Cooking Oil: ಅಪ್ಪಿ ತಪ್ಪಿಯೂ ಅಡಿಗೆ ಈ ಎಣ್ಣೆ ಬಳಸಬೇಡಿ- ಸ್ವಲ್ಪ ಯಾಮಾರಿದ್ರೂ ಜೀವಕ್ಕೇ ಅಪಾಯ

Life style health care Tips these 5 oils You should not use while cooking latest news

Cooking Oil: ಆಹಾರದ ವಿಚಾರದಲ್ಲಿ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ಆರೋಗ್ಯದ (Health Issues)ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತದೆ. ಹೀಗೆ ಅಡುಗೆಗೆ ಬಳಸುವ ಎಣ್ಣೆ (Cooking Oil)ಆರೋಗ್ಯಕರವಾಗಿದೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ. ಅಪ್ಪಿ ತಪ್ಪಿಯೂ ಅಡಿಗೆ ಈ ಎಣ್ಣೆಗಳನ್ನು ಬಳಸಬೇಡಿ!! ಸ್ವಲ್ಪ ಯಾಮಾರಿದ್ರೂ ಜೀವಕ್ಕೇ ಅಪಾಯ ಕಟ್ಟಿಟ್ಟ ಬುತ್ತಿ!!

ಯಾವುದೇ ಅಡುಗೆಯಲ್ಲಿ(Cooking)ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಮಾತ್ರ ಬಳಸಲು ವೈದ್ಯರು (Doctors)ಶಿಫಾರಸ್ಸು ಮಾಡುವುದು ಸಹಜ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬಳಸುವುದರಿಂದ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಹೃದ್ರೋಗ ಸಮಸ್ಯೆಗಳಂತಹ ಆರೋಗ್ಯ ಸಮಸ್ಯೆಗಳನ್ನು ಉಂಟಾಗುತ್ತವೆ. ಹಾಗಿದ್ರೆ, ಯಾವುದೆಲ್ಲ ಎಣ್ಣೆ ಬಳಸುವುದು ಒಳ್ಳೆಯದಲ್ಲ? ಇಲ್ಲಿದೆ ನೋಡಿ ಡೀಟೈಲ್ಸ್!

# ಜೋಳದ ಎಣ್ಣೆ
ಕಾರ್ನ್ ಎಣ್ಣೆಯಲ್ಲಿ ಒಮೆಗಾ -6 ಕೊಬ್ಬಿನಾಮ್ಲ ಹೇರಳವಾಗಿದ್ದು, ಒಮೆಗಾ -6 ಕೊಬ್ಬಿನಾಮ್ಲ ಇರುವ ಹೆಚ್ಚಿನ ಆಹಾರ ಸೇವನೆಯು ಉರಿಯೂತ ಉಂಟು ಮಾಡುವ ಸಂಭವ ಹೆಚ್ಚಿದೆ. ಹೀಗಾಗಿ ಒಮೆಗಾ -6 ಸೇವನೆಯನ್ನು ಸಮತೋಲನಗೊಳಿಸಬೇಕಾಗುತ್ತದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

# ಆಲಿವ್ ಎಣ್ಣೆ
ಆರೋಗ್ಯ ಪ್ರಯೋಜನಗಳಿಂದ ಹೆಚ್ಚಿನ ಮಂದಿ ಆಲಿವ್ ಎಣ್ಣೆಯನ್ನು ಬಳಸುವುದು ಸಹಜ. ಆಲಿವ್ ಎಣ್ಣೆಯನ್ನು ಸಲಾಡ್ ಮತ್ತು ಭಕ್ಷ್ಯಗಳಲ್ಲಿ ಬಳಸಬಹುದು. ಆದರೆ, ಹೆಚ್ಚಿನ ಶಾಖದ ಅಡುಗೆಗಳಿಗೆ ಆಲಿವ್ ಎಣ್ಣೆ ಸೂಕ್ತವಲ್ಲ.

# ಕನೋಲಾ ಎಣ್ಣೆ
ಕನೋಲಾ ಎಣ್ಣೆ ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಬೇರೆ ಅಡುಗೆ ಎಣ್ಣೆಗಳಿಗೆ ಹೋಲಿಕೆ ಮಾಡಿದರೆ ಕ್ಯಾನೋಲಾ ಎಣ್ಣೆಯನ್ನು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಈ ಎಣ್ಣೆಯನ್ನು ಆಹಾರದಲ್ಲಿ ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕಾಗುತ್ತದೆ.

# ತಾಳೆ ಎಣ್ಣೆ
ಪಾಮ್ ಆಯಿಲ್ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದೆ. ಈ ಎಣ್ಣೆಯನ್ನು ಅತಿಯಾಗಿ ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.

#. ಸೋಯಾಬೀನ್ ಎಣ್ಣೆ
ಸೋಯಾಬೀನ್ ಎಣ್ಣೆಯು ಹೆಚ್ಚುವರಿ ಒಮೆಗಾ -6 ಕೊಬ್ಬಿನಾಮ್ಲಗಳ ಮೂಲವಾಗಿದೆ. ಶೇಖರಿಸಿದ ಮೀನು, ಅಗಸೆ ಬೀಜಗಳು ಮತ್ತು ವಾಲ್‌ನಟ್‌ಗಳಲ್ಲಿ ಒಮೆಗಾ-3 ಸಮೃದ್ಧವಾಗಿರುವ ಹಿನ್ನೆಲೆ ಸೋಯಾಬೀನ್ ಎಣ್ಣೆಯನ್ನು ಅತಿಯಾಗಿ ಬಳಸಿದರೆ ದೇಹಕ್ಕೆ ಸಮಸ್ಯೆ ಎದುರಾಗಬಹುದು. ಹೀಗಾಗಿ, ಸೋಯಾಬೀನ್ ಎಣ್ಣೆಯನ್ನು ಮಿತವಾಗಿ ಬಳಕೆ ಮಾಡಬೇಕು. ಇದರ ಬದಲಿಗೆ ತೆಂಗಿನ ಎಣ್ಣೆ, ಆವಕಾಡೊ ಎಣ್ಣೆ, ಶೆಂಗಾ ಎಣ್ಣೆ ಮತ್ತು ಎಳ್ಳಿನ ಎಣ್ಣೆಯಂತಹ ಆರೋಗ್ಯಕರ ಎಣ್ಣೆಯನ್ನು ಬಳಸಿ ಆರೋಗ್ಯವನ್ನು ಕಾಪಾಡಬಹುದು.

ಇದನ್ನು ಓದಿ: MLA Harish Poonja: ಮುಖ್ಯಮಂತ್ರಿಯನ್ನು ಕಲೆಕ್ಷನ್ ಮಾಸ್ಟರ್ ಎಂದ ಹರೀಶ್ ಪೂಂಜ : ಶಾಸಕರ ಮೇಲೆ FIR ದಾಖಲು

Leave A Reply

Your email address will not be published.