Dog Facts: ರಾತ್ರಿ ಹೊತ್ತು ನಾಯಿಗಳು ಅಳುತ್ತಾ, ಊಳಿಡುವುದೇಕೆ ?! ಶ್ವಾನಗಳಿಗೆ ಆಗ ಕಾಣೋದಾದ್ರೂ ಏನು ?!
why dogs crying in the night Intersting Facts news
Dog Facts: ನಾವು ಜೀವಿಸುವ ಪ್ರಕೃತಿಯ ಭೂಗರ್ಭದಲ್ಲಿ ಅದೆಷ್ಟು ರೋಚಕ ವಿಚಾರಗಳು ಅಡಗಿರುತ್ತವೆ. ಕೆಲವೊಂದು ವಿಸ್ಮಯಗಳು ನಮ್ಮನ್ನು ಮೂಕ ವಿಸ್ಮಿತಗೊಳಿಸುತ್ತವೆ. ಮನುಷ್ಯ ಸಂಘ ಜೀವಿ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಅದೆಷ್ಟೋ ಜನರಿಗೆ ಸಾಕು ಪ್ರಾಣಿಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿರುವುದಂತು ಸುಳ್ಳಲ್ಲ. ದಿನನಿತ್ಯದ ಜೀವನದಲ್ಲಿ ಸಾಕು ಪ್ರಾಣಿಗಳು ಒಬ್ಬ ಒಳ್ಳೆಯ ಸ್ನೇಹಿತನ ರೀತಿಯಲ್ಲಿ ಅವರ ಜೀವನದ ಗುಣಮಟ್ಟವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತವೆ.
ಮಕ್ಕಳಿಲ್ಲದ ಅದೆಷ್ಟೋ ಜನರು ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ ತಮಗೆ ಮಕ್ಕಳು ಇಲ್ಲವೆಂಬ ನೋವನ್ನು ಮರೆತು ಬಹಳ ಸಂತೋಷದಿಂದ ಜೀವನ ನಡೆಸುತ್ತಿರುವ ನಿದರ್ಶನಗಳಿವೆ. ಸಾಮಾನ್ಯವಾಗಿ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ (Dog)ಆದರೆ, ಇನ್ನೊಂದೆಡೆ ಪ್ರಾಣಿಗಳೆಂದರೆ ಸಾಕು!!!ಮೂಕ ಜೀವಿಗಳೆಂದು ಹಿಂಸೆ ನೀಡುವವರು ನಮ್ಮ ನಡುವೆ ಇದ್ದಾರೆ. ಆದರೆ, ನೀವೆಲ್ಲ ನಿಮ್ಮ ಸಾಕು ಪ್ರಾಣಿ ನಾಯಿಯ ಚಲನವಲನಗಳನ್ನ ಗಮನಿಸಿದ್ದರೆ,ನಾಯಿಗಳು ರಾತ್ರಿ ಹೊತ್ತು ಅಳುವುದನ್ನು (Dog Crying Facts)ಗಮನಿಸಿರಬಹುದು!! ಇದಕ್ಕೆ ಕಾರಣವೇನು ಗೊತ್ತಾ?
ರಾತ್ರಿಯಲ್ಲಿ ನಾಯಿಗಳು (Dogs)ತಮ್ಮ ಸುತ್ತ ಎಲ್ಲೋ ಆತ್ಮಗಳನ್ನು ಕಂಡರೆ ಅಳುತ್ತವೆ ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು!! ಆದರೆ ತಜ್ಞರ ಪ್ರಕಾರ ರಾತ್ರಿ ಹೊತ್ತಲ್ಲಿ ನಾಯಿ ಅಳಲು (Dogs Crying Facts)ಕೆಲವೊಂದು ಕಾರಣಗಳಿವೆ.
* ಹಗಲಿನಲ್ಲಿ ನಾಯಿಗೆ ಗಾಯವಾಗಿದ್ದರೆ, ಶೀತದಿಂದಾಗಿ ರಾತ್ರಿಯಲ್ಲಿ ಅದರ ನೋವು ಹೆಚ್ಚಾಗುತ್ತದೆ. ಹೀಗಾಗಿ, ನಾಯಿ ಗಳು ಜೋರಾಗಿ ಅಳುತ್ತವೆ.
* ಚಳಿಗಾಲದಲ್ಲಿ ರಾತ್ರಿಗಳು ದೀರ್ಘವಾಗಿರುವ ಹಿನ್ನೆಲೆ ನಾಯಿಗಳಿಗೆ ತಿನ್ನಲು ಏನೂ ಸಿಗದೆ ಹೋದಾಗ ಹಸಿವಿನಿಂದ ಅಳಲು ಪ್ರಾರಂಭಿಸುತ್ತವೆ.
* ತಜ್ಞರ ಪ್ರಕಾರ, ನಾಯಿಗಳಿಗೆ ವಯಸ್ಸಾದಂತೆ ಭಯದ ಭಾವನೆ ಬೆಳೆಯುತ್ತದಂತೆ. ಹೀಗಾಗಿ, ರಾತ್ರಿಯಲ್ಲಿ ಒಬ್ಬಂಟಿಯಾಗಿ, ಒಂಟಿತನ ಅನುಭವಿಸಿದಾಗ ನಾಯಿಗಳು ಅಳಲು ಪ್ರಾರಂಭಿಸುತ್ತವಂತೆ.
* ನಾಯಿಗಳು ಚಳಿಗಾಲದಲ್ಲಿ ತುಂಬಾ ಚಳಿಯನ್ನು ಅನುಭವಿಸುವಾಗ ಅಳುತ್ತವೆ. ಇದರ ಹೊರತಾಗಿ ನಾಯಿಗಳು ಇತರ ನಾಯಿಗಳಿಗೆ ಸಂದೇಶವನ್ನು ರವಾನಿಸಲು ಕೂಡ ರಾತ್ರಿ ಹೊತ್ತಲ್ಲಿ ಕೂಗುತ್ತವೆ.
* ನಾಯಿಗಳು ತಮ್ಮ ಹಿಂಡಿನಿಂದ ಬೇರ್ಪಟ್ಟ ಸಂದರ್ಭದಲ್ಲಿ ಇಲ್ಲವೇ ಸಾಕುನಾಯಿಯು ಅದರ ಮಾಲೀಕರಿಂದ ಬೇರ್ಪಟ್ಟ ಸಂದರ್ಭದಲ್ಲಿ ಸಾಮಾನ್ಯವಾಗಿ ರಾತ್ರಿಯಲ್ಲಿ ಜೋರಾಗಿ ಅಳುವುದಕ್ಕೆ ಆರಂಭಿಸುತ್ತದೆ.
ಇದನ್ನು ಓದಿ: Cooking Oil: ಅಪ್ಪಿ ತಪ್ಪಿಯೂ ಅಡಿಗೆ ಈ ಎಣ್ಣೆ ಬಳಸಬೇಡಿ- ಸ್ವಲ್ಪ ಯಾಮಾರಿದ್ರೂ ಜೀವಕ್ಕೇ ಅಪಾಯ