Vehicle Scrappage Policy: ಹಳೇ ವಾಹನಗಳಿರೋ ಮಾಲಿಕರಿಗೆ ಸಂತಸದ ವಿಚಾರ – ಸ್ಕ್ರ್ಯಾಪಿಂಗ್ ನೀತಿ ಕುರಿತು ಬಂತು ಬಿಗ್ ಅಪ್ಡೇಟ್ !!

National news big update on vehicles scrappage policy benefits on scrapped vehicles issues to be fixed

Vehicle Scrappage Policy: ವಾಹನಗಳು 15 ವರ್ಷಗಳಿಗಿಂತ ಹಳೆಯದಾದ ದುರಸ್ತಿ ಸ್ಥಿತಿಯಲ್ಲಿರುವ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ವಾಹನಗಳನ್ನು 2023 ಏಪ್ರಿಲ್ 1ರಿಂದ ಗುಜರಿಗೆ (Vehicle Scrappage Policy)ಹಾಕಲು ಆದೇಶಿಸಲಾಗಿದೆ. ಹೀಗಾಗಿ,1986ಕ್ಕೆ ಮೊದಲು ರಿಜಿಸ್ಟರ್ ಆಗಿರುವ ಬಳಸಲು ಯೋಗ್ಯವಲ್ಲದ ವಾಹನಗಳನ್ನು ರದ್ದಿಗೆ ಹಾಕಲಾಗುತ್ತಿದೆ. ರಾಜ್ಯದ ಮೊದಲ ರಿಜಿಸ್ಟರ್ಡ್ ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯದಲ್ಲಿ (RVSF) ಈಗಾಗಲೇ ಪ್ರಾರಂಭವಾಗಿದೆ.

15 ವರ್ಷಕ್ಕಿಂತ ಹಳೆಯ ವಾಹನಗಳು ರದ್ದಿಗೆ ರಿಯಾಯಿತಿಗಳನ್ನು ತಲುಪಿಸುವಲ್ಲಿ ಏಕರೂಪದ ವ್ಯವಸ್ಥೆಯನ್ನು ನಿರ್ವಹಿಸಲು, ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಸಾಫ್ಟ್ವೇರ್ ನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ತೆರಿಗೆ ರಿಯಾಯಿತಿಯ ‘ಸುಲಭ ಅನುಷ್ಠಾನದ ಮಾರ್ಗ’ವನ್ನು ಜಾರಿಗೆ ತರುವ ಬಗ್ಗೆ ಯೋಜನೆಗಳು ನಡೆಯುತ್ತಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1986 ರ ಮೊದಲು ನೋಂದಣಿಯಾದ ದ್ವಿಚಕ್ರ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ 500 ರೂಪಾಯಿ ವಿನಾಯಿತಿ ಸಿಗಲಿದೆ. ಅದೇ ರೀತಿ,1995 ರ ಮೊದಲು ನೋಂದಾಯಿಸಲಾದ ಲಘು ಮೋಟಾರು ವಾಹನಗಳಿಗೆ 3,000 ರೂಪಾಯಿಗಳನ್ನು ವಿನಾಯಿತಿ ದೊರೆಯಲಿದ್ದು, ಇದರಲ್ಲಿ ಕೊಂಚ ಬದಲಾವಣೆ ತರುವ ನಿರೀಕ್ಷೆಯಿದ್ದು, ಏಕರೂಪದ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ. ಇದರ ಜೊತೆಗೆ, ಹಳೆಯ ಸ್ಕ್ರ್ಯಾಪ್ಡ್ ವಾಹನಗಳ ಮಾಲೀಕರು ತಮ್ಮ ಆರ್ಟಿಒದಿಂದ (RTO)ಅನುಮೋದನೆ ಪಡೆಯಬೇಕು ಎಂಬ ನಿಯಮವನ್ನು ತೆಗೆದುಹಾಕಿ ಪ್ರಕ್ರಿಯೆಯನ್ನು ಹೆಚ್ಚು ಸುವ್ಯವಸ್ಥಿತಗೊಳಿಸಲಾಗುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ, (Scrapping Policy)2022 ರ ಅನುಸಾರ, ವಾಹನವನ್ನು ರದ್ದಿಗೆ ಹಾಕಿದ ಬಳಿಕ, ಅದರ ಮಾಲೀಕರಿಗೆ ‘ಸರ್ಟಿಫಿಕೇಟ್ ಆಫ್ ಡೆಪಾಸಿಟ್’ (COD) ನ್ನು ನೀಡಲಾಗುತ್ತದೆ. ಇದನ್ನು ಹೊಸ ವಾಹನ ಮತ್ತು ಇತರೆ ವಾಹನ ಖರೀದಿಸುವ ಸಂದರ್ಭ ತೆರಿಗೆ ರಿಯಾಯಿತಿಗಳನ್ನು ಪಡೆಯಲು ಬಳಕೆ ಮಾಡಬಹುದು.

ಇದನ್ನೂ ಓದಿ: DYSP: ರಾಜ್ಯದ ಈ ಪೋಲೀಸರಿಗೆ ಸಖತ್ ಗುಡ್ ನ್ಯೂಸ್ – DYSP ಹುದ್ದೆಗಳಿಗೆ ಬಡ್ತಿ ನೀಡಿ ಏಕಾಏಕಿ ಆದೇಶ ಹೊರಡಿಸಿದ ಸರ್ಕಾರ !!

Leave A Reply

Your email address will not be published.