ಹಿನ್ನಲೆ ಬೆಳಗ್ಗಿನ ಆರಂಭಿಕ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಓವರ್ ಲೋಡ್ ಆಗಿತ್ತು. ಕಡಬದಿಂದ ಬಸ್ ಅಲಂಕಾರ್ ತಲುಪಿದಾಗ 130 ಮಂದಿ ಬಸ್ ಹತ್ತಿದ್ದರು. ಇದು ವಾಹನದ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಾಗಿದ್ದ ಹಿನ್ನೆಲೆ ಬಸ್ ನ ಟಯರ್ ಬ್ಲಾಸ್ಟ್ ಆದ ಘಟನೆ ಇತ್ತೀಚೆಗೆ ವರದಿಯಾಗಿದೆ. ಹೀಗಾಗಿ ಬಸ್ ಚಾಲಕನಿಗೆ 5,000 ದಂಡ ಕೂಡ ವಿಧಿಸಲಾಗಿದೆ. ಇದರಿಂದ ಭೀತಿಗೊಂಡ ಚಾಲಕ ಬಸ್ ಓಡಿಸಲು ನಿರಾಕರಿಸಿದ್ದಾನೆ.
ಕಡಬದಿಂದ ಪುತ್ತೂರಿಗೆ(Puttur)ತೆರಳುವ ಬಸ್ ನಲ್ಲಿ ಪ್ರಯಾಣಿಕರ ಓವರ್ ಲೋಡ್ ಕಂಡು ಕೆಎಸ್‌ಆರ್ ಟಿಸಿ (KSRTC Bus)ಬಸ್ ಓಡಿಸಲು ಚಾಲಕ ನಿರಾಕರಿಸಿದ್ದಾನೆ. ಈ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಹಾಕುವಂತೆ ಜನರು ಮನವಿ ಸಲ್ಲಿಸಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಕ್ಯಾರೆ ಮಾಡುತ್ತಿಲ್ಲ ಎನ್ನಲಾಗಿದೆ. ಮುಂಜಾನೆಯ ಬಸ್ಸಾದ ಹಿನ್ನೆಲೆ ಬಸ್ಸಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಇತರ ಪ್ರಯಾಣಿಕರೆಂದು ಸುಮಾರು 150 ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಅಪಾಯ ಸಂಭವಿಸುವ ಭೀತಿಯಲ್ಲಿ ಚಾಲಕ ಬಸ್ ಓಡಿಸಲು ಹಿಂದೂ ಮುಂದೂ ನೋಡಿದ್ದು, ಆ ಬಳಿಕ ಪ್ರಯಾಣಿಕ ಒಬ್ಬ ಡಿಪೋಗೆ ಕರೆ ಮಾಡಿ ವಿಷಯ ತಿಳಿಸಿದ ನಂತರ ಚಾಲಕ ಬಸ್ ಓಡಿಸಲು ಮುಂದಾಗಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ: Kochi Blast: ಕೇರಳ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್- ಟಿಫನ್ ಬಾಕ್ಸ್‌ನಲ್ಲಿತ್ತು ಭಯಾನಕ ಸ್ಫೋಟಕ !!